Get Free Netflix, Prime Video and more: ಭಾರತದಲ್ಲಿ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಡೇಟಾವನ್ನು ನೀರಿನಂತೆ ನೀಡುತ್ತಿದೆ. ಇದಕ್ಕಾಗಿ ಉತ್ತಮ ಉದಾಹರಣೆ ಅಂದ್ರೆ ಕಳೆದ ತಿಂಗಳು ಕಂಪನಿ ಕೇವಲ 29 ರೂಗಳಿಗೆ ಹೊಸ JioCinema Premium ನಲ್ಲಿ ಹೊಚ್ಚ ಹೊಸ ಜಾಹೀರಾತು-ಮುಕ್ತ ಆಯ್ಕೆಯ ಪ್ಯಾಕ್ ಅನ್ನು ಸೇರಿಸಿರುವುದು. ವಿವಿಧ OTT ಸೇವೆಗಳಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲು ಬಯಸದ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ (Reliance Jio) ಹೊಸ ಬಂಡಲ್ ಸ್ಟ್ರೀಮಿಂಗ್ ಯೋಜನೆಯನ್ನು ಪ್ರಾರಂಭಿಸಿದೆ. ಜಿಯೋ ಫೈಬರ್ ‘ಅಲ್ಟಿಮೇಟ್ ಸ್ಟ್ರೀಮಿಂಗ್ ಪ್ಲಾನ್’ ಹೆಸರಿನ ಈ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಕೇವಲ 888 ರೂಗಳಿಗೆ ಬಿಡುಗಡೆಗೊಳಿಸಿದೆ.
ಈ ರಿಲಯನ್ಸ್ ಜಿಯೋ (Reliance Jio) ಹೊಸ ಬಂಡಲ್ ಸ್ಟ್ರೀಮಿಂಗ್ ಯೋಜನೆಯನ್ನು ಜಿಯೋ ಫೈಬರ್ ಮತ್ತು ಜಿಯೋ ಏರ್ ಫೈಬರ್ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಎನ್ನುವುದನ್ನು ಗಮನದಲ್ಲಿಡಬೇಕು. ಇದರ ಅನುಕೂಲಗಳನ್ನು ನೋಡುವುದಾದರೆ ಈ ಯೋಜನೆಯಲ್ಲಿ 30Mbps ವೇಗದೊಂದಿಗೆ 15 ಕ್ಕೂ ಹೆಚ್ಚು OTT ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಪಡೆಯುತ್ತೀರಿ. Disney+ Hotstar, Sony Liv, Zee5, Sun NXT ನಂತಹ ಜನಪ್ರಿಯ ಮತ್ತು ದೊಡ್ಡ OTT ಅಪ್ಲಿಕೇಶನ್‌ಗಳ ಹೊರತಾಗಿ Netflix, Prime Video, JioCinema Premium ಸಹ ಸೇರಿವೆ. ಅಷ್ಟೇಯಲ್ಲದೆ ಇದರಲ್ಲಿ ನಿಮಗೆ Hoichoi, Discovery+, ALTBalaji ನಂತಹ ಪ್ರಾದೇಶಿಕ ಅಪ್ಲಿಕೇಶನ್‌ಗಳು ಸಹ ಲಭ್ಯವಿದೆ.
ಈ ಯೋಜನೆ ಹೊಸದಾದರೂ ರಿಲಯನ್ಸ್ ಜಿಯೋ (Reliance Jio) ತನ್ನ ಹಳೆಯ ಬಳಕೆದಾರರನ್ನು ಮರೆತಿಲ್ಲ. ನೀವು ಪ್ರಸ್ತುತ ಪ್ರಿಪೇಯ್ಡ್ ಪ್ಲಾನ್‌ನಲ್ಲಿದ್ದರೂ ಅಥವಾ ಕಡಿಮೆ ವೇಗದ JioFiber/AirFiber ಪ್ಲಾನ್‌ನಲ್ಲಿದ್ದರೂ (10 Mbps ಅಥವಾ 30 Mbps), ನೀವು ಈ ಪೋಸ್ಟ್‌ಪೇಯ್ಡ್ ಯೋಜನೆಗೆ ಸುಲಭವಾಗಿ ಅಪ್‌ಗ್ರೇಡ್ ಮಾಡಬಹುದು ಮತ್ತು ಟನ್‌ಗಳಷ್ಟು OTT ವಿಷಯವನ್ನು ಆನಂದಿಸಬಹುದು. ಜಿಯೋ ಇತ್ತೀಚೆಗೆ ಘೋಷಿಸಿದ ಐಪಿಎಲ್ ಧನ್ ಧನಾ ಧನ್ (IPL Dhan Dhana Dhan) ಆಫರ್ ಈ ಯೋಜನೆಯೊಂದಿಗೆ ಮಾನ್ಯವಾಗಿದೆ. ಈ ಕೊಡುಗೆಯ ಅಡಿಯಲ್ಲಿ ನೀವು ಜಿಯೋ ಹೋಮ್ ಬ್ರಾಡ್‌ಬ್ಯಾಂಡ್ ಸಂಪರ್ಕದಲ್ಲಿ 50 ದಿನಗಳ ರಿಯಾಯಿತಿ ಕೂಪನ್ ಅನ್ನು ಪಡೆಯಬಹುದು, ಇದು ಕ್ರಿಕೆಟ್‌ನ ಈ T20 ಋತುವಿನ ಎಲ್ಲಾ ಪಂದ್ಯಗಳನ್ನು ವೀಕ್ಷಿಸಲು ಸೂಕ್ತವಾಗಿದೆ.
ನೀವು JioCinema ಬಳಸುತ್ತಿದ್ದರೆ ನಿಮಗೂ ಒಳ್ಳೆಯ ಸುದ್ದಿಯಾಗಲಿದೆ ಯಾಕೆಂದರೆ ಜಿಯೋ ಸಿನಿಮಾ ತನ್ನ ಪ್ರೀಮಿಯಂ ಯೋಜನೆಯಲ್ಲಿ ಹೊಸ ಜಾಹೀರಾತು-ಮುಕ್ತ ಆಯ್ಕೆಯನ್ನು ಸೇರಿಸಿದೆ. ಈಗ ರಿಲಯನ್ಸ್ ಜಿಯೋ (Reliance Jio) ಬಳಕೆದಾರರು ಕೇವಲ 29 ರೂಗಳಲ್ಲಿ JioCinema ಪ್ರೀಮಿಯಂನ ಚಂದಾದಾರಿಕೆಯನ್ನು ತೆಗೆದುಕೊಳ್ಳಬಹುದು. ಇದರಲ್ಲಿ ನೀವು 4K ಕಂಟೆಂಟ್, ಆಫ್‌ಲೈನ್ ವೀಕ್ಷಣೆ ಸೌಲಭ್ಯ ಅನೇಕ ಸರಣಿಗಳು ಮತ್ತು ಚಲನಚಿತ್ರಗಳಿಗೆ ಪ್ರವೇಶವನ್ನು ಪಡೆಯುತ್ತೀರಿ. ಈ ಯೋಜನೆಯು ಒಂದು ಸಮಯದಲ್ಲಿ ಒಂದು ಸಾಧನದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ.
Also Read: DoT Big Announcement: ಬರೋಬ್ಬರಿ 28,000 ಮೊಬೈಲ್‌ಗಳು ಮತ್ತು 20 ಲಕ್ಷಕ್ಕೂ ಅಧಿಕ ಮೊಬೈಲ್ ನಂಬರ್ ಸ್ಥಗಿತ!