ಭಾರತದಲ್ಲಿ Jio Bharat B1 4G ಫೀಚರ್ ಫೋನ್ ಎಂಬ ಹೆಸರಿನ ಹೊಸ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಮೊದಲು ಜಿಯೋ ಮೂಲಭೂತವಾಗಿ ಅದರ Jio Bharat V2 ಮತ್ತು Jio Bharat K1 ಕಾರ್ಬನ್ ಮಾದರಿಗಳನ್ನು ಕೊಂಚ ಬದಲಾವಣೆಗಳಿಂದ ನವೀಕರಿಸಿದ ಆವೃತ್ತಿಯನ್ನು ಮಾರುಕಟ್ಟೆಗೆ ನೀಡಿದೆ. ಈಗ ಮತ್ತೇ ಜಿಯೋ ಭಾರತ್ ಬಿ1 ಫೋನ್ ಅನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ Jio Bharat ಸರಣಿ ಎಂದು ಪಟ್ಟಿ ಮಾಡಲಾಗಿದೆ. ಜಿಯೋ ಟೆಲಿಕಾಂ ಸೇವೆಗಳ ಹೊರತಾಗಿ ಮಾರುಕಟ್ಟೆಯಲ್ಲಿ ಅತಿ ಅಕೆಡಿಮೆ ಬೆಲೆಯ 4G ಫೀಚರ್ ಫೋನ್‌ಗಳನ್ನು ನೀಡಲು ಸಹ ಹೆಸರುವಾಸಿಯಾಗಿದೆ.
ಇದನ್ನೂ ಓದಿ: Amazon ಸೇಲ್‌ನಲ್ಲಿ ಬೆಸ್ಟ್ Smart Watch ಮೇಲೆ ಎಂದು ಕಾಣದ ಭರ್ಜರಿ ಡೀಲ್ ಮತ್ತು ಆಫರ್‌ಗಳು
ಈ ಲೇಟೆಸ್ಟ್ Jio Bharat B1 Series ಬೆಳೆಯನ್ನು ನೋಡುವುದಾದರೆ ಇದನ್ನು ನೀವು ಕೇವಲ 1,299 ಬೆಲೆಯ ಈ ಹೊಸ ಜಿಯೋದಿಂದ ಮತ್ತೊಂದು ಅತಿ ಕಡಿಮೆ ಬೆಲೆಯ 4G ಫೋನ್ ಆಗಿದ್ದು 2.4 ಇಂಚಿನ ಸ್ಕ್ರೀನ್ ಮತ್ತು 2000mAh ಬ್ಯಾಟರಿಯನ್ನು ಹೊಂದಿದೆ. ಇದು ಸ್ವಲ್ಪ ಉತ್ತಮವಾದ ವಿಭಾಗದಲ್ಲಿ ಸ್ಥಾನ ಪಡೆದಿದೆ. ಹೊಸ Jio Bharat B1 ಫೋನ್ ಅದರ ಹಿಂದಿನ ರೂಪಾಂತರಗಳಿಗೆ ಹೋಲಿಸಿದರೆ ಅದರ ಸ್ಕ್ರೀನ್ ಮತ್ತು ಬ್ಯಾಟರಿ ಸಾಮರ್ಥ್ಯದಲ್ಲಿ ಸ್ವಲ್ಪ ಸುಧಾರಣೆಗಳನ್ನು ಮಾತ್ರ ನೀಡಿದೆ. ಹೊರೆತು ಪಡಿಸಿ ದೊಡ್ಡದಾದ ಯಾವುದೇ ಪ್ರಮುಖ ಬದಲಾವಣೆಗಳನ್ನು ಪರಿಚಯಿಸುವುದಿಲ್ಲ. ಫೋನ್‌ನಲ್ಲಿ ಕ್ಯಾಮೆರಾವನ್ನು ಅಳವಡಿಸಲಾಗಿದೆ ಎಂದು ಉತ್ಪನ್ನದ ಚಿತ್ರಗಳು ತೋರಿಸುತ್ತಿರುವಾಗ ಕ್ಯಾಮೆರಾದ ಮೆಗಾಪಿಕ್ಸೆಲ್‌ಗಳ ಬಗ್ಗೆ ಯಾವುದೇ ಮಾಹಿತಿಯನ್ನು ಒದಗಿಸಲಾಗಿಲ್ಲ.
ಈ ಲೇಟೆಸ್ಟ್ ಜಿಯೋ ಫೋನ್ ಇತರ ಮಾದರಿಗಳಂತೆ ಜಿಯೋ ಅಪ್ಲಿಕೇಶನ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಏಕೆಂದರೆ ಬಳಕೆದಾರರು ಚಲನಚಿತ್ರಗಳು, ವೀಡಿಯೊಗಳು ಮತ್ತು ಕ್ರೀಡಾ ಮುಖ್ಯಾಂಶಗಳನ್ನು ಆನಂದಿಸಬಹುದು. ಜಿಯೋ ಹಕ್ಕುಗಳ ಪ್ರಕಾರ ಜಿಯೋ ಭಾರತ್ ಸರಣಿಯು ಬಳಕೆಗಾಗಿ 23 ಪ್ರಾದೇಶಿಕ ಭಾಷೆಗಳನ್ನು ಫೋನ್ ಬೆಂಬಲಿಸುತ್ತದೆ. ಅಲ್ಲದೆ ಈ ಫೋನ್ ಅಲ್ಲಿ ನೀವು UPI ಪೇಮೆಂಟ್ ಅನ್ನು ಸಹ ಮಾಡಬಹುದು.
ವೆಬ್‌ಸೈಟ್‌ನ ಪ್ರಕಾರ Jio ನ ಪೂರ್ವಸ್ಥಾಪಿತ ಅಪ್ಲಿಕೇಶನ್‌ಗಳನ್ನು ಫೋನ್‌ನೊಂದಿಗೆ ಸೇರಿಸಲಾಗಿದೆ ಮತ್ತು Jio ಅಲ್ಲದ SIM ಕಾರ್ಡ್‌ಗಳನ್ನು JioBharat ಫೋನ್‌ಗಳಲ್ಲಿ ಬಳಸಲಾಗುವುದಿಲ್ಲ. ಈ ಲೇಖನದ ಸಮಯದಲ್ಲಿ ಈ ಹೊಸ Jio Bharat B1 ಫೋನ್ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಒಟ್ಟಾರೆಯಾಗಿ JioBharat B1 ಸರಣಿಯು ಹಿಂದಿನ ಮಾದರಿಗಳಿಗಿಂತ ಸ್ವಲ್ಪ ದೊಡ್ಡ ಸ್ಕ್ರೀನ್ ಮತ್ತು ಬ್ಯಾಟರಿಯೊಂದಿಗೆ ಮೂಲಭೂತ 4G ಫೋನ್ ಆಗಿದೆ.