
ರಿಲಯನ್ಸ್ ಜಿಯೋ (Reliance Jio) ತನ್ನ ಉಚಿತ ಐಪಿಎಲ್ ಕೊಡುಗೆಯನ್ನು ವಿಸ್ತರಿಸಿದೆ.
ಕೇವಲ 299 ರೂಗಳಿಗಿಂತ ಹೆಚ್ಚಿನ ರೀಚಾರ್ಜ್ಗಳೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಬಹುದು.
ರಿಲಯನ್ಸ್ ಜಿಯೋ (Reliance Jio) ಉಚಿತ ಐಪಿಎಲ್ ಕೊಡುಗೆಯನ್ನು ಏಪ್ರಿಲ್ 2025 ರವರೆಗೆ ವಿಸ್ತರಿಸಿದೆ.
FREE IPL Streaming: ದೇಶದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ತನ್ನ ಉಚಿತ ಐಪಿಎಲ್ ಕೊಡುಗೆಯನ್ನು 15ನೇ ಏಪ್ರಿಲ್ 2025 ರವರೆಗೆ ವಿಸ್ತರಿಸಿದೆ. ಆಸಕ್ತ ಗ್ರಾಹಕರಿಗೆ ಜಿಯೋ ಹಾಟ್‌ಸ್ಟಾರ್ ಅನ್ನು ಕೇವಲ 299 ರೂಗಳಿಗಿಂತ ಹೆಚ್ಚಿನ ರೀಚಾರ್ಜ್ಗಳೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಈ ರಿಲಯನ್ಸ್ ಜಿಯೋ (Reliance Jio ಕೊಡುಗೆಯು 4K ಗುಣಮಟ್ಟದೊಂದಿಗೆ ಬರೋಬ್ಬರಿ 90 ದಿನಗಳಿಗೆ ಉಚಿತ ಜಿಯೋ ಹಾಟ್ಸ್ಟಾರ್(JioHostar) ಚಂದಾದಾರಿಕೆಯನ್ನು ಮತ್ತು ಜಿಯೋ ಫೈಬರ್ ಅಥವಾ ಜಿಯೋ ಏರ್ ಫೈಬರ್ನ ಉಚಿತ ಪ್ರಯೋಗವನ್ನು ಒಳಗೊಂಡಿದೆ.
Jio ವಿಶೇಷ ಕೊಡುಗೆ (FREE IPL Streaming) ವಿಸ್ತರಣೆ
ಜನಪ್ರಿಯ ಜಿಯೋ ಮಾಲೀಕ ಮುಕೇಶ್ ಅಂಬಾನಿ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಜಿಯೋ ತನ್ನ ಪ್ರಸ್ತುತ ಮತ್ತು ಹೊಸ ಗ್ರಾಹಕರಿಗೆ ವಿಶೇಷ ಕ್ರಿಕೆಟ್ ಕೊಡುಗೆಯನ್ನು 15ನೇ ಏಪ್ರಿಲ್ 2025 ರವರೆಗೆ ವಿಸ್ತರಿಸಿದೆ. ಈ ಮೊದಲು ಈ ಕೊಡುಗೆ 31ನೇ ಮಾರ್ಚ್ 2025 ಕ್ಕೆ ಕೊನೆಗೊಳ್ಳಬೇಕಿತ್ತು ಆದರೆ ಈ ಕೊಡುಗೆಯ ಅಡಿಯಲ್ಲಿ 299 ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯೊಂದಿಗೆ ಹೊಸ ಜಿಯೋ ಸಿಮ್ ಸಂಪರ್ಕವನ್ನು ಪಡೆಯುವ ಅಥವಾ ಕನಿಷ್ಠ 299 ರೂ.ಗಳಿಗೆ ರೀಚಾರ್ಜ್ ಮಾಡುವ ಜಿಯೋ ಗ್ರಾಹಕರು ಜಿಯೋ ಹಾಟ್ಸ್ಟಾರ್ನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.
Also Read: iQOO Z10 ಬರೋಬ್ಬರಿ 7300mAh ಬ್ಯಾಟರಿಯೊಂದಿಗೆ ಲಾಂಚ್ ಡೇಟ್ ಕಂಫಾರ್ಮ್! ಬೆಲೆ ಮತ್ತು ಫೀಚರ್ಗಳೇನು?
ಜಿಯೋ ಗ್ರಾಹಕರು 100 ರೂ.ಗೆ ಆಡ್-ಆನ್ ಪ್ಯಾಕ್ ಪಡೆಯಿರಿ
ಈಗಾಗಲೇ ರೀಚಾರ್ಜ್ ಮಾಡಿದ ಗ್ರಾಹಕರು 100 ರೂ.ಗೆ ಆಡ್-ಆನ್ ಪ್ಯಾಕ್ ತೆಗೆದುಕೊಳ್ಳುವ ಮೂಲಕ ಈ ಕೊಡುಗೆಯನ್ನು ಪಡೆಯಬಹುದು. ಇದು ರಿಲಯನ್ಸ್ ಜಿಯೋ ಗ್ರಾಹಕರಿಗೆ ಐಪಿಎಲ್ ಋತುವನ್ನು ಸಂಪೂರ್ಣವಾಗಿ ಆನಂದಿಸುವ ಅವಕಾಶವನ್ನು ನೀಡುತ್ತದೆ. ಈ ಅನಿಯಮಿತ ಕ್ರಿಕೆಟ್ ಕೊಡುಗೆಯೊಂದಿಗೆ ಗ್ರಾಹಕರು ಟಿವಿ / ಮೊಬೈಲ್ನಲ್ಲಿ 90 ದಿನಗಳವರೆಗೆ ಉಚಿತ ಜಿಯೋ ಹಾಟ್ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತಾರೆ.
ಅದೂ 4ಕೆ ಗುಣಮಟ್ಟದಲ್ಲಿ. ಈ ಕಾರಣದಿಂದಾಗಿ ಗ್ರಾಹಕರು ಐಪಿಎಲ್ ಕ್ರಿಕೆಟ್ ಋತುವನ್ನು ಉಚಿತವಾಗಿ ಆನಂದಿಸಬಹುದು. ಜಿಯೋ ಹಾಟ್ಸ್ಟಾರ್ ಪ್ಯಾಕ್ 22ನೇ ಮಾರ್ಚ್ 2025 ರಿಂದ 90 ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದರೊಂದಿಗೆ ಜಿಯೋ ಫೈಬರ್ ಅಥವಾ ಜಿಯೋ ಏರ್ ಫೈಬರ್ನ ಉಚಿತ ಪ್ರಾಯೋಗಿಕ ಸಂಪರ್ಕವನ್ನು ಮನೆಗಳಿಗೆ ಜಿಯೋ ನೀಡುತ್ತಿದೆ. ಅಲ್ಟ್ರಾ-ಫಾಸ್ಟ್ ಇಂಟರ್ನೆಟ್ನ ಉಚಿತ ಪ್ರಾಯೋಗಿಕ ಸಂಪರ್ಕವು 50 ದಿನಗಳವರೆಗೆ ಉಚಿತವಾಗಿರುತ್ತದೆ.
ಗ್ರಾಹಕರು 4K ನಲ್ಲಿ ಕ್ರಿಕೆಟ್ ನೋಡುವ ಅತ್ಯುತ್ತಮ ಅನುಭವದೊಂದಿಗೆ ಅತ್ಯುತ್ತಮ ಮನೆ ಮನರಂಜನೆಯನ್ನು ಸಹ ಆನಂದಿಸಬಹುದು. ಜಿಯೋ ಫೈಬರ್ ಅಥವಾ ಜಿಯೋ ಏರ್ ಫೈಬರ್ನ ಉಚಿತ ಪ್ರಾಯೋಗಿಕ ಸಂಪರ್ಕವು 800+ ಟಿವಿ ಚಾನೆಲ್ಗಳು, 11+ ಒಟಿಟಿ ಅಪ್ಲಿಕೇಶನ್ಗಳು ಮತ್ತು ಅನಿಯಮಿತ ವೈ-ಫೈ ಅನ್ನು ಒಳಗೊಂಡಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile