ಟೆಲಿಕಾಂ ವಲಯದ ದಿಗ್ಗಜನೆಂದೇ ಪ್ರಸಿದ್ದವಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಅವರ ಅಗತ್ಯಗಳಿಗೆ ಅನುಗುಣವಾಗಿ ಬಳಸಲು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ರಿಚಾರ್ಜ್ ಯೋಜನೆಗಳನ್ನು ಅತಿ ಕಡಿಮೆ ಬೆಲೆಗೆ ನೀಡುತ್ತಿದೆ. ಇವುಗಳಲ್ಲಿ ಮಾಸಿಕ ಯೋಜನೆ ಕೊಂಚ ಅಧಿಕವಾಗಿ ಕಂಡರೂ ನೀವು ಧೀರ್ಘಾವಧಿಯ ಯೋಜನೆಗಳನ್ನು ಹೋಲಿಸಿದರೆ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಅಂತಹ 2025 ರೂಗಳ ಹೊಸ ವರ್ಷದ ಈ Unlimited 5G ಮತ್ತು ವಾಯ್ಸ್ ಕರೆಗಳನ್ನು 200 ದಿನಗಳಿಗೆ ನೀಡುವ Jio ಜಬರ್ದಸ್ತ್ ರಿಚಾರ್ಜ್ ಪ್ಲಾನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಮಾಹಿತಿ ನೀಡಲಿದ್ದೇವೆ.
ಸದ್ದಿಲ್ಲದೇ ಬಿಡುಗಡೆಯಾಗಿರುವ ಈ ರಿಲಯನ್ಸ್ ಜಿಯೋ (Reliance Jio 2025 Plan) ರಿಚಾರ್ಜ್ ಯೋಜನೆಯಲ್ಲಿ ಈಗಾಗಲೇ ಮೇಲೆ ತಿಳಿಸಿರುವ ಬರೋಬ್ಬರಿ 200 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಮತ್ತು ಪ್ರತಿದಿನಕ್ಕೆ 2.5GB ಕ್ರಮವಾಗಿ ಒಟ್ಟು 500GB ಡೇಟಾವನ್ನು ಸಹ ನೀಡುತ್ತಿದೆ. ಈ ರಿಲಯನ್ಸ್ ಜಿಯೋ ರೂ. 2025 ರಿಚಾರ್ಜ್ ಯೋಜನೆಯಲ್ಲಿ ದಿನದ ಡೇಟಾ ಅಂದ್ರೆ 2.5GB ಖಾಲಿಯಾದ ನಂತರ ನೀವು ಅನ್ಲಿಮಿಟೆಡ್ ಡೇಟಾ ಬಳಸಬಹುದು ಆದರೆ ಇದರ ಸ್ಪೀಡ್ ಮಾತ್ರ 64Kbps ವೇಗಕ್ಕೆ ಇಳಿಯುತ್ತದೆ.
ಅಲ್ಲದೆ ಇದರಲ್ಲಿ ನಿಮಗೆ ಹೆಚ್ಚುವರಿಯಾಗಿ JioTV, JioCinema ಮತ್ತು JioCloud Subscription ಸಹ ಲಭ್ಯವಿರುತ್ತದೆ. ಈ ಹೊಸ ರಿಲಯನ್ಸ್ ಜಿಯೋ ರೂ. 2025 ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 100 ಉಚಿತ SMS ಸಹ ಪಡೆಯಬಹುದು. ಆದ್ದರಿಂದ ರಿಲಯನ್ಸ್ ಜಿಯೋ ರೂ. 2025 ರಿಚಾರ್ಜ್ ಯೋಜನೆಯ ಆಫರ್ ಯಾವಾಗ ಬೇಕಾದರೂ ಮುಗಿಯಬಹುದು.
Also Read: 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾವುಳ್ಳ ಸ್ಯಾಮ್ಸಂಗ್ 5G ಫೋನ್ ಕೇವಲ ₹11,999 ರೂಗಳಿಗೆ ಲಭ್ಯ!
ಹೆಚ್ಚುವರಿಯಾಗಿ ಈ ಯೋಜನೆಯನ್ನು ರಿಚಾರ್ಜ್ ಮಾಡುವುದರಿಂದ ಬರೋಬ್ಬರಿ ₹2150 ರೂಗಳ ಕೂಪನ್ ಸಹ ನೀಡುತ್ತಿದೆ. ಈ ಯೋಜನೆಯನ್ನು ಹೊಂದಿದ್ದ ನಂತರ Ajio ಮೂಲಕ ಸುಮಾರು ₹2999 ರೂಗಳ ಪ್ರಾಡಕ್ಟ್ ಖರೀದಿಸುವುದರಿಂದ ಬರೋಬ್ಬರಿ ₹500 ರೂಗಳ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ EaseMyTrip.com ಮೂಲಕ ಟಿಕೆಟ್ ಬುಕ್ ಮಾಡುವುದರಿಂದ ಸುಮಾರು ₹1500 ರೂಗಳ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ Swiggy ಮೂಲಕ ₹499 ರೂಗಳವರೆಗಿನ ಆರ್ಡರ್ ಮಾಡುವುದರಿಂದ ₹150 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು.