ರಿಲಯನ್ಸ್ ಜಿಯೋ ಇತ್ತೀಚೆಗೆ ಹೊರ ಹೋಗುವ ಕರೆಗಳಿಗಾಗಿ ತನ್ನ ಬಳಕೆದಾರರಿಂದ ಇಂಟರ್ ಕನೆಕ್ಷನ್ ಬಳಕೆ ಶುಲ್ಕವನ್ನು (IUC) ವಿಧಿಸುವುದಾಗಿ ಘೋಷಿಸಿತು. ಈ ಪ್ರಕಟಣೆಯ ಜೊತೆಗೆ ಟೆಲಿಕಾಂ ಹೊಸ ರೀಚಾರ್ಜ್ ಟಾಪ್-ಅಪ್‌ಗಳನ್ನು ಘೋಷಿಸಿತು. ಮತ್ತು ಅದರ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಪರಿಷ್ಕರಿಸಿತು ಇದರಿಂದ ಜಿಯೊವಲ್ಲದ ಬಳಕೆದಾರರೊಂದಿಗೆ ಮಾತನಾಡಲು ಅಥವಾ ಹೊರ ಹೋಗುವ ಕರೆಗಳನ್ನು ಮಾಡಲು ಐಯುಸಿ ಟಾಪ್ ಅಪಲ್ಲಿ ಬರುವ ನಿಮಿಷಗಳನ್ನು ಖರೀದಿಸಬಹುದಾಗಿತ್ತು. ಆದರೆ ಈಗ ಇಂದು ಜಿಯೋ ಹೊಸ ಆಲ್-ಇನ್-ಒನ್ ಯೋಜನೆಗಳನ್ನು ಘೋಷಿಸಿದೆ. ಅದು ತನ್ನ ಅಸ್ತಿತ್ವದಲ್ಲಿರುವ ಯೋಜನೆಗಳಿಗಿಂತ ಹೆಚ್ಚಿನ ಡೇಟಾ ಮತ್ತು ವಾಯ್ಸ್ ಪ್ರಯೋಜನಗಳನ್ನು ನೀಡುತ್ತದೆ.
ಇಂದಿನಿಂದ ಹೊಸ 222, 333 ಮತ್ತು 444 ರೂಗಳ ಹೊಸ ಯೋಜನೆಯನ್ನು ಅನಾವರಣಗೊಳಿಸಿದೆ. ಈ ಬೆಲೆಯ ಪ್ಲಾನ್ಗಳಲ್ಲಿ ದಿನಕ್ಕೆ 2GB ಡೇಟಾವನ್ನು ಕ್ರೆಡಿಟ್ ಮಾಡುತ್ತದೆ. ಮತ್ತು ಕ್ರಮವಾಗಿ ಈ ಪ್ಲಾನ್ಗಳು ಒಂದು, ಎರಡು ಮತ್ತು ಮೂರು ತಿಂಗಳ ಮಾನ್ಯತೆಯನ್ನು ಹೊಂದಿವೆ. ಉಚಿತ ದೈನಂದಿನ ಡೇಟಾದೊಂದಿಗೆ ಜಿಯೋ ಬಳಕೆದಾರರು ಜಿಯೋ ನೆಟ್‌ವರ್ಕ್‌ನಲ್ಲಿ ಇತರ ಬಳಕೆದಾರರಿಗೆ ಅನಿಯಮಿತ ಉಚಿತ ಕರೆಗಳನ್ನು ಪಡೆಯುತ್ತಾರೆ ಜೊತೆಗೆ 1000 ನಿಮಿಷಗಳ ಜಿಯೋವಲ್ಲದ FUP (Fair Usage Policy) ನೀಡುತ್ತಿದೆ. ಇದರರ್ಥ ಕಂಪನಿಯು ತನ್ನ ಈ ಹೊಸ ಆಲ್-ಇನ್-ಒನ್ ಪ್ಯಾಕ್‌ಗಳೊಂದಿಗೆ 1000 IUC ನಿಮಿಷಗಳನ್ನು ಒಟ್ಟುಗೂಡಿಸುತ್ತಿದೆ. ಹೆಚ್ಚುವರಿಯಾಗಿ ಉಚಿತ ಎಸ್‌ಎಂಎಸ್ ಮತ್ತು ಜಿಯೋ ಸೂಟ್ ಅಪ್ಲಿಕೇಶನ್‌ಗಳಿಗೆ ಪ್ರವೇಶದಂತಹ ಹಿಂದಿನ ಪ್ರಯೋಜನಗಳು ಇನ್ನೂ ಲಭ್ಯವಿದೆ.
ಜಿಯೋ ಅವರ ಈ ಹೊಸ ಯೋಜನೆಗಳೊಂದಿಗೆ ಗಮನಿಸಬೇಕಾದ ಒಂದು ವಿಷಯವೆಂದರೆ ಈಗ ಅಸ್ತಿತ್ವದಲ್ಲಿರುವ ಮೂರು ಯೋಜನೆಗಳಲ್ಲಿ ಯಾವುದಾದರೂ ಪ್ಲಾನ್ ಜೊತೆಗೆ ತಿಂಗಳಿಗೆ 111 ರೂಗಳನ್ನು ಪಾವತಿಸುವ ಸಾಮರ್ಥ್ಯ ನೀಡುತ್ತಿದೆ. ಅಂದ್ರೆ ಉದಾಹರಣಗೆ ನೀವು 222 ರೂಗಳ ಪ್ಲಾನ್ ಪಡೆಯುತ್ತೀರಿ ಈ ಪ್ಯಾಕ್ ಮುಗಿಯುವ ಮುಂಚೆ 111 ರೂಗಳ ರಿಚಾರ್ಜ್ ಮಾಡಿಸಿದರೆ ನಿಮಗೆ ಮತ್ತೊಂದು ತಿಂಗಳ ವ್ಯಾಲಿಡಿಟಿ ಲಭ್ಯವಾಗುತ್ತದೆ. ಇದೇ ಪ್ರಕಾರ 333 ಮತ್ತು 444 ರೂಗಳ ಪ್ಲಾನ್. ನಾವು ಜಿಯೋ ವೆಬ್‌ಸೈಟ್ ಪರಿಶೀಲಿಸಿದ್ದೇವೆ ಆದರೆ ಈ ಲೇಖನ ಅಥವಾ ವಿಡಿಯೋ ಮಾಡುವ ಸಮಯದಲ್ಲಿ ಹೊಸ ಯೋಜನೆಗಳನ್ನು ಪಟ್ಟಿ ಮಾಡಿಲ್ಲ.
ಅಲ್ಲದೆ ಜಿಯೋವಿನ ಈ ಹೊಸ ಆಲ್-ಇನ್-ಒನ್ ಪ್ಲಾನ್ ಅಸ್ತಿತ್ವದಲ್ಲಿರುವ ಯೋಜನೆಗಳೊಂದಿಗೆ ಹೋಲಿಸಿದಾಗ ಈ ಹೊಸ ಪ್ಲಾನ್ ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತವೆ. ಏಕೆಂದರೆ ಈವರೆಗೆ ಲಭ್ಯವಿರುವ ಜಿಯೋ ಪ್ಲಾನ್ಗಳಲ್ಲಿ ಒಂದು ತಿಂಗಳ ಮಾನ್ಯತೆಯೊಂದಿಗೆ ದಿನಕ್ಕೆ 2GB ಯೋಜನೆಯನ್ನು ಪ್ರಸ್ತುತ 198 ರೂಗಳಲ್ಲಿ ನೀಡುತ್ತಿದೆ. ಅಲ್ಲದೆ 1000 IUC ನಿಮಿಷಗಳಿಗೆ 100 ರೂಗಳ ಟಾಪ್-ಅಪ್ ಕೂಪನ್ ಸಹ ಪಡೆಯಬೇಕಾಗುತ್ತದೆ. ಅಂದ್ರೆ ಒಟ್ಟಾರೆಯಾಗಿ 298 ರೂಗಳನ್ನು ನೀಡುತ್ತಿದ್ದೇವೆ. ಈ ಅರ್ಥದಲ್ಲಿ ಕಂಪನಿಯ ಈ ಹೊಸ 222 ಪ್ಲಾನಲ್ಲಿ ಯಾವುದೇ ಹೆಚ್ಚುವರಿ ಚಾರ್ಜ್ ಇಲ್ಲದೆ 1000 IUC ನಿಮಿಷಗಳ ಜೊತೆಗೆ ಒಂದು ತಿಂಗಳವರೆಗೆ ನೀವು ಅದೇ ಪ್ರಮಾಣದ ಡೇಟಾವನ್ನು 2GB ದಿನಕ್ಕೆ ಪಡೆಯುವುದರಿಂದ ಹೆಚ್ಚು ಅನುಕೂಲವಿದೆ.