Jio True 5G: ರಿಲಯನ್ಸ್ ಜಿಯೋ ಇಂದು ಉತ್ತರ ಕರ್ನಾಟಕದಲ್ಲೂ ತನ್ನ Jio True 5G ನೆಟ್ವರ್ಕ್ ಸೇವೆಯನ್ನು ಶುರುಮಾಡಿದೆ. ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿ (ಕರ್ನಾಟಕ), ಕಾಕಿನಾಡ, ಕರ್ನೂಲ್ (ಆಂಧ್ರಪ್ರದೇಶ), ಸಿಲ್ಚಾರ್ (ಅಸ್ಸಾಂ), ಮಲಪ್ಪುರಂ ಸೇರಿದಂತೆ 16 ನಗರಗಳಲ್ಲಿ ರಿಲಯನ್ಸ್ ಜಿಯೋ ಇಂದು (ಜನವರಿ 17ರ ಸೋಮವಾರ) ತನ್ನ ಟ್ರೂ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರಲ್ಲಿ ಪಾಲಕ್ಕಾಡ್, ಕೊಟ್ಟಾಯಂ, ಕಣ್ಣೂರು (ಕೇರಳ), ತಿರುಪ್ಪೂರ್ (ತಮಿಳುನಾಡು), ನಿಜಾಮಾಬಾದ್, ಖಮ್ಮಂ (ತೆಲಂಗಾಣ), ಮತ್ತು ಬರೇಲಿ (ಉತ್ತರ ಪ್ರದೇಶ) ಸಹ ಒಳಗೊಂಡಿದೆ.
ರಿಲಯನ್ಸ್ ಜಿಯೋ ಇಂದು ಕರ್ನಾಟಕದ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿ ಮತ್ತು ಇತರ 11 ನಗರಗಳಲ್ಲಿ ಟ್ರೂ 5ಜಿ ಸೇವೆಗಳ ಬಹು-ರಾಜ್ಯ ಬಿಡುಗಡೆಯನ್ನು ಘೋಷಿಸಿದೆ. ರಿಲಯನ್ಸ್ ಜಿಯೋ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿಯಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಇಂದಿನಿಂದ ಪ್ರಾರಂಭವಾಗುವ ಸೇವೆಯನ್ನು ಪಡೆಯುವುದಕ್ಕೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ. 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್ ಕಮ್ ಕೊಡುಗೆಗೆ ಆಹ್ವಾನಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಯೋ ವಕ್ತಾರರು “7 ರಾಜ್ಯಗಳಾದ್ಯಂತ 16 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಬಿಡುಗಡೆ ಮಾಡಲು ನಾವು ಹೆಮ್ಮೆಪಡುತ್ತೇವೆ. ಇದರೊಂದಿಗೆ ಒಟ್ಟು ಸಂಖ್ಯೆಯನ್ನು 134 ನಗರಗಳಿಗೆ ಕೊಂಡೊಯ್ದಿದ್ದೇವೆ. 2023ರ ಹೊಸ ವರ್ಷದಲ್ಲಿ ಜಿಯೋ ಟ್ರೂ 5ಜಿ ತಂತ್ರಜ್ಞಾನದ ರೂಪಾಂತರದ ಪ್ರಯೋಜನಗಳನ್ನು ಪ್ರತಿ ಜಿಯೋ ಬಳಕೆದಾರರು ಆನಂದಿಸಲು ನಾವು ಬಯಸುತ್ತೇವೆ. ಏಕೆಂದರೆ ನಾವು ದೇಶದಾದ್ಯಂತ ಟ್ರೂ 5ಜಿ ಜಾರಿಯ ವೇಗ ಮತ್ತು ತೀವ್ರತೆಯನ್ನು ಹೆಚ್ಚಿಸಿದ್ದೇವೆ.
ಹೊಸದಾಗಿ ಪ್ರಾರಂಭಿಸಲಾದ ಈ ಟ್ರೂ 5ಜಿ ನಗರಗಳು ಪ್ರಮುಖ ಪ್ರವಾಸೋದ್ಯಮ ಮತ್ತು ವಾಣಿಜ್ಯ ತಾಣಗಳು ಹಾಗೂ ನಮ್ಮ ದೇಶದ ಪ್ರಮುಖ ಶಿಕ್ಷಣ ಕೇಂದ್ರಗಳಾಗಿವೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಪಡೆಯುತ್ತಾರೆ ಮಾತ್ರವಲ್ಲ ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ಎಂಇಗಳು ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ.