ಇಡೀ ಫ್ಯಾಮಿಲಿಗೆ ಒಂದೇ ಯೋಜನೆಯಲ್ಲಿ Unlimited ಕರೆ ಮತ್ತು ಡೇಟಾ ನೀಡುವ ಬೆಸ್ಟ್ Jio ಮತ್ತು Airtel ಪ್ಲಾನ್!

ಇಡೀ ಫ್ಯಾಮಿಲಿಗೆ ಒಂದೇ ಯೋಜನೆಯಲ್ಲಿ Unlimited ಕರೆ ಮತ್ತು ಡೇಟಾ ನೀಡುವ ಬೆಸ್ಟ್ Jio ಮತ್ತು Airtel ಪ್ಲಾನ್!
HIGHLIGHTS

Jio ಮತ್ತು Airtel ಒಂದೇ ಯೋಜನೆಯಲ್ಲಿ ಮನೆಯವರಿಗೆಲ್ಲ ಹಂಚುವ ಅತ್ಯುತ್ತಮವಾದ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿವೆ.

ಒಂದೇ ಮನೆಯಲ್ಲಿ ನೀವು ಹಲವಾರು ಸಿಮ್ ಕನೆಕ್ಷನ್ ಹೊಂದಿದ್ದರೆ ಇದನ್ನು ಆಯ್ಕೆ ಮಾಡಬಹುದು.

ಈ ಯೋಜನೆಯಲ್ಲಿ 75GB ಡೇಟಾ ಲಭ್ಯವಿದೆ. ಪ್ರತಿ ಸಿಮ್‌ನಲ್ಲಿ 5GB ಹೆಚ್ಚುವರಿ ಡೇಟಾವನ್ನು ಒದಗಿಸಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿಗಳಾಗಿರುವ ರಿಲಯನ್ಸ್ ಜಿಯೋ (Jio) ಮತ್ತು ಭಾರ್ತಿ ಏರ್ಟೆಲ್ (Airtel) ತಮ್ಮ ಬಳಕೆದಾರರಿಗೆ ಜನಪ್ರಿಯ ಮತ್ತು ಕೈಗೆಟಕುವ ಬೆಲೆಗೆ ಒಂದೇ ಯೋಜನೆಯಲ್ಲಿ ಮನೆಯವರಿಗೆಲ್ಲ ಹಂಚುವ ಅತ್ಯುತ್ತಮವಾದ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿವೆ. ಇದರ ಬಗ್ಗೆ ಸಾಮಾನ್ಯವಾಗಿ ಪ್ರಿಪೇಯ್ಡ್ ಬಳಕೆದಾರರಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ಈ ಬೆಸ್ಟ್ ಫ್ಯಾಮಿಲಿ ಪ್ಲಾನ್ ಮನೆಯಲ್ಲಿ ಹಲವಾರು ಕನೆಕ್ಷನ್ ಹೊಂದಿದ್ದರೆ ಇದನ್ನು ಆಯ್ಕೆ ಮಾಡಬಹುದು.

ನೀವು ಜಿಯೋ ಮತ್ತು ಏರ್‌ಟೆಲ್ ಬಳಕೆದಾರರಾಗಿದ್ದರೆ ಮತ್ತು ನಿಮ್ಮ ಮಾಸಿಕ ರೀಚಾರ್ಜ್ ಪ್ಲಾನ್ ಹೆಚ್ಚಾಗಿರುತ್ತದೆ. ಕುಟುಂಬದ ವಿವಿಧ ಸದಸ್ಯರಿಗೆ ವಿಭಿನ್ನ ರೀಚಾರ್ಜ್ ಪ್ಲಾನ್‌ಗಳನ್ನು ತೆಗೆದುಕೊಳ್ಳಬೇಕು. ಇದು ಹೆಚ್ಚು ಹಣ ಖರ್ಚಾಗುತ್ತದೆ ಆದ್ದರಿಂದ ನೀವು ಜಿಯೋ ಮತ್ತು ಏರ್‌ಟೆಲ್‌ನ ಕುಟುಂಬ ಪೋಸ್ಟ್ ಪೇಯ್ಡ್ ಯೋಜನೆಯನ್ನು ತೆಗೆದುಕೊಳ್ಳಬೇಕು ಇದು ಮಾಸಿಕ ಮೊಬೈಲ್ ರೀಚಾರ್ಜ್ ಯೋಜನೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ.

Also Read: OnePlus 12 Series ಸ್ಮಾರ್ಟ್‌ಫೋನ್ Powerful ಪ್ರೊಸೆಸರ್‌ನೊಂದಿಗೆ ಲಾಂಚ್! ಬೆಲೆ ಮತ್ತು ಫೀಚರ್ಗಳೇನು?

ರಿಲಯನ್ಸ್ ಜಿಯೋ (Jio) 399 ಯೋಜನೆ ವಿವರಗಳು

ಈ ಪೋಸ್ಟ್‌ಪೇಯ್ಡ್ ಯೋಜನೆಯು ಒಂದು ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಮುಖ್ಯ ಸಿಮ್ ಜೊತೆಗೆ 3 ಫ್ಯಾಮಿಲಿ ಸಿಮ್‌ಗಳನ್ನು ಸೇರಿಸಬಹುದು. ಪ್ರತಿ ಸಿಮ್‌ಗೆ ಪ್ರತ್ಯೇಕವಾಗಿ 99 ರೂಪಾಯಿ ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ 75GB ಡೇಟಾ ಲಭ್ಯವಿದೆ. ಪ್ರತಿ ಸಿಮ್‌ನಲ್ಲಿ 5GB ಹೆಚ್ಚುವರಿ ಡೇಟಾವನ್ನು ಒದಗಿಸಲಾಗಿದೆ. ಈ ಯೋಜನೆಗಾಗಿ ಒಂದೇ ಬಾರಿಗೆ 500 ರೂಪಾಯಿ ಭದ್ರತಾ ಮೊತ್ತವನ್ನು ಪಾವತಿಸಬೇಕಾಗುತ್ತದೆ.

Jio and Airtel Plans

Jio ಪೋಸ್ಟ್‌ಪೇಯ್ಡ್ ಕನೆಕ್ಷನ್ ಪಡೆಯುವುದು ಹೇಗೆ?

➥ನೀವು 7000070000 ನಂಬರ್ಗೆ ವಾಟ್ಸಾಪ್ ಮೂಲಕ ಒಂದು ಮಿಸ್ಡ್ ಕಾಲ್ ಕೊಟ್ಟು Jio Plus ಸೇವೆಯನ್ನು ಆರಂಭಿಸಬಹುದು.
➥ಪೋಸ್ಟ್‌ಪೇಯ್ಡ್ ಸಿಮ್‌ನ ಉಚಿತ ಹೋಮ್ ಡೆಲಿವರಿಗಾಗಿ ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ.
➥ಇದರ ನಂತರ ನಿಮ್ಮ ಕುಟುಂಬದ ಮೂವರು ಸದಸ್ಯರಿಗೆ ಸಿಮ್ ಪಡೆಯುವ ಆಯ್ಕೆ ಇರುತ್ತದೆ.

ಭಾರ್ತಿ ಏರ್ಟೆಲ್ (Airtel) 599 ಯೋಜನೆ ವಿವರಗಳು

ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆ ಸೌಲಭ್ಯವನ್ನು ನೀಡಲಾಗುತ್ತದೆ. ಈ ಯೋಜನೆಯು ಒಟ್ಟು 105GB ಡೇಟಾದೊಂದಿಗೆ ಬರುತ್ತದೆ. ಇದರಲ್ಲಿ ಪ್ರೈಮರಿ ಬಳಕೆದಾರರಿಗೆ 75GB ಡೇಟಾವನ್ನು ನೀಡಿದರೆ ದ್ವಿತೀಯ ಬಳಕೆದಾರರಿಗೆ 30GB ಡೇಟಾವನ್ನು ನೀಡಲಾಗುತ್ತದೆ. ಯೋಜನೆಯಲ್ಲಿ ನೀವು 200GB ವರೆಗೆ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಸಹ ಪಡೆಯುತ್ತೀರಿ. ಅಲ್ಲದೆ ಈ ಯೋಜನೆಯಲ್ಲಿ ನೀವು ಪ್ರತಿದಿನ 100 SMS ಅನ್ನು ಪಡೆಯುತ್ತೀರಿ. ಈ ಯೋಜನೆಯು 6 ತಿಂಗಳ Amazon Prime ಸದಸ್ಯತ್ವ ಮತ್ತು ಒಂದು ವರ್ಷದ Disney+ Hotstar ಮೊಬೈಲ್ ಚಂದಾದಾರಿಕೆಯೊಂದಿಗೆ ಬರುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo