Jio ಹೊಸ JioFiber ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್ಗಳನ್ನು ಬಿಡುಗಡೆ ಮಾಡಿದೆ

Jio ಹೊಸ JioFiber ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್ಗಳನ್ನು ಬಿಡುಗಡೆ ಮಾಡಿದೆ
HIGHLIGHTS

ಜಿಯೋಫೈಬರ್ (JioFiber) ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ (JioFiber Double Festival Bonanza) ಅನ್ನು ಲಾಂಚ್ ಮಾಡಿದೆ.

ರಿಲಯನ್ಸ್ ಜಿಯೋ (Reliance Jio) ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್‌ ನಲ್ಲಿ ಎರಡು ಯೋಜನೆಗಳನ್ನು ಪರಿಚಯ ಮಾಡಿದೆ.

ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಪೂರೈಕೆದಾರರಾದ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಿದೆ. ಅಕ್ಟೋಬರ್ 18 ಮತ್ತು 28 ಅಕ್ಟೋಬರ್ 2022 ರ ನಡುವೆ ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ (JioFiber Double Festival Bonanza) ಅನ್ನು ಲಾಂಚ್ ಮಾಡಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಕೊಡುಗೆಯ ಪ್ರಯೋಜನಗಳನ್ನು ಪಡೆಯಲು ಬಳಕೆದಾರರು ಹೊಸ ಸಂಪರ್ಕವನ್ನು ಖರೀದಿಸಬೇಕು ಮತ್ತು ಈಗ ಲಾಂಚ್ ಆಗಿರುವ ಯೋಜನೆಗಳಲ್ಲಿ ಒಂದಕ್ಕೆ ಚಂದಾದಾರರಾಗಬೇಕು.

ರಿಲಯನ್ಸ್ ಜಿಯೋ (Reliance Jio) ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್‌ ನಲ್ಲಿ ಎರಡು ಯೋಜನೆಗಳನ್ನು ಪರಿಚಯ ಮಾಡಿದೆ.  ರೂ 599 ಪ್ಲಾನ್‌ನ 6 ತಿಂಗಳ ರೀಚಾರ್ಜ್ ಮತ್ತು ರೂ 899 ಪ್ಲಾನ್‌ನ 6 ತಿಂಗಳ ರೀಚಾರ್ಜ್. ಈ ಎರಡು ಯೋಜನೆಗಳ ಜೊತೆಗೆ ರೂ. 899 x 3 ತಿಂಗಳ ಯೋಜನೆಯು 100% ಮೌಲ್ಯದ ಬ್ಯಾಕ್ ಆಫರ್‌ಗೆ ಅರ್ಹವಾಗಿದೆ ಆದರೆ 15 ದಿನಗಳ ಹೆಚ್ಚುವರಿ ಮಾನ್ಯತೆ ಇದರಲ್ಲಿ ದೊರೆಯುವುದಿಲ್ಲ. ಈ ಹೊಸ ಯೋಜನೆಗಳು ಹೊಸ ಸಂಪರ್ಕಗಳನ್ನು ಬುಕ್ ಮಾಡಿದಾಗ ಬಳಕೆದಾರರಿಗೆ ರೂ 6,500 ಮೌಲ್ಯದ ಪ್ರಯೋಜನಗಳನ್ನು ನೀಡುತ್ತಿದೆ. ಈ ಕೊಡುಗೆಯು ಆಯ್ದ ಯೋಜನೆಗಳ ಖರೀದಿಗೆ ಅನ್ವಯಿಸುತ್ತದೆ. 

ರಿಲಯನ್ಸ್ ಜಿಯೋ (Reliance Jio) ರೂ. 599 X 6 ತಿಂಗಳ ಯೋಜನೆ:

ಈ ಜಿಯೋ ಪ್ಲಾನ್ ರೂ. 599 X 6 ತಿಂಗಳ ಯೋಜನೆಯಲ್ಲಿ 30 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು ದೊರೆಯಲಿದೆ. ಒಟ್ಟು ರೂ.4,241 ಆಗಲಿದೆ. (ರೂ. 3,594 + ರೂ. 647 ಜಿಎಸ್‌ಟಿ), ಈ ಯೋಜನೆಯಲ್ಲಿ ಹೊಸ ಗ್ರಾಹಕರು ರೂ. 4,500 ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು: ರೂ. AJIO ನ 1,000 ವೋಚರ್, ರಿಲಯನ್ಸ್ ಡಿಜಿಟಲ್‌ನ ರೂ. 1,000 ವೋಚರ್,  ನೆಟ್‌ಮೆಡ್ಸ್‌ನ ರೂ. 1,000 ವೋಚರ್ ಮತ್ತು  IXIGO ನ  ರೂ. 1,500 ವೋಚರ್ ದೊರೆಯಲಿದೆ.  ಹೆಚ್ಚುವರಿಯಾಗಿ ಈ ಎಲ್ಲಾ ಗ್ರಾಹಕರು ಯೋಜನೆಯ ಭಾಗವಾಗಿರುವ 6 ತಿಂಗಳ ಮಾನ್ಯತೆಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ.

ರಿಲಯನ್ಸ್ ಜಿಯೋ (Reliance Jio) ರೂ. 899 X 6 ತಿಂಗಳ ಯೋಜನೆ:

ಈ ಜಿಯೋ ಪ್ಲಾನ್ ರೂ. 899 X 6 ತಿಂಗಳ ಯೋಜನೆಯಲ್ಲಿ 100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು ದೊರೆಯಲಿದೆ.  ಒಟ್ಟು ರೂ 6,365 ಆಗಲಿದೆ. (ರೂ. 5,394 + ರೂ. 971 ಜಿಎಸ್‌ಟಿ). ಈ ಯೋಜನೆಯಲ್ಲಿ ಹೊಸ ಗ್ರಾಹಕರು ರೂ.6,500. ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು AJIO ನ ರೂ.2,000 ವೋಚರ್, ರಿಲಯನ್ಸ್ ಡಿಜಿಟಲ್‌ನ ರೂ. 1,000 ವೋಚರ್, NetMeds ನ ರೂ.500 ವೋಚರ್ & IXIGO ನ ರೂ. 3,000 ವೋಚರ್. ಹೆಚ್ಚುವರಿಯಾಗಿ ಈ ಎಲ್ಲಾ ಗ್ರಾಹಕರು ಯೋಜನೆಯ ಭಾಗವಾಗಿರುವ 6 ತಿಂಗಳ ಮಾನ್ಯತೆಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ.

ರಿಲಯನ್ಸ್ ಜಿಯೋ (Reliance Jio) ರೂ. 899 X 3 ತಿಂಗಳ ಯೋಜನೆ:

ಈ ಜಿಯೋ ಪ್ಲಾನ್ ರೂ. 899 X 3 ತಿಂಗಳ ಯೋಜನೆ: (100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು): ಒಟ್ಟು ರೂ.2,697. ಈ ಯೋಜನೆಯಲ್ಲಿ ಹೊಸ ಗ್ರಾಹಕರು ರೂ.3,500 ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು: AJIO ನ ರೂ.1,000 ವೋಚರ್, ರಿಲಯನ್ಸ್ ಡಿಜಿಟಲ್‌ನ ರೂ. 500 ವೋಚರ್, NetMeds ನ ರೂ.500 ವೋಚರ್ & IXIGO ನ ರೂ. 1,500 ವೋಚರ್. ಆದರೆ ಈ ಯೋಜನೆಯಲ್ಲಿ ಹೆಚ್ಚುವರಿ ವ್ಯಾಲಿಡಿಟಿ ದೊರೆಯುವುದಿಲ್ಲ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo