ಭಾರತದಲ್ಲಿ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಹೆಚ್ಚುವರಿ ಡೇಟಾ, ವಾಯ್ಸ್ ಕರೆಗಳೊಂದಿಗೆ OTT ಚಂದಾದಾರಿಕೆಯನ್ನು ನೀಡುವ ಎಲ್ಲಾ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದ್ದು ಕೈಗಟಕುವ ಬೆಲೆಗೆ ಈ ಬಂಡಲ್ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ಪ್ಯಾಕ್‌ಗಳಲ್ಲಿ ನಿಮಗೆ Netflix, Hotstar, Sony Liv, Zee5 ನಂತಹ ಜನಪ್ರಿಯ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯೊಂದಿಗೆ ಲಭ್ಯವಿದೆ. ನಾವು ಈ ಲೇಖನದಲ್ಲಿ ನಿಮಗೆ ಜಿಯೋದ 909 ರೂಗಳ ಯೋಜನೆಯ ಬಗ್ಗೆ ವಿವರಿಸಿದ್ದು ಈ ರೀಚಾರ್ಜ್‌ನಲ್ಲಿ ಉಚಿತ ಚಂದಾದಾರಿಕೆ, ಅನಿಯಮಿತ ವಾಯ್ಸ್ ಕರೆಗಳು, ದೈನಂದಿನ 2GB ಹೈಸ್ಪೀಡ್ ಡೇಟಾದಂತಹ ಪ್ರಯೋಜನಗಳನ್ನು ಬಂಡಲ್‌ನಲ್ಲಿ ಲಭ್ಯವಿದೆ.
Also Read: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Network ಸಮಸ್ಯೆ ಕಡಿಮೆಗೊಳಿಸಲು ಈ ಟಿಪ್ಸ್ ಬಳಸಿ ಸಾಕು!
ಭಾರತದಲ್ಲಿ ನಿಮಗೆ ಒಂದೇ ಯೋಜನೆಯಲ್ಲಿ ನಿಮಗೆ 5G ಡೇಟಾ, ಕರೆ ಮತ್ತು OTT ಬೇಕಿದ್ದರೆ Reliance Jio ರೂ 909 ಯೋಜನೆ ನಿಮಗೆ ಸೂಕ್ತವಾಗಿದೆ. ಅಲ್ಲದೆ ಈ ಯೋಜನೆಯ ಮಾನ್ಯತೆ ರಿಚಾರ್ಜ್ ಮಾಡಿದ ದಿನದಿಂದ 84 ದಿನಗಳನ್ನು ಹೊಂದಿದೆ. ಈ ಪ್ರಿಪೇಯ್ಡ್ ಪ್ಯಾಕ್‌ನಲ್ಲಿ 2GB ದೈನಂದಿನ ಡೇಟಾವನ್ನು ನೀಡಲಾಗುತ್ತದೆ. ಅಂದರೆ ಗ್ರಾಹಕರು ಈ ಪ್ಯಾಕ್‌ನಲ್ಲಿ ಒಟ್ಟು 168GB ಡೇಟಾವನ್ನು ಬಳಸಬಹುದು. ಜಿಯೋದ ಈ ಯೋಜನೆಯಲ್ಲಿ ಪ್ರತಿದಿನ ಲಭ್ಯವಿರುವ ಡೇಟಾ ಮುಗಿದ ನಂತರ ವೇಗವು 64Kbps ಗೆ ಕಡಿಮೆಯಾಗುತ್ತದೆ.
ಈ ಪ್ರಿಪೇಯ್ಡ್ ಯೋಜನೆಯಲ್ಲಿ ಜಿಯೋ ಗ್ರಾಹಕರಿಗೆ ಅನಿಯಮಿತ ವಾಯ್ಸ್ ಕರೆಗಳನ್ನು ನೀಡಲಾಗುತ್ತದೆ. ಬಳಕೆದಾರರು ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸದೆ ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಮತ್ತು STD ಕರೆಗಳನ್ನು ಮಾಡಬಹುದು. ಈ ಪ್ಯಾಕ್‌ನಲ್ಲಿ ಪ್ರತಿದಿನ 100 ಉಚಿತ SMS ಸಹ ನೀಡಲಾಗುತ್ತದೆ. ಜಿಯೋದ ಈ ಪ್ಯಾಕ್‌ನಲ್ಲಿ Sony LIV, ZEE5, JioTV, JioCinema ಮತ್ತು JioCloud ನ ಚಂದಾದಾರಿಕೆಯು ಉಚಿತವಾಗಿ ಲಭ್ಯವಿದೆ.
ಜಿಯೋದ ಈ ಪ್ಯಾಕ್‌ನಲ್ಲಿ ಸೋನಿ LIV ಮತ್ತು ZEE5 ನ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಗ್ರಾಹಕರು JioTV ಅಪ್ಲಿಕೇಶನ್ ಮೂಲಕ ಈ ಸೇವೆಗಳಿಗೆ ಚಂದಾದಾರರಾಗಬಹುದು. ನೀವು Jio ನ 5G ನೆಟ್‌ವರ್ಕ್ ಬಳಸುತ್ತಿದ್ದರೆ ಈ ಪ್ಯಾಕ್‌ನಲ್ಲಿ ನೀವು ಅನಿಯಮಿತ 5G ಡೇಟಾವನ್ನು ಬಳಸಬಹುದು. ಈ ಯೋಜನೆಯಲ್ಲಿ ಲಭ್ಯವಿರುವ JioCinema ಚಂದಾದಾರಿಕೆಯು JioCinema ಪ್ರೀಮಿಯಂ ವಿಷಯಕ್ಕೆ ಪ್ರವೇಶವನ್ನು ಒದಗಿಸುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ