ಭಾರತದಲ್ಲಿ ಮನೋರಂಜನೆಗಾಗಿ OTT ಅಪ್ಲಿಕೇಶನ್‌ಗಳನ್ನು ಬಳಸುವ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗ ನೆಟ್‌ಫ್ಲಿಕ್ಸ್‌ನೊಂದಿಗೆ ಕೈ ಜೋಡಿಸಿರುವ ರಿಲಯನ್ಸ್ ಜಿಯೋ ತಮ್ಮ ಬಳಕೆದಾರರಿಗೆ ಅತ್ಯತ್ತಮ ಪ್ರಿಪೇಯ್ಡ್ ಆಫರ್ಗಳನ್ನು ನೀಡುತ್ತಿದೆ. ಬಳಕೆದಾರರು ಈಗ ಒಂದೇ ಮೊಬೈಲ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯೊಂದಿಗೆ Unlimited ಕರೆ, ಡೇಟಾ, SMS ಜೊತೆಗೆ OTT ಸೇವೆಗಳನ್ನು ಸಹ ಪಡೆಯಬಹುದು. ಅಂದ್ರೆ ಈಗ ಜಿಯೋ ಪ್ರಿಪೇಯ್ಡ್ ಗ್ರಾಹಕರು ನಿಮ್ಮ ಮೊಬೈಲ್ ರಿಚಾರ್ಜ್ನಲ್ಲೆ Netflix ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಈ ಲೇಖನದಲ್ಲಿ ನೆಟ್‌ಫ್ಲಿಕ್ಸ್‌ನೊಂದಿಗೆ ಹೊಸದಾಗಿ ಪ್ರಾರಂಭಿಸಲಾದ ಜಿಯೋ ರೀಚಾರ್ಜ್ 1099 ಮತ್ತು 1499 ರೂಗಳ ಯೋಜನೆಯ ಸಂಪೂರ್ಣ ವಿವರಗಳನ್ನು ನೀಡಿದ್ದೇನೆ. ಹೆಚ್ಚುವರಿಯಾಗಿ ನಿಮ್ಮ ಜಿಯೋ ನೆಟ್‌ಫ್ಲಿಕ್ಸ್ ರೀಚಾರ್ಜ್ ಯೋಜನೆಯನ್ನು ಆಕ್ಟಿವೇಟ್ ಮಾಡುವುದು ಹೇಗೆ ಎಂಬುದನ್ನು ಸಹ ತಿಳಿಯಿರಿ.
ರಿಲಯನ್ಸ್ ಜಿಯೋದ ಈ ಹೊಸ ಜಿಯೋ ಪ್ರಿಪೇಯ್ಡ್ ಯೋಜನೆ ಬಳಕೆದಾರರಿಗೆ 84 ದಿನಗಳ ಮಾನ್ಯತೆಯನ್ನು ನೀಡುತ್ತವೆ. ಅಲ್ಲದೆ 1,099 ಜಿಯೋ ಪ್ರಿಪೇಯ್ಡ್ ಯೋಜನೆಯೊಂದಿಗೆ ರೀಚಾರ್ಜ್ ಮಾಡುವವರು ಅನಿಯಮಿತ ಧ್ವನಿ ಕರೆ ಮತ್ತು 2GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಅಲ್ಲದೆ Jio ವೆಲ್ಕಮ್ ಆಫರ್‌ನ ಭಾಗವಾಗಿ Jio ಅನಿಯಮಿತ 5G ಡೇಟಾವನ್ನು ಸಹ ನೀಡುತ್ತಿದೆ. Jio ಈ ಯೋಜನೆಯೊಂದಿಗೆ ಉಚಿತ Netflix ಮೊಬೈಲ್ ಚಂದಾದಾರಿಕೆಯನ್ನು ಒಟ್ಟುಗೂಡಿಸುತ್ತಿದೆ.
ಇದರ ಎರಡನೇಯ ಹೊಸ ಜಿಯೋ ಪ್ರಿಪೇಯ್ಡ್ ಯೋಜನೆ ಬಗ್ಗೆ ಮಾತನಾಡುವುದಾದರೆ ಇದು ಸಹ 84 ದಿನಗಳ ಮಾನ್ಯತೆಯನ್ನು ನೀಡುತ್ತವೆ. ಅಲ್ಲದೆ ಆದರೆ ಬೆಲೆ ಮಾತ್ರ 1499 ರುಗಳಾಗಿದೆ. ಇದರಲ್ಲಿ ನಿಮಗೆ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 3GB ದೈನಂದಿನ ಡೇಟಾದೊಂದಿಗೆ SMS ಸೌಲಭ್ಯವನ್ನು ಸಹ ಪಡೆಯುತ್ತಾರೆ. ಅಲ್ಲದೆ Jio ವೆಲ್ಕಮ್ ಆಫರ್‌ನ ಭಾಗವಾಗಿ Jio ಅನಿಯಮಿತ 5G ಡೇಟಾವನ್ನು ಸಹ ನೀಡುತ್ತಿದೆ. Jio ಈ ಯೋಜನೆಯೊಂದಿಗೆ ಉಚಿತ Netflix ಮೊಬೈಲ್ ಚಂದಾದಾರಿಕೆಯನ್ನು ಒಟ್ಟುಗೂಡಿಸುತ್ತಿದೆ.
➥ಮೊದಲಿಗೆ ನೀವು ರಿಲಯನ್ಸ್ ಜಿಯೋ ವೆಬ್‌ಸೈಟ್‌ಗೆ ಅಥವಾ MyJio ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ
➥ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಲಾಗ್ ಇನ್ ಮಾಡಿ ಅಥವಾ ನೋಂದಾಯಿಸಿ
➥ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ಜಿಯೋ ಹೊಸದಾಗಿ ಪ್ರಾರಂಭಿಸಲಾದ ರೂ.1099 ಮತ್ತು ರೂ.1499 ಯೋಜನೆಗಳಿಂದ ಒಂದನ್ನು ಆರಿಸಿಕೊಳ್ಳಿ
➥ಇದರ ಯಶಸ್ವಿ ರೀಚಾರ್ಜ್ ಮಾಡಿದ ನಂತರ Netflix Activate Now ಎಂಬ ಬ್ಯಾನರ್ ಹುಡುಕಿ
➥ಇದರ ನಂತರ ನೇರವಾಗಿ ಮುಂದೆ ನೀಡಿರುವ 'Activate Now' ಮೇಲೆ ಕ್ಲಿಕ್ ಮಾಡಿ ಅಷ್ಟೇ
➥ಈಗ ನಿಮ್ಮ ನೋಂದಾಯಿತ ಜಿಯೋ ಮೊಬೈಲ್ ಸಂಖ್ಯೆಯೊಂದಿಗೆ ಲಾಗ್ ಇನ್ ಮಾಡಿ ಉಚಿತ Netflix ಸ್ಟ್ರೀಮಿಂಗ್ ಅನ್ನು ಆನಂದಿಸಿ.
ಜಿಯೋ ರೀಚಾರ್ಜ್ ಕೂಪನ್ ಕೋಡ್‌ಗಳು ಮತ್ತು ಕೊಡುಗೆಗಳೊಂದಿಗೆ ನೆಟ್‌ಫ್ಲಿಕ್ಸ್‌ನೊಂದಿಗೆ ಹೊಸದಾಗಿ ಬಿಡುಗಡೆಯಾದ ಜಿಯೋ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಹಂಚಿಕೊಳ್ಳುವುದು, ಜಿಯೋ ವರ್ಸಸ್ ಏರ್‌ಟೆಲ್ ರೀಚಾರ್ಜ್ ಪ್ಲಾನ್‌ಗಳನ್ನು ನೆಟ್‌ಫ್ಲಿಕ್ಸ್‌ನೊಂದಿಗೆ ಹೋಲಿಸುವುದು ಮತ್ತು ಕೊನೆಯದಾಗಿ ಜಿಯೋ ರೀಚಾರ್ಜ್ 1099 ಮತ್ತು 1499 ರೂಗಳ ಯೋಜನೆಯ ಬಳಸಿಕೊಂಡು ನಿಮ್ಮ ಜಿಯೋ ಮೊಬೈಲ್ ಸಂಖ್ಯೆಯಲ್ಲಿ ಉಚಿತ ನೆಟ್‌ಫ್ಲಿಕ್ಸ್ ಅನ್ನು ಸಕ್ರಿಯಗೊಳಿಸಬಹುದು. ಪ್ರಿಪೇಯ್ಡ್ ಯೋಜನೆಯಲ್ಲಿ ಕಾಂಪ್ಲಿಮೆಂಟರಿ ನೆಟ್‌ಫ್ಲಿಕ್ಸ್ ಬಂಡಲ್ ಚಂದಾದಾರಿಕೆಯನ್ನು ನೀಡುವ ಮೊದಲ ಟೆಲಿಕಾಂ ಕಂಪನಿ ಈ ಜಿಯೋ ಆಗಿದೆ.