5G ಡೇಟಾ, ಅನಿಯಮಿತ ಕರೆಗಳೊಂದಿಗೆ Netflix ಉಚಿತವಾಗಿ ಪಡೆಯಲು ಈ Jio ರಿಚಾರ್ಜ್ ಸಾಕು

Updated on 20-Apr-2023
HIGHLIGHTS

ರಿಲಯನ್ಸ್ ಜಿಯೋ (Reliance Jio) ನೆಟ್‌ಫ್ಲಿಕ್ಸ್ (Netflix) ವೀಕ್ಷಿಸಲು ನೀವು ಪ್ರತಿ ತಿಂಗಳು ರೀಚಾರ್ಜ್ ಮಾಡಬೇಕು.

ನೀವು ರಿಲಯನ್ಸ್ ಜಿಯೋ (Reliance Jio) ಬಳಕೆದಾರರಾಗಿದ್ದರೆ ನೆಟ್‌ಫ್ಲಿಕ್ಸ್ (Netflix) ಅನ್ನು ಉಚಿತವಾಗಿ ವೀಕ್ಷಿಸಬಹುದು.

ರಿಲಯನ್ಸ್ ಜಿಯೋ (Reliance Jio) ತನ್ನ ಕೆಲವು ಯೋಜನೆಗಳಲ್ಲಿ ಉಚಿತ ನೆಟ್‌ಫ್ಲಿಕ್ಸ್ (Netflix) ಚಂದಾದಾರಿಕೆಯನ್ನು ಒಳಗೊಂಡಿದೆ.

Netflix free with Jio: ನೀವು ಸಹ ದೇಶದ ನಂಬರ್ ಒನ್ ಟೆಲಿಕಾಂ ರಿಲಯನ್ಸ್ ಜಿಯೋ (Reliance Jio) ಬಳಕೆದಾರರಾಗಿದ್ದರೆ   ಮನೋರಂಜನೆಗಾಗಿ ಹೆಚ್ಚು ಡೇಟಾ ಅಥವಾ OTT ಅಪ್ಲಿಕೇಶನ್ಗಳನ್ನು ಪಡೆಯುವುದು ಕೊಂಚ ಕಿರಿಕಿರಿ ಉಂಟು ಮಾಡುತ್ತದೆ. ಏಕೆಂದರೆ ನೆಟ್‌ಫ್ಲಿಕ್ಸ್ ಒಂದು ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು ಸಿನಿಮಾ, ಸೀರಿಯಲ್, ಮತ್ತು ನಾಟಕಗಳನ್ನು ವೀಕ್ಷಿಸಲು ನೀವು ಪ್ರತಿ ತಿಂಗಳು ರೀಚಾರ್ಜ್ ಮಾಡಬೇಕು. ಆದರೆ ರಿಲಯನ್ಸ್ ಜಿಯೋ (Reliance Jio) ಬಳಕೆದಾರರಿಗೆ ನೆಟ್‌ಫ್ಲಿಕ್ಸ್ ತಿಂಗಳ ರೀಚಾರ್ಜ್‌ನ ಬೆಲೆ 149 ರೂ ಮತ್ತು ಪ್ರೀಮಿಯಂ ರೀಚಾರ್ಜ್ ಪ್ಯಾಕೇಜ್ 649 ರೂ ಆಗಿದೆ. ಅಂದ್ರೆ ಒಟ್ಟಾರೆಯಾಗಿ ನೀವು ರಿಲಯನ್ಸ್ ಜಿಯೋ ಬಳಕೆದಾರರಾಗಿದ್ದರೆ ನೆಟ್‌ಫ್ಲಿಕ್ಸ್ ಅನ್ನು ಉಚಿತವಾಗಿಯೇ  ವೀಕ್ಷಿಸಬಹುದು.

ಜಿಯೋ 799 ರೂ ಪ್ರಿಪೇಯ್ಡ್ ಯೋಜನೆ:

ಈ ರಿಲಯನ್ಸ್ ಜಿಯೋ (Reliance Jio) ಬಳಕೆದಾರರು ನೀವಾಗಿದ್ದರೆ ಯೋಜನೆಯು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊಗೆ ಉಚಿತ ಚಂದಾದಾರಿಕೆಯನ್ನು ನೀಡುವುದರ ಜೊತೆಗೆ ಒಟ್ಟಾರೆಯಾಗಿ 150GB ಡೇಟಾವನ್ನು ನೀಡುತ್ತದೆ. ಡೇಟಾ ಖಾಲಿಯಾದ ನಂತರ ಪ್ರತಿ GB ಡೇಟಾಗೆ 10 ರೂ ವೆಚ್ಚವಾಗುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 100 SMS  ಮತ್ತು ಅನ್‌ಲಿಮಿಟೆಡ್ ಕರೆಗಳ ಸೌಲಭ್ಯವು ಸಹ ನೀಡಲಾಗುತ್ತದೆ. ಈ ಯೋಜನೆಯಲ್ಲಿ ನೀವು ಎರಡು ಸಿಮ್‌ಗಳನ್ನು ಬಳಸಬಹುದು.

ಜಿಯೋ 999 ರೂ ಪ್ರಿಪೇಯ್ಡ್ ಯೋಜನೆ:

ಈ ರಿಲಯನ್ಸ್ ಜಿಯೋ (Reliance Jio) ಬಳಕೆದಾರರು ನೀವಾಗಿದ್ದರೆ ಯೋಜನೆಯಲ್ಲಿ ನಿಮಗೆ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ಗೆ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತದೆ. ಅಲ್ಲದೆ ಜಿಯೋದ ಈ ಯೋಜನೆಯು 200 GB ಡೇಟಾವನ್ನು ನೀಡುವುದರ ಜೊತೆಗೆ ನಿಮಗೆ ಪ್ರತಿದಿನ 100 SMS ಮತ್ತು ಅನ್‌ಲಿಮಿಟೆಡ್ ಕರೆಗಳನ್ನು ಸಹ ನೀಡುತ್ತದೆ. ಈ ಯೋಜನೆಯಲ್ಲಿ ನೀವು ಮೂರು ಸಿಮ್‌ಗಳನ್ನು ಬಳಸಬಹುದು.

ಜಿಯೋ 1,499 ರೂ ಯೋಜನೆ:

ಈ ರಿಲಯನ್ಸ್ ಜಿಯೋ (Reliance Jio) ಬಳಕೆದಾರರು ನೀವಾಗಿದ್ದರೆ ಈ ಯೋಜನೆಯು ಉಚಿತ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ನೀಡುತ್ತದೆ. ಅನ್‌ಲಿಮಿಟೆಡ್ ಕರೆ ಜೊತೆಗೆ ಈ ಯೋಜನೆಯು ಅಂತರರಾಷ್ಟ್ರೀಯ ರೋಮಿಂಗ್ ಆಯ್ಕೆಯನ್ನು ಸಹ ನೀಡುತ್ತದೆ. ಈ ಯೋಜನೆಯಲ್ಲಿ ಒಟ್ಟು 300GB ಡೇಟಾದ ಜೊತೆಗೆ 100 SMS ಲಭ್ಯವಿದೆ. ಆದರೆ ಇದು ಪೋಸ್ಟ್‌ಪೇಯ್ಡ್ ಯೋಜನೆ ಆಗಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :