Jio IPL 2023: ಭಾರತದಲ್ಲಿ ಈಗಾಗಲೇ ನಿಮಗೆ ತಿಳಿದಿರುವಿನಂತೆ ಅತಿ ಹೆಚ್ಚು ಕ್ರೆಜ್ ನೀಡುವ ಮತ್ತು ಹೆಚ್ಚಾಗಿ ವೀಕ್ಷಿಸುವ ಆಟ ಅಂದ್ರೆ ಅದು ಕ್ರಿಕೆಟ್. ಈ ವರ್ಷದ ಮಾರ್ಚ್ ಕೊನೆಯಲ್ಲಿ IPL ಇಂಡಿಯನ್ ಪ್ರೀಮಿಯರ್ ಲೀಗ್ 2023 ಶುರುವಾಗಲು ಇನ್ನು ಕೆಲವೇ ಘಂಟೆಗಳು ಉಳಿದಿವೆ. ಇದನ್ನು ಈಗಾಗಲೇ ಅರಿತ ಟೆಲಿಕಾಂ Jio, Airtel ಮತ್ತು Vi ಕಂಪನಿಗಳು ತಮ್ಮ ಬಳಕೆದಾರರಿಗೆ ಹೊಸ ಹೊಸ ಆಫರ್ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿವೆ. ಅವುಗಳಲ್ಲಿ ಮುಖ್ಯವಾಗಿ ರಿಲಯನ್ಸ್ ಜಿಯೋ ಭರ್ಜರಿಯ ಯೋಜನೆಗಳನ್ನು ಕೈಗೆಟಕುವ ಬೆಲೆ ಅಂದ್ರೆ ಕೇವಲ 198 ರೂಗಳಿಗೆ ಇಡೀ ಮನೆಯವರಿಗಾಗಿ ಹೊಸ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಬ್ಯಾಕಪ್ ಯೋಜನೆಯನ್ನು ತಂದಿದೆ.
ಈ ರಿಲಯನ್ಸ್ ಜಿಯೋ ಫೈಬರ್ ಹೊಸ ಯೋಜನೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಜೊತೆಗೆ ಉಚಿತ ಲ್ಯಾಂಡ್‌ಲೈನ್ ಕರೆಗಳನ್ನು ಸಹ ತನ್ನ ಬಳಕೆದಾರಿಗೆ ನೀಡುತ್ತಿದೆ. ರಿಲಯನ್ಸ್ ಜಿಯೋ IPL 2023 ಅನ್ನು ಗಮನದಲ್ಲಿಟ್ಟುಕೊಂಡು ಅಗ್ಗದ ಇಂಟರ್ನೆಟ್ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಯಡಿ ಗ್ರಾಹಕರಿಗೆ ತಿಂಗಳಿಗೆ ಕೇವಲ 198 ರೂ ವೆಚ್ಚದಲ್ಲಿ ಫೈಬರ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕವನ್ನು ನೀಡಲಾಗುತ್ತದೆ. ಈ ಹೊಸ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಬ್ಯಾಕಪ್ ಯೋಜನೆ ನಾಳೆ ಅಂದ್ರೆ ಮಾರ್ಚ್ 30 ರಿಂದ ಪ್ರಾರಂಭವಾಗುತ್ತಿದೆ. ಕಂಪನಿಯು ಈ ಯೋಜನೆಯನ್ನು ಜಿಯೋ ಫೈಬರ್ ಬ್ಯಾಕಪ್ ಯೋಜನೆ ಎಂದು ಕರೆದಿದೆ.
ಮೇಲಿನ ಪ್ರಶ್ನೆಯಂತೆ ನೀವು ಸಹ ಹೌದು ಈ ಜಿಯೋ ಪ್ಲಾನ್ ಯಾಕಿಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ ಅಂಥ ನೋಡೋದಾದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಮ್ಮೆ ತಿಳಿಯಿರಿ. ಯಾಕಿ ಪ್ಲಾನ್ ಏಕೆ ತ್ವರಿತವಾಗಿ ಪಡೆಯಬಾರದು ಇದಕ್ಕೆ ಕಾರಣವೇನು? ಯಾಕೆ ಮತ್ತಷ್ಟು ಸಮಯ ಕಾಯಬೇಕು ಮುಂದೆ ತಿಳಿಯಿರಿ. ಈ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಬ್ಯಾಕಪ್ ಯೋಜನೆಯನ್ನು ತೆಗೆದುಕೊಳ್ಳಲು ಮೊದಲಿಗೆ ನೀವು ರೂ 1,490 ಒಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದರ ನಂತರ ನೀವು ಜಿಯೋ ಫೈಬರ್ ಬ್ಯಾಕಪ್ ಯೋಜನೆಯನ್ನು ಪಡೆಯಬಹುದು.
ನಿಮ್ಮ ಮೊದಲ 1490 ರೂಗಳಲ್ಲಿ 990 ರೂಗಳನ್ನು ಮುಂದಿನ 5 ತಿಂಗಳ ಸೇವಾ ಶುಲ್ಕವಾಗಿ (ತಿಂಗಳಿಗೆ 198 ರೂಗಳು) ಪಡೆಯುತ್ತಾರೆ. ಮತ್ತೆ ಉಳಿದ ರೂ 500 ಜಿಯೋ ಫೈಬರ್ ಸ್ಥಾಪನೆ ಶುಲ್ಕವಾಗಿ ಪಡೆಯುತ್ತಾರೆ. ಇದರ ಹೊರತಾಗಿ ನಿಮಗೆ 10Mbps ಸ್ಪೀಡ್ ಕಡಿಮೆಯಿದ್ದರೆ ನೀವು 30Mbps, 100Mbps, 150Mbps ಮತ್ತು 300Mbps ವೇಗಕ್ಕೆ ಅಪ್‌ಗ್ರೇಡ್ ಮಾಡಬಹುದು ಆದರೆ ಅದಕ್ಕೂ ನೀವು ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ರಿಲಯನ್ಸ್ ಜಿಯೋ ರೂ 198 ಜಿಯೋ ಫೈಬರ್ ಬ್ಯಾಕಪ್ ಯೋಜನೆಗೆ ರೂ 200 ಹೆಚ್ಚು ಪಾವತಿಸಿದರೆ ಅಂದರೆ ಒಟ್ಟಾರೆಯಾಗಿ ರೂ 398 ತಿಂಗಳಿಗೆ ಜಿಯೋ ಉಚಿತ ಸೆಟ್ ಟಾಪ್ ಬಾಕ್ಸ್ ಅನ್ನು ಸಹ ಪಡೆಯಬಹುದು. ಅದರ ಸಹಾಯದಿಂದ ನೀವು 400 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. 6 OTT ಅಪ್ಲಿಕೇಶನ್‌ಗಳ ಕಂಟೆಂಟ್ ಪಡೆಯಬಹುದು.