Jio Plus: ಜಿಯೋ ಹೊಸ ಪೋಸ್ಟ್‌ಪೇಯ್ಡ್ ಕುಟುಂಬ ಯೋಜನೆಗಳನ್ನು ಬಿಡುಗಡೆ ಮಾಡಿದ್ದು ರಿಲಯನ್ಸ್ ಜಿಯೋ ವೆಲ್‌ಕಮ್ ಆಫರ್, ಡೇಟಾ ಹಂಚಿಕೆ, ಇಡೀ ಕುಟುಂಬಕ್ಕೆ ಒಂದೇ ಬಿಲ್, ಪ್ರೀಮಿಯಂ ಕಂಟೆಂಟ್ ಅಪ್ಲಿಕೇಶನ್‌ಗಳು ಮತ್ತು ಹೆಚ್ಚಿನವುಗಳ ಮೂಲಕ ಅನ್‌ಲಿಮಿಟೆಡ್ 5G ಡೇಟಾವನ್ನು ಹೊಂದಿದೆ. ರೂ 399 ರಿಂದ ಪ್ರಾರಂಭವಾಗುವ ಈ ಜಿಯೋ ಹೊಸ ಪೋಸ್ಟ್‌ಪೇಯ್ಡ್ ಕುಟುಂಬ ಯೋಜನೆಗಳನ್ನು ಒಂದು ತಿಂಗಳ ಉಚಿತ ಟ್ರಯಲ್ ಆಫರ್ ಮೂಲಕ ಪರಿಚಯಿಸಿದೆ. ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸಲು ಬಯಸುವ ಜಿಯೋ ಬಳಕೆದಾರರು ಟೆಲ್ಕೊದ ಪೋಸ್ಟ್‌ಪೇಯ್ಡ್ ಸೇವೆಗಳನ್ನು ಪ್ರಯತ್ನಿಸಲು ಉಚಿತ ಟ್ರಯಲ್ ಆಫರ್ ಲಾಭವನ್ನು ಪಡೆಯಬಹುದು.
ಜಿಯೋದ ಈ ಯೋಜನೆ ಅನ್‌ಲಿಮಿಟೆಡ್ ಕರೆ, SMS ಮತ್ತು ಒಟ್ಟು 75GB ಡೇಟಾವನ್ನು ನೀಡುತ್ತದೆ. ಈ ಯೋಜನೆಯೊಂದಿಗೆ ಬಳಕೆದಾರರು ಪ್ರತಿ ಸಿಮ್‌ಗೆ ರೂ 99 ಪಾವತಿಸುವ ಮೂಲಕ 3 ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ಪೋಸ್ಟ್‌ಪೇಯ್ಡ್ ಸಂಪರ್ಕವನ್ನು ಪಡೆಯಲು ಜಿಯೋ ಬಳಕೆದಾರರು ರೂ 500 ರ ಸೆಕ್ಯೂರಿಟಿ ಡೆಪಾಸಿಟ್ ಅನ್ನು ಪಾವತಿಸಬೇಕಾಗುತ್ತದೆ. JioFiber ಬಳಕೆದಾರರು ಕಾರ್ಪೊರೇಟ್ ಉದ್ಯೋಗಿಗಳು, ಪ್ರಸ್ತುತ ಜಿಯೋ ಅಲ್ಲದ ಪೋಸ್ಟ್‌ಪೇಯ್ಡ್ ಬಳಕೆದಾರರು, ಕ್ರೆಡಿಟ್ ಕಾರ್ಡ್ ಗ್ರಾಹಕರು ಮತ್ತು ಕ್ರೆಡಿಟ್ ಸ್ಕೋರ್‌ಗಳನ್ನು ಹೊಂದಿರುವ ಬಳಕೆದಾರರಿಗೆ ಡೆಪಾಸಿಟ್ ಅನ್ನು ಮನ್ನಾ ಮಾಡಲಾಗುತ್ತದೆ.
ಜಿಯೋದ ಈ ಯೋಜನೆಯ ಅನ್‌ಲಿಮಿಟೆಡ್ ಕರೆ, ಮತ್ತು SMS ಸೇವೆಗಳೊಂದಿಗೆ ಒಟ್ಟು 100GB ಡೇಟಾವನ್ನು ನೀಡುತ್ತದೆ. ಈ ಪ್ಯಾಕೇಜ್ ಉಚಿತ Netflix ಮತ್ತು Amazon Prime ಚಂದಾದಾರಿಕೆಯೊಂದಿಗೆ ಬರುತ್ತದೆ. ರೂ 99 ಕ್ಕೆ ಒಬ್ಬರು 3 ಸದಸ್ಯರನ್ನು ಸೇರಿಸಬಹುದು. ಸೆಕ್ಯೂರಿಟಿ ಡೆಪಾಸಿಟ್ ಅನ್ನು ಮನ್ನಾ ಮಾಡದ ಬಳಕೆದಾರರು ಈ ಹೊಸ ಸಂಪರ್ಕವನ್ನು ಪಡೆಯುವಾಗ ರೂ 875 ಪಾವತಿಸಬೇಕಾಗುತ್ತದೆ. ಹೊಸ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಸಕ್ರಿಯಗೊಳಿಸಿದಾಗ ಜಿಯೋ 99 ರೂಗಳ ಸಂಸ್ಕರಣಾ ಶುಲ್ಕವನ್ನು ವಿಧಿಸುತ್ತದೆ. ಉಚಿತ ಟ್ರಯಲ್ ಆಫರ್ನ ನಂತರ ಮತ್ತಷ್ಟು ಆಡ್-ಆನ್ ಫ್ಯಾಮಿಲಿ ಸಿಮ್‌ಗಳಿಗೆ ತಿಂಗಳಿಗೆ ರೂ 99 ಶುಲ್ಕ ವಿಧಿಸಲಾಗುತ್ತದೆ ಮತ್ತು ಪ್ರತಿ ಆಡ್-ಆನ್ ಫ್ಯಾಮಿಲಿ ಸಿಮ್‌ಗೆ ತಿಂಗಳಿಗೆ 5 GB ಡೇಟಾವನ್ನು ನೀಡಲಾಗುತ್ತದೆ.
➥ಹೊಸ ಜಿಯೋ ಪೋಸ್ಟ್‌ಪೇಯ್ಡ್ ಕುಟುಂಬ ಯೋಜನೆಯನ್ನು ಪಡೆದುಕೊಳ್ಳಲು ಇದನ್ನು ಅನುಸರಿಸಿ:
➥ಮೊದಲಿಗೆ ನಿಮ್ಮ WhatsApp ನಿಂದ Jio Plus ಜೊತೆಗೆ ಸೇರಲು 70000 70000 ನಂಬರ್ಗೆ ಮಿಸ್ಡ್ ಕಾಲ್ ಮಾಡಿ.
➥ಸೆಕ್ಯೂರಿಟಿ ಡೆಪಾಸಿಟ್ ಮನ್ನಾ ಪಡೆಯಲು ಸೂಕ್ತವಾದ ಆಯ್ಕೆಯನ್ನು ಆರಿಸಿ.
➥ನಿಮ್ಮ ಪೋಸ್ಟ್‌ಪೇಯ್ಡ್ ಸಿಮ್‌ನ ಉಚಿತ ಹೋಮ್ ಡೆಲಿವರಿಯನ್ನು ಬುಕ್ ಮಾಡಿ..
➥ಹೋಮ್ ಡೆಲಿವರಿ ನಂತರ ಇನ್ನೂ 3 ಸಿಮ್‌ಗಳನ್ನು ಕುಟುಂಬದವರಿಗಾಗಿ ಅಥವಾ ನಿಮ್ಮ ಪ್ರೀತಿ ಪಾತ್ರರಿಗಾಗಿ ಪಡೆಯಿರಿ.
➥ಇದರಲ್ಲಿ @99/SIM ಆಕ್ಟಿವೇಶನ್ ಪ್ರೊಸೆಸಿಂಗ್ ಶುಲ್ಕವನ್ನು ಪಾವತಿಸಿ.
➥ಮಾಸ್ಟರ್ ಫ್ಯಾಮಿಲಿ ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರ ಇತರ 3 ಕುಟುಂಬದ ಸದಸ್ಯರನ್ನು ನಿಮ್ಮ ಖಾತೆಗೆ ಲಿಂಕ್ ಮಾಡಲು ಮತ್ತು ಉಚಿತವಾಗಿ ಪ್ರಯೋಜನಗಳನ್ನು ಹಂಚಿಕೊಳ್ಳಲು My Jio ಅಪ್ಲಿಕೇಶನ್ ಬಳಸಬಹುದು.