Jio Netflix Plan: ದಿನದಿಂದ ದಿನಕ್ಕೆ ಹೆಚ್ಚಿತ್ತಿರುವ ಬೆಲೆ ಏರಿಕೆಯ ಹಿನ್ನಲೆಯಲ್ಲಿ ರಿಲಯನ್ಸ್ ಜಿಯೋ ತಮ್ಮ ಬಳಕೆದಾರರಿಗೆ ಅಗತ್ಯವಿರುವ ಬೆಲೆ ಮತ್ತು ಪ್ರಯೋಜನಗಳಿಗೆ ಅನುಗುಣವಾಗಿ ಅನೇಕ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಅದರಲ್ಲಿ ಒಂದಾಗಿರುವ ಈ ರಿಚಾರ್ಜ್ ಯೋಜನೆಯಲ್ಲಿ ಬರೋಬ್ಬರಿ 252GB ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು 3 ತಿಂಗಳಿಗೆ ಉಚಿತ Netflix ನೀಡುವ ಈ Jio ಪ್ಲಾನ್ ಬೆಲೆ ಮತ್ತು ವ್ಯಾಲಿಡಿಟಿ ಎಷ್ಟು? ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರವನ್ನು ಈ ಕೆಳಗೆ ವಿವರಿಸಲಾಗಿದೆ.
ರಿಲಯನ್ಸ್ ಜಿಯೋ ನೀಡುವ ಈ ಪ್ರಿಪೇಯ್ಡ್ ಯೋಜನೆಯು ರೂ 1799 ವೆಚ್ಚವಾಗಿದ್ದು 84 ದಿನಗಳ ಪ್ಯಾಕ್ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ನೀಡಲಾದ ಒಟ್ಟು ಡೇಟಾ 252GB ಆಗಿದೆ. ಬಳಕೆದಾರರು ಪ್ರತದಿನ 3GB ಫಾಸ್ಟ್ ಡೇಟಾವನ್ನು ಪಡೆಯುತ್ತಾರೆ. ಅಲ್ಲದೆ ಈ ಯೋಜನೆಯನ್ನು ರೀಚಾರ್ಜ್ ಮಾಡಿದ ನಂತರ ಬಳಕೆದಾರರು ಅನಿಯಮಿತ ಸಮಯದವರೆಗೆ ಮಾತನಾಡಬಹುದು. ದೈನಂದಿನ SMS ಮಿತಿ 100 SMS ಆಗಿದೆ.
ಈ ಯೋಜನೆ ಯಾಕೆ ಬೆಸ್ಟ್ ಎಂದು ಕೇಳುವವರಿಗೆ ಹೇಳುವುದಾದರೆ ಕನ್ನಡ ಸೇರಿದಂತೆ ಅನೇಕ ಲೇಟೆಸ್ಟ್ ಮತ್ತು ಅತಿ ಹೆಚ್ಚು ಸಿನಿಮಾಗಳು ಈ Netflix ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿರುವ ಕಾರಣವಾಗಿದೆ. OTT ಅಪ್ಲಿಕೇಶನ್ಗಳಿಗೆ ಚಂದಾದಾರಿಕೆಯನ್ನು ನೀಡುವ ಅನೇಕ ಬಂಡಲ್ ಯೋಜನೆಗಳನ್ನು ನೀಡುತ್ತಿದೆ. ನೀವು ಚಲನಚಿತ್ರಗಳು, ಟಿವಿ ಸರಣಿಗಳು ಅಥವಾ ಕ್ರೀಡೆಗಳನ್ನು ಸ್ಟ್ರೀಮಿಂಗ್ ಮಾಡುವ ಹವ್ಯಾಸವನ್ನು ಹೊಂದಿರುವವರಾಗಿದ್ದರೆ OTT ಪ್ರಯೋಜನದೊಂದಿಗೆ ರೀಚಾರ್ಜ್ ಯೋಜನೆಗಳು ನಿಮಗಾಗಿ ಉದ್ದೇಶಿಸಲಾಗಿದೆ.
ಈ ಬಂಡಲ್ ಯೋಜನೆಗಳು OTT ಅಪ್ಲಿಕೇಶನ್ಗಳಿಗೆ ಸ್ವತಂತ್ರ ಚಂದಾದಾರಿಕೆಯನ್ನು ತೆಗೆದುಕೊಳ್ಳುವುದರಿಂದ ಸ್ವಾತಂತ್ರ್ಯವನ್ನು ನೀಡುತ್ತವೆ. ಈ ಮೂಲಕ ನೀವು ಯಾವುದೇ ಹೆಚ್ಚುವರಿ ಹಣ ಖರ್ಚು ಮಾಡದೇ ಈ ನಿಮ್ಮ ರಿಚಾರ್ಜ್ ಯೋಜನೆಯಲ್ಲೇ ಸುಮಾರು 3 ತಿಂಗಳಿಗೆ ಈ ನೆಟ್ಫ್ಲಿಕ್ಸ್ ಚಂದಾದಾರಿಕೆಯನ್ನು ಪಡೆಯಬಹುದು.
Also Read: PAN Card ಕಳೆದೊಗಿದ್ರೆ ಅಥವಾ ಡ್ಯಾಮೇಜ್ ಆಗಿದ್ರೆ ಮುಂದೇನು ಮಾಡೋದು? ಈ ರೀತಿ ಮತ್ತೆ ಪಡೆಯಬಹುದು
ಈ ಯೋಜನೆಯಲ್ಲಿ ಬಳಕೆದಾರರು Netflix (Basic) ಜೊತೆಗೆ ಮತ್ತೆ ಅನೇಕ JioTV, JioCinema ಮತ್ತು JioCloud ಗೆ ಚಂದಾದಾರಿಕೆಯನ್ನು ಪಡೆಯುತ್ತಾರೆ. ಈ ಯೋಜನೆಯಡಿಯಲ್ಲಿ ಬಳಕೆದಾರರು ಅನಿಯಮಿತ 5G ಡೇಟಾ ಪ್ರಯೋಜನವನ್ನು ಸಹ ಪಡೆಯುತ್ತಾರೆ.