ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಈ ಬಾರಿ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಫರ್ ವೊಂದನ್ನು ನೀಡಲು ಮುಂದಾಗಿದ್ದು ತನ್ನ ಬಳಕೆದಾರರಿಗೆ ಭರಪೂರ ಮನರಂಜನೆಯನ್ನು ಒದಗಿಸಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜಿಯೋ ಬಳಕೆದಾರರಿಗೆ ಈ ಆಫರ್ ಮೆಚ್ಚುಗೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. Disney + Hotstar VIP ಸಹಭಾಗಿತ್ವದಲ್ಲಿ ಜಿಯೋ ಪ್ರಿಪೇಯ್ಡ್ ಬಳಕೆದಾರರಿಗಾಗಿ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾರಿಕೆಯನ್ನು 1 ವರ್ಷದ ಅವಧಿಗೆ ಉಚಿತವಾಗಿ ನೀಡಲಿದೆ ಎನ್ನಲಾಗಿದೆ.
ಜಿಯೋ ತನ್ನ ಮಾಸಿಕ, ವಾರ್ಷಿಕ ಪ್ಯಾಕ್‌ಗಳು ಮತ್ತು ಡೇಟಾ ಆಡ್-ಆನ್ ವೋಚರ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಿಪೇಯ್ಡ್ ಬಳಕೆದಾರರಿಗೆ Disney + Hotstar VIP ಚಂದಾದಾರಿಕೆಯನ್ನು 1 ವರ್ಷಕ್ಕೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡಲಿದೆ ಮತ್ತು ಇದರೊಂದಿಗೆ ಅನ್ಲಿಮಿಟೆಡ್ ಧ್ವನಿ, ಡೇಟಾ, ಅಪ್ಲಿಕೇಶನ್‌ಗಳು ಮತ್ತು ಇತರ ಪ್ರಯೋಜನಗಳಲು ಲಭ್ಯವಿರಲಿದೆ. ಈ ಪಾಲುದಾರಿಕೆಯು ಜಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಬಳಕೆದಾರರಿಗೆ ಭಾರಿ ಪ್ರಯೋಜನವನ್ನು ನೀಡುತ್ತದೆ. ಕ್ರಾಂತಿಕಾರಿ ವಿಡಿಯೋ-ಆನ್-ಡಿಮಾಂಡ್ ಕಂಟೆಂಟ್‌ಗಳು ಅತ್ಯುನ್ನತ ಡಿಜಿಟಲ್ ಪ್ಲಾಟ್‌ಫಾರ್ಮ್ ಎಲ್ಲರಿಗೂ ಸುಲಭವಾಗಿ ದೊರೆಯಲಿದೆ.
ಜಿಯೋ ಬಳಕೆದಾರರು ರೂ.401ಕ್ಕೆ ದೊರೆಯಲಿರುವ ಮಾಸಿಕ ಯೋಜನೆಯನ್ನು ರೀಚಾರ್ಜ್ ಮಾಡಿಸಿಕೊಂಡರೆ 28 ದಿನಗಳವರೆಗೆ ವ್ಯಾಲಿಡಿಟಿಯನ್ನು ಪಡೆಯಲಿದ್ದಾರೆ. ಇದರೊಂದಿಗೆ 90 GB ಡಾಟಾ, ಅನಿಯಮಿತ ಧ್ವನಿ ಕರೆ ಮತ್ತು ಜಿಯೋ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಹೊಸದಾಗಿ ಈ ಯೋಜನೆಯೊಂದಿಗೆ ಬಳಕೆದಾರರಿಗೆ 399 ರೂ.ಗಳ ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯ 1 ವರ್ಷದ ಸಬ್‌ಸ್ಕ್ರಿಪ್ಷನ್ ಉಚಿತವಾಗಿ ದೊರೆಯಲಿದೆ.
ಇದಲ್ಲದೇ ಜಿಯೋ ಬಳಕೆದಾರರು ರೂ.2599ಕ್ಕೆ ದೊರೆಯಲಿರುವ ವಾರ್ಷಿಕ ಯೋಜನೆಯನ್ನು ರೀಚಾರ್ಜ್ ಮಾಡಿಸಿಕೊಂಡರೆ 365 ದಿನಗಳವರೆಗೆ ವ್ಯಾಲಿಡಿಟಿಯನ್ನು ಪಡೆಯಲಿದ್ದಾರೆ. ಇದರೊಂದಿಗೆ 740 GB ಡಾಟಾ, ಅನಿಯಮಿತ ಧ್ವನಿ ಕರೆ ಮತ್ತು ಜಿಯೋ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಹೊಸದಾಗಿ ಈ ಯೋಜನೆಯೊಂದಿಗೆ ಬಳಕೆದಾರರಿಗೆ 399 ರೂ.ಗಳ ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯ 1 ವರ್ಷದ ಸಬ್‌ಸ್ಕ್ರಿಪ್ಷನ್ ಉಚಿತವಾಗಿ ದೊರೆಯಲಿದೆ.
ಈ ಮೇಲಿನ ಯೋಜನೆಗಳನ್ನು ಮಾತ್ರವಲ್ಲದೇ ಜಿಯೋ ಬಳಕೆದಾರರು ಡೇಟಾ ಆಡ್-ಆನ್ ವೋಚರ್‌ಗಳ ಕಾಂಬೊ-ಪ್ಯಾಕ್ ಅನ್ನು ರೀಚಾರ್ಜ್ ಮಾಡಿಸಿಕೊಂಡರೂ ಸಹ ಈ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯ ಸಬ್‌ಸ್ಕ್ರಿಪ್ಷನ್ ಪಡೆದುಕೊಳ್ಳಬಹುದಾಗಿದೆ. ಪ್ಯಾಕ್‌ಗಳು ರೂ.612 ಗಳಿಂದ ಪ್ರಾರಂಭವಾಗುತ್ತದೆ. (51 ರೂ.ಗಳ 12 ವೋಚರ್ಸ್ ಗಳು) ಡೇಟಾ ಪ್ರಯೋಜನಗಳು ಮತ್ತು 399 ರೂ ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯ 1 ವರ್ಷದ ಸಬ್‌ಸ್ಕ್ರಿಪ್ಷನ್ ದೊರೆಯಲಿದೆ.
ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಇತ್ತೀಚಿನ ಬ್ಲಾಕ್‌ಬಸ್ಟರ್ ಬಾಲಿವುಡ್ ಚಲನಚಿತ್ರಗಳಿಗೆ (ಬಾಘಿ 3, ಇಂಗ್ಲಿಷ್ ಮಿಡಿಯಮ್, ತನ್ಹಾಜಿ), ಸೂಪರ್ ಹೀರೋ ಚಲನಚಿತ್ರಗಳು (ಅವೆಂಜರ್ಸ್: ಎಂಡ್ ಗೇಮ್), ಇತ್ತೀಚಿನ ಅನಿಮೇಷನ್ ಚಲನಚಿತ್ರಗಳು (ದಿ ಲಯನ್ ಕಿಂಗ್, ಫ್ರೋಜನ್) ಸೇರಿದಂತೆ ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಡಬ್ ಮಾಡಲಾದ ಜಾಗತಿಕ ಚಲನಚಿತ್ರಗಳು ಮತ್ತು ಪ್ರದರ್ಶನಗಳನ್ನು ಪದರ್ಶಿಸಲಿದೆ. II), ಮಕ್ಕಳ ನೆಚ್ಚಿನ ಪಾತ್ರಗಳು (ಮಿಕ್ಕಿ ಮೌಸ್, ಡೊರೊಮನ್), ಎಕ್ಸ್‌ಕ್ಲೂಸಿವ್ ಹಾಟ್‌ಸ್ಟಾರ್ ವಿಶೇಷಗಳು (ವಿಶೇಷ ಓಪ್ಸ್, ಕ್ರಿಮಿನಲ್ ಜಸ್ಟೀಸ್), ಅನಿಯಮಿತ ಲೈವ್ ಕ್ರೀಡೆಗಳು ಮತ್ತು ಇನ್ನಷ್ಟು ಶೋಗಳು ಇದರಲ್ಲಿ ದೊರೆಯಲಿದೆ.