Jio Plus: ಜಿಯೋದಿಂದ ಹೊಸ ಫ್ಯಾಮಿಲಿ ರಿಚಾರ್ಜ್ ಯೋಜನೆ ಆರಂಭ! ಒಂದು ತಿಂಗಳು ಸಂಪೂರ್ಣ ಉಚಿತ ಸೇವೆ!

Updated on 15-Mar-2023
HIGHLIGHTS

ರಿಲಯನ್ಸ್ ಜಿಯೋ ಪ್ಲಸ್ (Jio Plus Postpaid) ಒಂದು ತಿಂಗಳ ಉಚಿತ ಪ್ರಯೋಗದೊಂದಿಗೆ ಬಿಡುಗಡೆಗೊಳಿಸಿದೆ.

ಜಿಯೋ ಪ್ಲಸ್ ಯೋಜನೆಯಲ್ಲಿ ಮೊದಲ ಸಂಪರ್ಕಕ್ಕಾಗಿ ಗ್ರಾಹಕರು 399 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

Jio Plus ನಲ್ಲಿ ಒಟ್ಟು 4 ಸಂಪರ್ಕಗಳು ಇರಲಿವೆ ಅಂದ್ರೆ ಒಂದು ತಿಂಗಳಿಗೆ ನೀವು ಒಟ್ಟು 696 (399+99+99+99) ಪಾವತಿಸಬೇಕಾಗುತ್ತದೆ.

Jio Plus Postpaid: ರಿಲಯನ್ಸ್ ಜಿಯೋ ಪ್ಲಸ್ ಒಂದು ತಿಂಗಳ ಉಚಿತ ಪ್ರಯೋಗದೊಂದಿಗೆ ಬಿಡುಗಡೆಗೊಳಿಸಿದೆ. ಜಿಯೋ ಪ್ಲಸ್ ಯೋಜನೆಯಲ್ಲಿ ಮೊದಲ ಸಂಪರ್ಕಕ್ಕಾಗಿ ಗ್ರಾಹಕರು 399 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಯೋಜನೆಗೆ 3 ಹೆಚ್ಚುವರಿ ಸಂಪರ್ಕಗಳನ್ನು ಸೇರಿಸಬಹುದು. ಯಾವುದೇ ಸಂಪರ್ಕವನ್ನು ಸೇರಿಸಲು ಗ್ರಾಹಕರು ಪ್ರತಿ ಕನೆಕ್ಷನ್ಗಾಗಿ ಹೆಚ್ಚುವರಿ 99 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

Jio Plus ನಲ್ಲಿ ಒಟ್ಟು 4 ಸಂಪರ್ಕಗಳು ಇರಲಿವೆ ಅಂದ್ರೆ ಒಂದು ತಿಂಗಳಿಗೆ ನೀವು ಒಟ್ಟು 696 (399+99+99+99) ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಅತ್ಯಂತ ಅದ್ಭುತ ವಿಷಯವೆಂದರೆ ಇದರಲ್ಲಿ ನೀಡಲಾಗುವ 75GB ಡೇಟಾ ಸಾಗ ಲಭ್ಯವಿದೆ. ಇದರಲ್ಲಿ 4 ಕನೆಕ್ಷನ್ಗಳನ್ನು ಒಳಗೊಂಡಿರುವ ಈ  ಕುಟುಂಬ ಯೋಜನೆಯಲ್ಲಿ ಗ್ರಾಹಕರು ಒಂದು ಸಿಮ್‌ಗೆ ತಿಂಗಳಿಗೆ ಸುಮಾರು 174 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ ಇದು ಆರ್ಥಿಕವಾಗಿ ನಿಮ್ಮ ಜೇಬಿನ ಮೇಲಿನ ಹೊರೆಯನ್ನು ಕಡಿಮೆ ಮಾಡಲಿದೆ.

Jio Plus ಯೋಜನೆಯಲ್ಲಿ ಇತರ ಪ್ರಯೋಜನ

ನಿಮಗೆ ಹೆಚ್ಚುವರಿ ಡೇಟಾ ಅಗತ್ಯವಿದೆ ಎಂದು ಭಾವಿಸಿದರೆ ನೀವು 100 GB ಡೇಟಾವನ್ನು ಹೊಂದಿರುವ ಯೋಜನೆಯನ್ನು ಸಹ ಆಯ್ಕೆ ಮಾಡಬಹುದು ಮತ್ತು ಹೀಗಾಗಿ ನಿಮ್ಮ ಡೇಟಾ ಈ ಯೋಜನೆಯಲ್ಲಿ ಕೊನೆಗೊಳ್ಳುವುದಿಲ್ಲ. ಈ ಯೋಜನೆಯನ್ನು ಸಕ್ರಿಯಗೊಳಿಸಲು ಗ್ರಾಹಕರು ಮೊದಲ ಸಂಪರ್ಕದಲ್ಲಿ ರೂ 699 ಪಾವತಿಸಬೇಕಾಗುತ್ತದೆ ಮತ್ತು ಉಳಿದ ಎಲ್ಲಾ ಹೆಚ್ಚುವರಿ ಸಂಪರ್ಕಗಳಿಗೆ ಅವರು ಪ್ರತಿ ಸಂಪರ್ಕಕ್ಕೆ ರೂ 99 ಪಾವತಿಸಬೇಕಾಗುತ್ತದೆ. ಕೇವಲ 3 ಹೆಚ್ಚುವರಿ ಸಂಪರ್ಕಗಳನ್ನು ಮಾತ್ರ ಜೋಡಿಸಬಹುದು. ಕಂಪನಿಯು ಮಾರುಕಟ್ಟೆಯಲ್ಲಿ ಕೆಲವು ವೈಯಕ್ತಿಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರೂ 299 ಕ್ಕೆ 30GB ಡೇಟಾ ಯೋಜನೆ ಜೊತೆಗೆ ರೂ 599 ಗೆ ಅನಿಯಮಿತ ಡೇಟಾ ಯೋಜನೆ ಸೇರಿವೆ.

ವೆಲ್ಕಮ್ ಆಫರ್‌ನ ಲಾಭವನ್ನು ಪಡೆಯಿರಿ

ರಿಲಯನ್ಸ್ ಜಿಯೋ Jio True 5G ವೆಲ್‌ಕಮ್ ಆಫರ್‌ನೊಂದಿಗೆ ಗ್ರಾಹಕರಿಗೆ ಅನಿಯಮಿತ 5G ಡೇಟಾವನ್ನು ನೀಡಲಾಗುತ್ತಿದ್ದು ಇದನ್ನು ನಿಮ್ಮ ಇಡೀ ಕುಟುಂಬ ಬಳಸಬಹುದು. ಗ್ರಾಹಕರು ತಮ್ಮ ಆಯ್ಕೆಯ ಸಂಖ್ಯೆಯನ್ನು ಸಹ ಆಯ್ಕೆ ಮಾಡಬಹುದು. ಇದರಲ್ಲಿ ಗ್ರಾಹಕರಿಗೆ ಸಿಂಗಲ್ ಬಿಲ್ಲಿಂಗ್, ಡೇಟಾ ಹಂಚಿಕೆ ಮತ್ತು ನೆಟ್‌ಫ್ಲಿಕ್ಸ್, ಅಮೆಜಾನ್, ಜಿಯೋ ಟಿವಿ ಮತ್ತು ಜಿಯೋ ಸಿನಿಮಾದಂತಹ ಪ್ರೀಮಿಯಂ ಕಂಟೆಂಟ್  ಅಪ್ಲಿಕೇಶನ್‌ಗಳನ್ನು ಸಹ ನೀಡಲಾಗುತ್ತಿದೆ.

ಇದಕ್ಕಾಗಿ ಜಿಯೋ ಫೈಬರ್ ಬಳಕೆದಾರರು, ಕಾರ್ಪೊರೇಟ್ ಉದ್ಯೋಗಿಗಳು, ಇತರ ಆಪರೇಟರ್‌ಗಳ ಅಸ್ತಿತ್ವದಲ್ಲಿರುವ ಪೋಸ್ಟ್‌ಪೇಯ್ಡ್ ಬಳಕೆದಾರರು ಮತ್ತು ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರು ಯಾವುದೇ ಭದ್ರತಾ ಠೇವಣಿ ಪಾವತಿಸಬೇಕಾಗಿಲ್ಲ. ಒಂದು ತಿಂಗಳ ಪ್ರಯೋಗದ ನಂತರವೂ ಬಳಕೆದಾರರು ಸೇವೆಯನ್ನು ಇಷ್ಟಪಡದಿದ್ದರೆ ಅವರು ತಮ್ಮ ಸಂಪರ್ಕವನ್ನು ರದ್ದುಗೊಳಿಸಬಹುದು ಎಂದು ಜಿಯೋ ಹೇಳಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :