ಸುಮಾರು 800 ಮೆಗಾಹರ್ಟ್ಸ್ ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್ ಹೆಜ್ಜೆಗುರುತನ್ನು ಮುಂಬೈ ಸರ್ಕಲ್‌ನಲ್ಲಿ 2X15 ಮೆಗಾಹರ್ಟ್ಸ್‌ಗೆ ಹಾಗೂ ಆಂಧ್ರಪ್ರದೇಶ ಮತ್ತು ದೆಹಲಿ ಸರ್ಕಲ್‌ಗಳಲ್ಲಿ 2X10 ಮೆಗಾಹರ್ಟ್ಸ್‌ಗೆ ಹೆಚ್ಚಿಸಿಕೊಂಡ ಜಿಯೋ ಸ್ಪೆಕ್ಟ್ರಮ್ ಟ್ರೇಡಿಂಗ್ ಮೂಲಕ ಆಂಧ್ರಪ್ರದೇಶ ದೆಹಲಿ ಮತ್ತು ಮುಂಬೈ ಸರ್ಕಲ್‌ಗಳಲ್ಲಿನ 800 ಮೆಗಾಹರ್ಟ್ಸ್ ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್ ಬಳಸುವ ಹಕ್ಕನ್ನು ಪಡೆದುಕೊಳ್ಳಲು ಭಾರ್ತಿ ಏರ್‌ಟೆಲ್ ಲಿಮಿಟೆಡ್‌ನೊಂದಿಗೆ ಖಚಿತವಾದ ಒಪ್ಪಂದ ಮಾಡಿಕೊಂಡಿರುವುದಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (RJIL-ಆರ್‌ಜೆಐಎಲ್) ಇಂದು ಪ್ರಕಟಿಸಿದೆ. ಈ ಒಪ್ಪಂದದ ಭಾಗವಾಗಿರುವ ಸ್ಪೆಕ್ಟ್ರಮ್‌ನ ರಾಜ್ಯಗಳ ವಿವರ ಹೀಗಿದೆ:
ಆಂಧ್ರಪ್ರದೇಶ : 3.75MHz, ದೆಹಲಿ : 1.25MHz, ಮುಂಬೈ : 2.50MHz, ಒಟ್ಟು : 7.50MHz
ಈ ಒಪ್ಪಂದವು ದೂರಸಂಪರ್ಕ ಇಲಾಖೆ ಪ್ರಕಟಿಸಿರುವ ಸ್ಪೆಕ್ಟ್ರಮ್ ಟ್ರೇಡಿಂಗ್ ಮಾರ್ಗಸೂಚಿಗಳಿಗೆ ಅನುಸಾರವಾಗಿದೆ ಹಾಗೂ ಇದು ಅಗತ್ಯ ನಿಯಂತ್ರಣ ಮತ್ತು ಶಾಸನಬದ್ಧ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ. ಈ ಸ್ಪೆಕ್ಟ್ರಮ್ ಅನ್ನು ಬಳಸುವ ಹಕ್ಕಿನ ಒಟ್ಟು ಮೌಲ್ಯ 1497 ರೂ ಕೋಟಿಗಳಾಗಿದ್ದು ಯಾವುದೇ ವಹಿವಾಟು ಸಂಬಂಧಿ ಹೊಂದಾಣಿಕೆಗಳಿಗೆ ಒಳಪಟ್ಟಂತೆ 459 ರೂ ಕೋಟಿಗಳ ಸಂಬಂಧಿತ ಮುಂದೂಡಲ್ಪಟ್ಟ ಪಾವತಿ ಹೊಣೆಗಾರಿಕೆಯ (deferred payment liability) ಪ್ರಸ್ತುತ ಮೌಲ್ಯವನ್ನೂ ಒಳಗೊಂಡಿದೆ.
ಸ್ಪೆಕ್ಟ್ರಮ್ ಅನ್ನು ಬಳಸುವ ಹಕ್ಕಿನ ಈ ಟ್ರೇಡಿಂಗ್‌ನೊಂದಿಗೆ ಆರ್‌ಜೆಐಎಲ್ ಮುಂಬೈ ಸರ್ಕಲ್‌ನ 800 ಮೆಗಾಹರ್ಟ್ಸ್ ಬ್ಯಾಂಡ್‌ನಲ್ಲಿ 2X15 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಹಾಗೂ ಆಂಧ್ರಪ್ರದೇಶ ಮತ್ತು ದೆಹಲಿ ಸರ್ಕಲ್‌ಗಳಲ್ಲಿನ 800 ಮೆಗಾಹರ್ಟ್ಸ್ ಬ್ಯಾಂಡ್‌ನಲ್ಲಿ 2X10 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಅನ್ನು ಪಡೆದುಕೊಂಡಂತಾಗಿದೆ. ಆ ಮೂಲಕ ಈ ವಲಯಗಳಲ್ಲಿ ಆರ್‌ಜೆಐಎಲ್ ತನ್ನ ಸ್ಪೆಕ್ಟ್ರಮ್ ಹೆಜ್ಜೆಗುರುತನ್ನು ಬಲಪಡಿಸಿಕೊಂಡಿದೆ.
ವರ್ಧಿತ ಸ್ಪೆಕ್ಟ್ರಮ್ ಫುಟ್‌ಪ್ರಿಂಟ್ ಅದರಲ್ಲೂ ವಿಶೇಷವಾಗಿ ಪಕ್ಕಪಕ್ಕದಲ್ಲಿರುವ (contiguous) ಸ್ಪೆಕ್ಟ್ರಮ್ ಹಾಗೂ ಉತ್ತಮ ಮೂಲಸೌಕರ್ಯಗಳ ನಿಯೋಜನೆಯಿಂದಾಗಿ ಆರ್‌ಜೆಐಎಲ್ ನೆಟ್‌ವರ್ಕ್ ಸಾಮರ್ಥ್ಯದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ಈ ವಹಿವಾಟು ಅಗತ್ಯ ನಿಯಂತ್ರಣ ಮತ್ತು ಶಾಸನಬದ್ಧ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.
ನಿಮಗಾಗಿ Jio ನೀಡುತ್ತಿರುವ ಇತ್ತೀಚಿನ ಉತ್ತಮ ಪ್ಲಾನ್‌ಗಳನ್ನು ನೋಡ್ಕೊಳ್ಳಿ.