digit zero1 awards

Amazon Prime Free Plans: ಅನಿಯಮಿತ ಕರೆ ಮತ್ತು ಡೇಟಾದೊಂದಿಗೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಬೆಸ್ಟ್ ಪ್ಲಾನ್!

Amazon Prime Free Plans: ಅನಿಯಮಿತ ಕರೆ ಮತ್ತು ಡೇಟಾದೊಂದಿಗೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆಯ ಬೆಸ್ಟ್ ಪ್ಲಾನ್!
HIGHLIGHTS

ಅಮೆಜಾನ್ ಪ್ರೈಮ್ ಉಚಿತ (Amazon Prime Free Plans) ಪ್ರಯೋಜನದೊಂದಿಗೆ ಬರುವ ಪ್ರಿಪೇಯ್ಡ್ ಯೋಜನೆಗಳು

Jio, Airtel ಮತ್ತು Vi ಬಳಕೆದಾರರಿಗೆ ಹೆಚ್ಚುವರಿ ಹಣ ಖರ್ಚು ಮಾಡದೇ Free Amazon Prime ಲಭ್ಯವಿದೆ.

ಅನ್ಲಿಮಿಟೆಡ್ ಕರೆ ಮತ್ತು ಡೇಟಾದೊಂದಿಗೆ Amazon Prime Free Plans ಚಂದಾದಾರಿಕೆಯನ್ನು ನೀಡುವ ಬೆಸ್ಟ್ ಪ್ಲಾನ್!

Amazon Prime Free Plans: ದೇಶದಲ್ಲಿ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ತಮ್ಮ ಗ್ರಾಹಕರಿಗೆ ಉಚಿತ ಅಮೆಜಾನ್ ಪ್ರೈಮ್ (Free Amazon Prime) ಪ್ರಯೋಜನಗಳೊಂದಿಗೆ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತವೆ. ಅಲ್ಲದೆ ಪ್ರಸ್ತುತ ಆಯ್ದ ಯೋಜನೆಗಳಲ್ಲಿ ಮಾತ್ರ ಈ ಆಕರ್ಷಕ ಅನ್ಲಿಮಿಟೆಡ್ ಕರೆ ಮತ್ತು ಡೇಟಾದೊಂದಿಗೆ FREE Amazon Prime ಚಂದಾದಾರಿಕೆಯ ಪ್ರಯೋಜನವನ್ನು ನೀಡುತ್ತಿದೆ. ಈ Jio, Airtel ಮತ್ತು Vi ಯೋಜನೆಗಳನ್ನು ನೀಡುತ್ತಿದೆ. ಪ್ರಸ್ತುತ ಈ ಹೊಸ 2025 ವರ್ಷದಲ್ಲಿ ನಿಮಗೆ ಯಾವುದು ಉತ್ತಮ ಎಂದು ನೀವು ಸರಿಯಾಗಿ ಆಯ್ಕೆ ಮಾಡಬಹುದು.

ರಿಲಯನ್ಸ್ ಜಿಯೋ ರೂ. 1029 ಪ್ರಿಪೇಯ್ಡ್ ಯೋಜನೆ:

ಜಿಯೋದಿಂದ ರೂ 1029 ಯೋಜನೆಯು 84 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತದೆ. ಇದು 2GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 100 SMS/ದಿನವನ್ನು ನೀಡುತ್ತದೆ. ಯೋಜನೆಯ ಹೆಚ್ಚುವರಿ ಪ್ರಯೋಜನಗಳೆಂದರೆ Amazon Prime Lite, JioTV, JioCinema ಮತ್ತು JioCloud. ಈ ಯೋಜನೆಯು ಅನಿಯಮಿತ 5G ಅನ್ನು ಸಹ ನೀಡುತ್ತದೆ. ಅಮೆಜಾನ್ ಪ್ರೈಮ್ ಲೈಟ್ ಕೂಡ 84 ದಿನಗಳ ವ್ಯಾಲಿಡಿಟಿಯನ್ನು ಮಾತ್ರ ಹೊಂದಿದೆ.

Amazon Prime Free Plans subscription

Vi ರೂ 996 ಮತ್ತು 3799 ಪ್ರಿಪೇಯ್ಡ್ ಯೋಜನೆ:

ವೊಡಾಫೋನ್ ಐಡಿಯಾದ ಈ ರೂ 996 ಮತ್ತು ರೂ 3799 ಎರಡೂ ಯೋಜನೆಗಳೊಂದಿಗೆ ಬಳಕೆದಾರರು ಅನಿಯಮಿತ ಧ್ವನಿ ಕರೆ, 100 SMS/ದಿನ ಮತ್ತು 2GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಈ ಯೋಜನೆಗಳು Vi Hero ಅನ್‌ಲಿಮಿಟೆಡ್ ಪ್ರಯೋಜನಗಳನ್ನು ಸಹ ನೀಡುತ್ತವೆ ಮತ್ತು ಗ್ರಾಹಕರಿಗೆ Amazon Prime Lite ಅನ್ನು ನೀಡುತ್ತವೆ. ರೂ 996 ಪ್ಲಾನ್‌ನ ವ್ಯಾಲಿಡಿಟಿ 84 ದಿನಗಳು ಆದರೆ ರೂ 3799 ಪ್ಲಾನ್ 365 ದಿನಗಳವರೆಗೆ ಬರುತ್ತದೆ. Amazon Prime Lite ಚಂದಾದಾರಿಕೆಯ ವ್ಯಾಲಿಡಿಟಿ ಯೋಜನೆಯ ಮಾನ್ಯತೆಯಂತೆಯೇ ಇರುತ್ತದೆ.

ಏರ್‌ಟೆಲ್ ರೂ 1199 ಮತ್ತು ರೂ 838 ಪ್ರಿಪೇಯ್ಡ್ ಯೋಜನೆ:

ಭಾರ್ತಿ ಏರ್‌ಟೆಲ್ ಅಮೆಜಾನ್ ಪ್ರೈಮ್ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತದೆ. ಈ ರೂ 1199 ಯೋಜನೆಯು 2.5GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 84 ದಿನಗಳವರೆಗೆ 100 SMS/ದಿನವನ್ನು ಹೊಂದಿದೆ. ಈ ಯೋಜನೆಯೊಂದಿಗೆ ಪ್ರೈಮ್ ಚಂದಾದಾರಿಕೆಯು 84 ದಿನಗಳವರೆಗೆ ಇರುತ್ತದೆ.

Amazon Prime Free Plans subscription

Also Read: Amazon Sale 2025 ಮಾರಾಟದಲ್ಲಿ HP, Dell, ACER ಮತ್ತು LENOVO ಲ್ಯಾಪ್‌ಟಾಪ್‌ಗಳ ಮೇಲೆ ಬೆಸ್ಟ್ ಡೀಲ್ ಮತ್ತು ಆಫರ್‌ಗಳು!

ಬಳಕೆದಾರರು ಇಲ್ಲಿ ಅನಿಯಮಿತ 5G ಪಡೆಯಲು ಅರ್ಹರಾಗಿರುತ್ತಾರೆ. ಮತ್ತೊಂದೆಡೆ ಏರ್‌ಟೆಲ್‌ನ ರೂ 838 ಯೋಜನೆಯು 56 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಅಮೆಜಾನ್ ಪ್ರೈಮ್ ಅನ್ನು 56 ದಿನಗಳವರೆಗೆ ನೀಡುತ್ತದೆ. 3GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಸಹ ಪಡೆಯುತ್ತಾರೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo