Reliance Jio
Jio Combo Plan: ರಿಲಯನ್ಸ್ ಜಿಯೋ ತನ್ನ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದ ನಂತರ ಕಂಪನಿಯು ಹೊಸ ಕೊಡುಗೆಗಳನ್ನು ಪರಿಚಯಿಸಿರುವುದರಿಂದ ಬಳಕೆದಾರರು ಸಂತೋಷಪಡಲು ಕಾರಣವಾಗಿದೆ. ರಿಲಯನ್ಸ್ ಜಿಯೋ (Reliance Jio) ತನ್ನ ಲಕ್ಷಾಂತರ ಗ್ರಾಹಕರಿಗೆ ಪರಿಹಾರವನ್ನು ಒದಗಿಸಲು ಜಿಯೋ ತನ್ನ ಕೈಗೆಟುಕುವ ಯೋಜನೆಗಳಲ್ಲಿ ಒಂದಾದ 1029 ಯೋಜನೆಯನ್ನು ಸದ್ದಿಲ್ಲದೆ ನವೀಕರಿಸಿದೆ. ಈ Reliance Jio ಈ 1029 ರೂಗಳ ಕಾಂಬೋ ರಿಚಾರ್ಜ್ ಪ್ಲಾನ್ 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.
ಮನರಂಜನಾ ಪ್ಯಾಕ್ ಬಯಸುವವರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ರೀಚಾರ್ಜ್ ಯೋಜನೆಯೊಂದಿಗೆ ನೀಡಲಾಗುವ OTT ಪ್ರಯೋಜನವನ್ನು ಬದಲಾಯಿಸಲಾಗಿದೆ. ನೀವು ಹೊಸ ರೀಚಾರ್ಜ್ ಯೋಜನೆಯನ್ನು ಪಡೆಯುವುದನ್ನು ಪರಿಗಣಿಸುತ್ತಿದ್ದರೆ ಈ ಯೋಜನೆಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ರಿಲಯನ್ಸ್ ಜಿಯೋ 1029 ರೂ. ಯೋಜನೆಯಲ್ಲಿ ಗಮನಾರ್ಹವಾದ ನವೀಕರಣವನ್ನು ಮಾಡಿದೆ. ಈ ಯೋಜನೆಯಲ್ಲಿ ಲಭ್ಯವಿರುವ ಕೊಡುಗೆಗಳ ವಿವರಗಳನ್ನು ನೋಡುವುದಾದರೆ ರಿಲಯನ್ಸ್ ಜಿಯೋದ 1029 ರೂ. ಯೋಜನೆಯೊಂದಿಗೆ ನೀವು 84 ದಿನಗಳ ದೀರ್ಘಾವಧಿಯ ಮಾನ್ಯತೆಯನ್ನು ನೀಡುತ್ತದೆ.
ಈ ಯೋಜನೆಯು ಒಟ್ಟು 168GB ಡೇಟಾವನ್ನು ನೀಡುತ್ತದೆ. ಇದು ನಿಮಗೆ ಪ್ರತಿದಿನ 2GB ವರೆಗೆ ಹೈ-ಸ್ಪೀಡ್ ಡೇಟಾವನ್ನು ಬಳಸಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ ನೀವು ಪ್ರತಿದಿನ 100 ಉಚಿತ SMS ಗಳ ಪ್ರಯೋಜನವನ್ನು ಆನಂದಿಸುವಿರಿ. ಈ ಜಿಯೋ ಯೋಜನೆಯು ಅನಿಯಮಿತ ನಿಜವಾದ 5G ಡೇಟಾದೊಂದಿಗೆ ಬರುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ನಿಮ್ಮ ಪ್ರದೇಶದಲ್ಲಿ 5G ಡೇಟಾ ಸಂಪರ್ಕ ಲಭ್ಯವಿದ್ದರೆ ನೀವು ಅನಿಯಮಿತ 5G ಡೇಟಾವನ್ನು ಉಚಿತವಾಗಿ ಆನಂದಿಸಬಹುದು. ದೈನಂದಿನ ಡೇಟಾ ಮಿತಿಯನ್ನು ಮೀರಿದ ನಂತರವೂ ನೀವು 64Kbps ವೇಗದಲ್ಲಿ ಡೇಟಾ ಸಂಪರ್ಕವನ್ನು ಹೊಂದಿರುತ್ತೀರಿ.
Also Read: Realme P3 Series ಅತಿ ಶಿಘ್ರದಲ್ಲೇ GT Boost ಫೀಚರ್‌ನೊಂದಿಗೆ ಈ ತಿಂಗಳು ಬಿಡುಗಡೆಗೆ ಸಜ್ಜಾಗಿದೆ!
ಈ ಜಿಯೋ ಯೋಜನೆಯನ್ನು ನೀವು ರಿಚಾರ್ಜ್ ಮಂಡಿಕೊಂಡರೆ ಬರೋಬ್ಬರಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಅಂದ್ರೆ ಸುಮಾರು 3 ತಿಂಗಳಿಗೆ ಉಚಿತ ಅಮೆಜಾನ್ ಪ್ರೈಮ್ ಲೈಟ್ OTT ಸ್ಟ್ರೀಮಿಂಗ್‌ಗೆ ಪಡೆಯಬಹುದು. ಜಿಯೋ ಈ ಯೋಜನೆಯಲ್ಲಿ ಅಮೆಜಾನ್ ಪ್ರೈಮ್ ಲೈಟ್‌ನ ಚಂದಾದಾರಿಕೆಯನ್ನು ಪಡೆಯುವ ಸರಳ ಮಾರ್ಗ ಇದಾಗಿದೆ. ಈ ಹಿಂದೆ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ 84 ದಿನಗಳ ಉಚಿತ ಪ್ರವೇಶವನ್ನು ನೀಡಲಾಗುತ್ತಿತ್ತು ಆದರೆ ಈಗ OTT ಪ್ರಯೋಜನವನ್ನು ಅಮೆಜಾನ್ ಪ್ರೈಮ್ ಲೈಟ್‌ಗೆ ಬದಲಾಯಿಸಲಾಗಿದೆ.