ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯ ಮಟ್ಟಿಯೂ ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವ Jio ಮತ್ತು Airtel ಕಂಪನಿಗಳು ತಮ್ಮ ಬಳಕೆದಾರರನ್ನು ಆಕರ್ಷಿಸಲು ಬಹುತೇಕ ಆಫರ್ ಮತ್ತು ಡೀಲ್ಗಳನ್ನು ನೀಡುತ್ತಿವೆ. OTT ಪ್ಲಾಟ್‌ಫಾರ್ಮ್‌ಗಳ ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ ನೀವು ನೆಟ್‌ಫ್ಲಿಕ್ಸ್‌ಗೆ (Netflix) ಉಚಿತ ಪ್ರವೇಶವನ್ನು ನೀಡುವ ಮೊಬೈಲ್ ಯೋಜನೆಯನ್ನು ಇದರ ಭಾಗವಾಗಿ ಈ ಲೇಖನದಲ್ಲಿ ಉಚಿತ ನೆಟ್‌ಫ್ಲಿಕ್ಸ್ ಮತ್ತು 5G ಡೇಟಾ ಮತ್ತು Unlimited ಕರೆಗಳನ್ನು ಕೈಗೆಟಕುವ ಬೆಲೆಗೆ ಲಭ್ಯವಿರುವ ಪ್ರಿಪೇಯ್ಡ್ ಪ್ಲಾನ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Also Read: 50MP ಪ್ರೈಮರಿ ಕ್ಯಾಮೆರಾದ Redmi 13C ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು?
ಈ ಹಿಂದೆ ವೊಡಾಫೋನ್ ಸೇರಿದಂತೆ ಎಲ್ಲಾ ಪ್ರಮುಖ ಟೆಲಿಕಾಂ ನೆಟ್‌ವರ್ಕ್‌ಗಳು ನೆಟ್‌ಫ್ಲಿಕ್ಸ್ ಚಂದಾದಾರಿಕೆಗಳೊಂದಿಗೆ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದ್ದವು ಆದರೆ ಟೆಲಿಕಾಂ ಆಪರೇಟರ್ ಅಜ್ಞಾತ ಕಾರಣಗಳಿಗಾಗಿ ಈ ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸಿತು. ಡೇಟಾ ಮತ್ತು ನೆಟ್‌ಫ್ಲಿಕ್ಸ್ ಪ್ರವೇಶದೊಂದಿಗೆ ನೀವು ರೀಚಾರ್ಜ್ ಮಾಡಲು ಬಯಸಿದರೆ ಏರ್‌ಟೆಲ್ ಮತ್ತು ಜಿಯೋದಿಂದ ನಿಮ್ಮ ಆಯ್ಕೆಗಳು ಇಲ್ಲಿವೆ.
ನೀವು ಹೆಚ್ಚಿನ ಹಣವನ್ನು ನೀಡದೆ ಹೆಚ್ಚಿನ ಹೆಚ್ಚಿನ ಮನರಂಜನೆಯನ್ನು ಪಡೆಯಲು ಯೋಚಿಸುತ್ತಿದ್ದರೆ ಪ್ರಸ್ತುತ ರಿಲಯನ್ಸ್ ಜಿಯೋ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆಯೊಂದಿಗೆ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ಮಾತ್ರ ಹೊಂದಿದೆ. ಎರಡರಲ್ಲಿ ಕಡಿಮೆ ಬೆಲೆ 1,099 ರೂ.ಗಳು ದಿನಕ್ಕೆ 2GB ಮೊಬೈಲ್ ಡೇಟಾದೊಂದಿಗೆ ಬರುತ್ತದೆ ಮತ್ತು 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಹೆಚ್ಚಿನ ಪ್ರಿಪೇಯ್ಡ್ ಯೋಜನೆಗಳಂತೆಯೇ ನೀವು ಅನಿಯಮಿತ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 SMS ಅನ್ನು ಸಹ ಪಡೆಯುತ್ತೀರಿ.
ಒಂದು ವೇಳೆ ನೀವು ಹೆಚ್ಚಿನ ಮೊಬೈಲ್ ಡೇಟಾ ಬಯಸಿದರೆ ಜಿಯೋದ ಈ ರೂ 1,499 ಯೋಜನೆಯನ್ನು ಸಹ ಪಡೆಯಬಹುದು. ಏಕೆಂದರೆ ಇದರಲ್ಲಿ ನಿಮಗೆ ಹೆಚ್ಚಿನ ಡೇಟಾ ಮತ್ತು ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದು ಅನಿಯಮಿತ ವಾಯ್ಸ್ ಕರೆಗಳು, ದಿನಕ್ಕೆ 100 SMS, 84 ದಿನಗಳ ಮಾನ್ಯತೆಯನ್ನು ಹೊಂದಿದೆ ಮತ್ತು ದಿನಕ್ಕೆ 3GB ಮೊಬೈಲ್ ಡೇಟಾವನ್ನು ನೀಡುತ್ತದೆ. ಜಿಯೋದಿಂದ ಹೆಚ್ಚಿನ ಪ್ರಿಪೇಯ್ಡ್ ಯೋಜನೆಗಳಂತೆಯೇ ನೀವು JioTV, JioCinema ಮತ್ತು JioCloud ಗೆ ಪ್ರವೇಶವನ್ನು ಪಡೆಯುತ್ತೀರಿ.
ಏರ್‌ಟೆಲ್ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆಯನ್ನು ನೀಡುವ ಒಂದೇ ಒಂದು ಯೋಜನೆ 1,499 ರೂಗಳಿಗೆ ಪಡೆಯಬಹುದು. ಈ ಪ್ಲಾನ್ ನಿಮಗೆ ಪೂರ್ತಿ 84 ದಿನಗಳ ಮಾನ್ಯತೆಯೊಂದಿಗೆ ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 3GB ಮೊಬೈಲ್ ಡೇಟಾದೊಂದಿಗೆ ೮ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ನೀಡುತ್ತದೆ. ಇದರ ಜೊತೆಗೆ ಅನ್ಲಿಮಿಟೆಡ್ 5G ಡೇಟಾ ಮತ್ತು ದಿನಕ್ಕೆ 100 SMS ನಂತಹ ಇತರ ಪ್ರಯೋಜನಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ ನೀವು 3 ತಿಂಗಳ Apollo 24|7 Circle, ಉಚಿತ Hellotunes ಮತ್ತು Wynk Music ಗೆ ಪ್ರವೇಶದಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ