ಕ್ರಿಕೆಟ್ IPL 2020 ಗಾಗಿ ಜಿಯೋ ಧನ್ ಧನಾ ಧನ್ ಹೆಸರಿನಲ್ಲಿ ಹೊಸದೊಂದು ಆಫರ್ ಅನ್ನು ಜಿಯೋ ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಕರೋನಾದಿಂದಾಗಿ ಯುಎಇ ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಗಳನ್ನು ಯಾವುದೇ ಅಡೆತಡೆಗಳು ಇಲ್ಲದೇ ಆನ್‌ಲೈನಿನಲ್ಲಿ ನೋಡಲು ತನ್ನ ಚಂದದಾರರಿಗೆ ಜಿಯೋ ಹೊಸ ಆಫರ್ ವೊಂದನ್ನು ಬಿಡುಗಡೆ ಮಾಡಿದೆ. ರಿಲಯನ್ಸ್ ಜಿಯೋ ಕ್ರಿಕೆಟ್ ಅಭಿಮಾನಿಗಳಿಗಾಗಿ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಜಿಯೋ ತನ್ನ 'ಧನ್ ಧನಾ ಧನ್' ಕೊಡುಗೆ ಅಡಿಯಲ್ಲಿ ಎರಡು ಹೊಸ ಯೋಜನೆಗಳನ್ನು ಪರಿಚಯಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2020 (2020 Indian Premier League) ನ ಮುಂಬರುವ ಋತುವನ್ನು ಗಮನದಲ್ಲಿಟ್ಟುಕೊಂಡು ಜಿಯೋ ಈ ಯೋಜನೆಗಳನ್ನು ಪ್ರಾರಂಭಿಸಿದೆ
ಎರಡೂ ಯೋಜನೆಗಳು Disney + Hotstar VIP ಚಂದಾದಾರಿಕೆಯೊಂದಿಗೆ ಲಭ್ಯ
ಈ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ 399 ರೂಗಳ ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತುಒಂದು ತಿಂಗಳ ಅವಧಿಯಲ್ಲಿ ಬಳಕೆ ಮಾಡಿಲು 90 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ಆನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶವು ಇರಲಿದೆ.
ಇದು ಜಿಯೋ ಡೇಟಾ ಮಾತ್ರ ಟಾಪ್ ಅಪ್ ಯೋಜನೆ. ಅಂದರೆ ಈ ಯೋಜನೆಯಲ್ಲಿ ಬಳಕೆದಾರರಿಗೆ ಧ್ವನಿ ಕರೆ ಮಾಡುವ ಸೌಲಭ್ಯ ದೊರೆಯುವುದಿಲ್ಲ. ಈ ಯೋಜನೆಯ ವ್ಯಾಲಿಡಿಟಿ 56 ದಿನಗಳು. ಅಂದರೆ ನೀವು ಯೋಜನೆಯಲ್ಲಿ ಒಟ್ಟು 74 GB ಡೇಟಾವನ್ನು ಪಡೆಯುತ್ತೀರಿ. ಜಿಯೋ ಈ ಪ್ಲಾನ್ ರಿಚಾರ್ಜ್ ಮಾಡಿಸುವವರಿಗೆ 399 ರೂಗಳ ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡುವುದರೊಂದಿಗೆ IPL ಪಂದ್ಯಾವಳಿಗಳು ನಡೆಯುವ 56 ದಿನಗಳ ಕಾಲ ನಿತ್ಯ 1.5GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡಲಿದೆ.
ಜಿಯೋನ ಈ 777 ರೂ ಯೋಜನೆಯಲ್ಲಿ ಬಳಕೆದಾರರಿಗೆ 84 ದಿನಗಳ ಮಾನ್ಯತೆ ಸಿಗುತ್ತದೆ. ಈ ಯೋಜನೆಯಲ್ಲಿ ಕಂಪನಿಯು ಒಟ್ಟು 131GB ಡೇಟಾವನ್ನು ಬಳಕೆದಾರರಿಗೆ ನೀಡುತ್ತಿದೆ ಇದು ದಿನಕ್ಕೆ 1.5GB ಗಿಂತ ಹೆಚ್ಚು. ಈ ಯೋಜನೆಯ ಹೊರತಾಗಿ ಅನಿಯಮಿತ ವಾಯ್ಸ್ ಕರೆ ಮಾಡುವುದರ ಜೊತೆಗೆ ನೀವು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಪ್ರವೇಶವನ್ನು ಪಡೆಯುತ್ತೀರಿ. ಜಿಯೋ ಈ ಪ್ಲಾನ್ ರಿಚಾರ್ಜ್ ಮಾಡಿಸುವವರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡುವುದರೊಂದಿಗೆ 84 ದಿನಗಳ ಕಾಲ ಬಳಕೆಗೆ 131 GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡುವುದರೊಂದಿಗೆ ಆನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶ ನೀಡಲಿದೆ.
ಈ ಹೊಸ 2599 ರಿಚಾರ್ಜ್ ಮಾಡಿಸಿಕೊಂಡವರಿಗೆ ಜಿಯೋ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡಲಿದೆ ಮತ್ತು ಒಂದು ವರ್ಷದ ಅವಧಿಗೆ 740 GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡುವುದರೊಂದಿಗೆ ಆನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಜಿಯೋ ಆಪ್‌ಗಳನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಿದೆ.
ಜಿಯೋ ಇತ್ತೀಚೆಗೆ 401 ರೂಗಳ ಯೋಜನೆಯನ್ನು ಸಹ ಬಿಡುಗಡೆ ಮಾಡಿದೆ. ಜಿಯೋ 401 ಪ್ಯಾಕ್‌ನ ವ್ಯಾಲಿಡಿಟಿ 28 ದಿನಗಳಾಗಿವೆ. ಕಂಪನಿಯ ಈ ಯೋಜನೆಯಲ್ಲಿ ಪ್ರತಿದಿನ 3 GB ಡೇಟಾವನ್ನು ನೀಡಲಾಗುತ್ತದೆ. ಇದಲ್ಲದೆ 6 GB ಡೇಟಾ ಸಹ ಲಭ್ಯವಿದೆ. ಅಂದರೆ ಗ್ರಾಹಕರು ಒಟ್ಟು 90 GB ಡೇಟಾದ ಲಾಭ ಪಡೆಯಬಹುದು. ಪ್ರತಿದಿನ ಸ್ವೀಕರಿಸಿದ ಡೇಟಾದ ಮಿತಿಯ ನಂತರ ವೇಗವನ್ನು 64 ಕೆಬಿಪಿಎಸ್‌ಗೆ ಇಳಿಸಲಾಗುತ್ತದೆ. ಜಿಯೋನ ಈ ಪ್ರಿಪೇಯ್ಡ್ ಯೋಜನೆ ಜಿಯೋ ನೆಟ್‌ವರ್ಕ್‌ನಲ್ಲಿ ಕರೆ ಮಾಡಲು ಅನಿಯಮಿತ ನಿಮಿಷಗಳನ್ನು ನೀಡುತ್ತದೆ. ಅದೇ ಸಮಯದಲ್ಲಿ ಇತರ ನೆಟ್‌ವರ್ಕ್‌ಗಳಲ್ಲಿ ಜಿಯೋದಿಂದ ಕರೆಗಳಿಗಾಗಿ ನೀವು 1 ಸಾವಿರ ನಿಮಿಷಗಳನ್ನು ಪಡೆಯುತ್ತೀರಿ.
Reliance Jio ಗ್ರಾಹಕರು ನೀವಾಗಿದ್ದರೆ ನಿಮ್ಮ ನಂಬರ್‌ಗೆ ಲಭ್ಯವಿರುವ ಇತ್ತೀಚಿನ ಬೆಸ್ಟ್ ರಿಚಾರ್ಜ್ ಪ್ಲಾನ್‌ಗಳನೊಮ್ಮೆ ನೋಡ್ಕೊಳ್ಳಿ.