2024 Plans: ಉಚಿತ Netflix ಜೊತೆಗೆ Unlimited ಕರೆ ಮತ್ತು ಡೇಟಾ ನೀಡುವ Jio ಮತ್ತು Airtel ಪ್ಲಾನ್‌ಗಳು | Tech News

2024 Plans: ಉಚಿತ Netflix ಜೊತೆಗೆ Unlimited ಕರೆ ಮತ್ತು ಡೇಟಾ ನೀಡುವ Jio ಮತ್ತು Airtel ಪ್ಲಾನ್‌ಗಳು | Tech News
HIGHLIGHTS

ರಿಲಯನ್ಸ್ ಜಿಯೋ (Reliance Jio) ಮತ್ತು ಭಾರ್ತಿ ಏರ್ಟೆಲ್ (Bharti Airtel) ಅತ್ಯುತ್ತಮ ಬಂಡಲ್ ಆಫರ್ ನೀಡುತ್ತಿವೆ.

ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಉಚಿತ ನೆಟ್‌ಫ್ಲಿಕ್ಸ್‌ (Netflix) ಬಯಸುವವರಾಗಿದ್ದರೆ ಈ ಯೋಜನೆಗಳು ನಿಮಗಾಗಲಿವೆ.

ಭಾರತದಲ್ಲಿನ ಜಿಯೋ ಮತ್ತು ಏರ್ಟೆಲ್ ಮೊಬೈಲ್ ಗ್ರಾಹಕರಿಗೆ ಪ್ರಸ್ತುತ ಲಭ್ಯವಿರುವ ಈ ಮೂರು ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳಿವು.

2024 Plans: ಈಗ ಹೊಸ ವರ್ಷದಲ್ಲಿ ನಿಮ್ಮ ರಿಚಾರ್ಜ್ ಮಾಡಲು ಯೋಚಿಸುತ್ತಿದ್ದರೆ ಒಮ್ಮೆ ಈ ರಿಲಯನ್ಸ್ ಜಿಯೋ (Reliance Jio) ಮತ್ತು ಭಾರ್ತಿ ಏರ್ಟೆಲ್ (Bharti Airtel) ಅತ್ಯುತ್ತಮ ಬಂಡಲ್ ಆಫರ್ ನೀಡುತ್ತಿರುವ ಯೋಜನೆಗಳನ್ನು ಪರಿಶೀಲಿಸಬಹುದು. ನೀವು ಸಾಮಾನ್ಯವಾಗಿ ರಿಚಾರ್ಜ್ ಮಾಡ್ಕೊಂಡು ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾದೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಉಚಿತ ನೆಟ್‌ಫ್ಲಿಕ್ಸ್‌ (Netflix) ಬಯಸುವವರಾಗಿದ್ದರೆ ಈ ಯೋಜನೆಗಳು ನಿಮಗಾಗಲಿವೆ. ನೀವು ಇನ್ನು ಈ ಯೋಜನೆಗಳನ್ನು ಬಳಸದಿದ್ದರೆ ಹೊಸ ವರ್ಷದಲ್ಲಿ ಒಮ್ಮೆ ಪರಿಶೀಲಿಸಬಹುದು.

Also Read: ಸೂಪರ್ Electric Car SU7 ಬಿಡುಗಡೆಗೊಳಿಸಿದ Xiaomi, ಸ್ಮಾರ್ಟ್‌ಫೋನ್‌ನಿಂದಲೇ ಫುಲ್ ಕಂಟ್ರೋಲ್

ನೀವು ನೀಡುವ ಅದೇ ಬೆಲೆಗೆ ಹೆಚ್ಚುವರಿ ಪ್ರಯೋಜನ ಸಿಕ್ಕರೆ ಯಾರಿಗೆ ತಾನೇ ಬೇಡ ಹೇಳಿ. ಅಲ್ಲದೆ ಈ ಯೋಜನೆಗಳನ್ನು ಅದರ ವ್ಯಾಲಿಡಿಟಿಯೊಂದಿಗೆ ಹೋಲಿಸಿ ನೋಡಿದರೆ ಈ ಸಂಪೂರ್ಣ ಅನುಕೂಲಗಳು ದಿನಕ್ಕೆ ಸುಮಾರು 7 ರಿಂದ 8 ರೂಗಳು ಮಾತ್ರ ಖರ್ಚು ಆಗುತ್ತಿವೆ. ಮತ್ತೊಮ್ಮೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೆಟ್‌ಫ್ಲಿಕ್ಸ್ ಬೇಕಿದ್ದರೆ ಭಾರತದಲ್ಲಿನ ಜಿಯೋ ಮತ್ತು ಏರ್ಟೆಲ್ ಮೊಬೈಲ್ ಗ್ರಾಹಕರಿಗೆ ಪ್ರಸ್ತುತ ಲಭ್ಯವಿರುವ ಈ ಮೂರು ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ರಿಲಯನ್ಸ್ ಜಿಯೋ ರೂ 1099 ಯೋಜನೆ:

ರಿಲಯನ್ಸ್ ಜಿಯೋದಿಂದ ರೂ 1099 ಯೋಜನೆಯು ನೆಟ್‌ಫ್ಲಿಕ್ಸ್ ಮೊಬೈಲ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಈ ಯೋಜನೆಯು 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದು ಗ್ರಾಹಕರಿಗೆ ದಿನಕ್ಕೆ 2GB ಡೇಟಾ, ಅನಿಯಮಿತ ವಾಯ್ಸ್ ಕರೆ ಮತ್ತು 100 SMS/ದಿನವನ್ನು ನೀಡುತ್ತದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳೆಂದರೆ Netflix Mobile, JioTV, JioCinema ಮತ್ತು JioCloud. ಈ ಯೋಜನೆಯೊಂದಿಗೆ ಅನಿಯಮಿತ 5G ಅನ್ನು ಸಹ ಜೋಡಿಸಲಾಗಿದೆ.

Jio and Airtel 2024 Plans

ರಿಲಯನ್ಸ್ ಜಿಯೋ ರೂ 1499 ಯೋಜನೆ:

ರಿಲಯನ್ಸ್ ಜಿಯೋದ ರೂ 1499 ಯೋಜನೆಯು ಬಳಕೆದಾರರಿಗೆ ನೆಟ್‌ಫ್ಲಿಕ್ಸ್ ಅನ್ನು ಸಹ ನೀಡುತ್ತದೆ. ಆದರೆ ಈ ಯೋಜನೆಯೊಂದಿಗೆ ಇದು ನೆಟ್‌ಫ್ಲಿಕ್ಸ್ ಬೇಸಿಕ್ ಆಗಿದೆ. ಈ ಯೋಜನೆಯ ಸಾಮಾನ್ಯ ಪ್ರಯೋಜನಗಳೆಂದರೆ 3GB ದಿನಕ್ಕೆ ಡೇಟಾ, 100 SMS/ದಿನ ಮತ್ತು ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಇತರ ಪ್ರಯೋಜನಗಳೆಂದರೆ JioCinema, JioTV ಮತ್ತು JioCloud. ಈ ಯೋಜನೆಯ ಮಾನ್ಯತೆಯು 84 ದಿನಗಳು ಮತ್ತು ಬಳಕೆದಾರರು ಇದರೊಂದಿಗೆ ಅನಿಯಮಿತ 5G ಅನ್ನು ಪಡೆಯುತ್ತಾರೆ!

ಏರ್‌ಟೆಲ್ 2024 Plans ರೂ 1499 ಪ್ಲಾನ್:

ಭಾರ್ತಿ ಏರ್‌ಟೆಲ್ ನೀಡುವ ಒಂದೇ ಒಂದು ಯೋಜನೆಯು ನೆಟ್‌ಫ್ಲಿಕ್ಸ್‌ನ ಪ್ರಯೋಜನದೊಂದಿಗೆ ಬರುತ್ತದೆ. ಇದು ರೂ 1499 ಯೋಜನೆಯೊಂದಿಗೆ ಬಳಕೆದಾರರು ಅನಿಯಮಿತ ವಾಯ್ಸ್ ಕರೆ, 100 SMS/ದಿನ, 3GB ದಿನಕ್ಕೆ ಡೇಟಾ ಮತ್ತು ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಯೋಜನೆಯ ಮಾನ್ಯತೆ ಮತ್ತು ಅದರ ಎಲ್ಲಾ ಉಚಿತಗಳು 84 ದಿನಗಳನ್ನು ಹೊಂದಿದೆ. ಅನಿಯಮಿತ 5G ಡೇಟಾ, ಅಪೊಲೊ 24|7 ಸರ್ಕಲ್, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಸಂಗೀತದಂತಹ ಹೆಚ್ಚಿನ ಪ್ರಯೋಜನಗಳಿವೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo