ರಿಲಯನ್ಸ್ ಜಿಯೋ ಜಿಯೋಫೋನ್ ಬಳಕೆದಾರರಿಗಾಗಿ ಹೊಸ ವಾರ್ಷಿಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಜಿಯೋದಿಂದ ಇತ್ತೀಚಿನ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಕಂಪನಿಯು 336 ದಿನಗಳ ಮಾನ್ಯತೆಯ ಅವಧಿಯೊಂದಿಗೆ 504 GB ಡೇಟಾವನ್ನು ನೀಡುತ್ತಿದೆ. ಯೋಜನೆಗಳಲ್ಲಿ ಅನಿಯಮಿತ ಆನ್-ನೆಟ್ ಕರೆ ಕೂಡ ಸೇರಿದೆ. ವಾರ್ಷಿಕ ಜಿಯೋಫೋನ್ ಯೋಜನೆ ಬೆಲೆಗಳು 1,001 ರೂಗಳಿಂದ ಪ್ರಾರಂಭವಾಗುತ್ತವೆ. ಈಗ ಬಳಕೆದಾರರು ತಮ್ಮ ಜಿಯೋಫೋನ್ ಅನ್ನು ಮಾಸಿಕ ಆಧಾರದ ಮೇಲೆ ರೀಚಾರ್ಜ್ ಮಾಡಲು ಬಯಸದಿದ್ದರೆ ಅವರು ವಾರ್ಷಿಕ ಯೋಜನೆಯನ್ನು ಖರೀದಿಸಬಹುದು. ರಿಲಯನ್ಸ್ ಜಿಯೋ ಜಿಯೋಫೋನ್ ಹೊಸ ವಾರ್ಷಿಕ ಯೋಜನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.
ಮೊದಲಾಗಿ 1001 ರೂಗಳ ಜಿಯೋಫೋನ್ ಯೋಜನೆಯು ಅನಿಯಮಿತ ಜಿಯೋ ಟು ಜಿಯೋ ಕರೆ ಮತ್ತು 100 ದೈನಂದಿನ ಎಸ್‌ಎಂಎಸ್‌ಗಳೊಂದಿಗೆ ಬರುತ್ತದೆ. ಇದು 150MB ಯ ದೈನಂದಿನ ಡೇಟಾ ಮಿತಿಯೊಂದಿಗೆ ಇಡೀ ವರ್ಷ 49GB 4G ಡೇಟಾವನ್ನು ಸಹ ಒಳಗೊಂಡಿದೆ. ಜಿಯೋ ಅಲ್ಲದ ಸಂಖ್ಯೆಗಳಿಗೆ ನೀವು 12,000 ನಿಮಿಷಗಳ ಎಫ್‌ಯುಪಿ ಮಿತಿಯನ್ನು ಪಡೆಯುತ್ತೀರಿ.
ಎರಡನೇಯದಾಗಿ 1301 ರೂಗಳ ಜಿಯೋಫೋನ್ ಯೋಜನೆಯು ವರ್ಷಕ್ಕೆ 164 GB ಯ 4G ಡೇಟಾವನ್ನು ದೈನಂದಿನ 500mb ಡೇಟಾ ಮಿತಿಯೊಂದಿಗೆ ನೀಡುತ್ತದೆ. ಜಿಯೋ ಅಲ್ಲದ ಸಂಖ್ಯೆಗಳಿಗೆ ಕಂಪನಿಯು 12,000 ನಿಮಿಷಗಳನ್ನು ಮತ್ತು 100 ಉಚಿತ ಎಸ್‌ಎಂಎಸ್ ನೀಡುತ್ತಿದೆ.
ಮೂರನೇಯದಾಗಿ ಜಿಯೋಫೋನ್ ವಾರ್ಷಿಕ ಯೋಜನೆಯ ಬೆಲೆ 1501 ರೂಗಳಾಗಿವೆ. ಇತರ ಪ್ರಿಪೇಯ್ಡ್ ಯೋಜನೆಗಳಿಗಿಂತ ಭಿನ್ನವಾಗಿ ಇದು ಪ್ರತಿದಿನ 1.5GB ಡೇಟಾವನ್ನು ನೀಡುತ್ತದೆ. ಇದರರ್ಥ ಜಿಯೋ ನಿಮಗೆ 336 ದಿನಗಳವರೆಗೆ ಒಟ್ಟು 504GB ಡೇಟಾವನ್ನು ನೀಡುತ್ತದೆ.
ಇದು ಮೇಲೆ ತಿಳಿಸಿದ ಯೋಜನೆಗಳಂತೆಯೇ ಜಿಯೋ ಅಲ್ಲದ ಸಂಖ್ಯೆಗಳಿಗೆ 12,000 ನಿಮಿಷಗಳ ಎಫ್‌ಯುಪಿ ಮಿತಿಯೊಂದಿಗೆ ಅನಿಯಮಿತ ಜಿಯೋ ಟು ಜಿಯೋ ಕರೆಗಳನ್ನು ಸಹ ಒಳಗೊಂಡಿದೆ. ಜಿಯೋಫೋನ್ ಬಳಕೆದಾರರಿಗೆ 100 ಉಚಿತ ಎಸ್‌ಎಂಎಸ್ ಸಹ ಸಿಗುತ್ತದೆ. ಎಲ್ಲಾ ಯೋಜನೆಗಳ ವ್ಯಾಲಿಡಿಟಿ 336 ದಿನಗಳು ಎಂದು ಬೇರೆ ಹೇಳಬೇಕಾಗಿಲ್ಲ. ಹೊಸ ವಾರ್ಷಿಕ ಯೋಜನೆಗಳನ್ನು ಅಧಿಕೃತ ಸೈಟ್‌ನಲ್ಲಿ ಇನ್ನೂ ಪಟ್ಟಿ ಮಾಡಲಾಗಿಲ್ಲ ಮತ್ತು ಮಾಹಿತಿ ಟೆಲಿಕಾಂಟಾಕ್‌ನಿಂದ ಬಂದಿದೆ.
Jio ಗ್ರಾಹಕರು ನೀವಾಗಿದ್ದರೆ ನಿಮ್ಮ ನಂಬರ್‌ಗೆ ಲಭ್ಯವಿರುವ ಇತ್ತೀಚಿನ ಬೆಸ್ಟ್ ರಿಚಾರ್ಜ್ ಪ್ಲಾನ್‌ಗಳನೊಮ್ಮೆ ನೋಡ್ಕೊಳ್ಳಿ.