ಭಾರತದಲ್ಲಿ ಕಡಿಮೆ ಬೆಲೆಗೆ ಅತಿ ಜನಪ್ರಿಯ ಅಥವಾ ಸದ್ಯಕ್ಕೆ ಹೆಚ್ಚಿನ ಬಳಕೆಯಲ್ಲಿರುವ ಟೆಲಿಕಾಂ ಕಂಪನಿಗಳಲ್ಲಿ Jio, Airtel ಮತ್ತು Vodafone Idea ಮುಂದಿವೆ. ಈ ಕಂಪನಿಗಳು ತಮ್ಮ ಬಳಕೆದಾದರನ್ನು ಆಕರ್ಷಿಸಲು ಮತ್ತು ಹೆಚ್ಚಿಸಿಕೊಳ್ಳಲು ಒಂದಲ್ಲ ಒಂದು ಮಾದರಿಯ ಆಫರ್ ಮತ್ತು ಯೋಜನೆಗಳನ್ನು ನೀಡುತ್ತಿರುತ್ತದೆ. ಅದರಲ್ಲಿ ನಿಮಗೆ ಅನ್ಲಿಮಿಟೆಡ್ ಕರೆಗಳು, 5G ಸೇರಿದಂತೆ SMS ಮತ್ತು ಉತ್ತಮ ವ್ಯಾಲಿಡಿಟಿಯೊಂದಿಗೆ ಉಚಿತ Disney+ Hotstar ಬಳಕೆಯ ಬಂಡಲ್ ಆಫರ್ ಹೊಂದಿವೆ. ನಿಮಗೂ ಹೆಚ್ಚಿನ ಮನರಂಜನೆಯ ರಿಚಾರ್ಜ್ ಬೇಕಿದ್ದರೆ ಒಮ್ಮೆ ಈ ಅತ್ಯತ್ತಮ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳ ಬಗ್ಗೆ ತಿಳಿಯಲೇಬೇಕು.
Also Read: 50MP+ 48MP+ 64MP ಕ್ಯಾಮೆರಾ ಮತ್ತು 2K OLED ಡಿಸ್ಪ್ಲೇಯೊಂದಿಗೆ OnePlus 12 ಬಿಡುಗಡೆ! ಬೆಲೆ ಎಷ್ಟಿದೆ?
ಏರ್‌ಟೆಲ್‌ನ ರೂ. 869 ಯೋಜನೆಯು 2GB ದೈನಂದಿನ ಡೇಟಾ, ಅನಿಯಮಿತ ವಾಯ್ಸ್ ಕರೆ ಮತ್ತು ದಿನಕ್ಕೆ 100 SMS ಗಳನ್ನು 84 ದಿನಗಳವರೆಗೆ ನೀಡುತ್ತದೆ. ಹೆಚ್ಚುವರಿ ಪರ್ಕ್‌ಗಳು 3 ತಿಂಗಳ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ, ಅನಿಯಮಿತ 5G ಡೇಟಾ, ರಿವಾರ್ಡ್‌ಮಿನಿ ಚಂದಾದಾರಿಕೆ, ಅಪೊಲೊ 24×7 ಸರ್ಕಲ್, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ಗೆ ಪ್ರವೇಶವನ್ನು ಒಳಗೊಂಡಿವೆ. ಅಲ್ಲಿಯೂ ರೂ. 499 ಯೋಜನೆಯು ಉಚಿತ ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಮತ್ತು 3GB ಡೇಟಾ/ದಿನ, 100 SMSಗಳು/ದಿನ, ಮತ್ತು ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ಒದಗಿಸುತ್ತದೆ.
ರಿಲಯನ್ಸ್ ಜಿಯೋದ ರೂ. 899 ಯೋಜನೆಯು ಮೂರು ತಿಂಗಳ ಡಿಸ್ನಿ+ಹಾಟ್‌ಸ್ಟಾರ್ (ಮೊಬೈಲ್) ಚಂದಾದಾರಿಕೆಯನ್ನು ನೀಡುತ್ತದೆ. ಈ ಯೋಜನೆಯು 84 ದಿನಗಳ ಮಾನ್ಯತೆಯನ್ನು ಹೊಂದಿದೆ ಮತ್ತು 2GB ದೈನಂದಿನ ಡೇಟಾವನ್ನು (ಒಟ್ಟು 168GB) ಒದಗಿಸುತ್ತದೆ. ಜೊತೆಗೆ ರೂ. 3,178 ವಾರ್ಷಿಕ ಪ್ರಿಪೇಯ್ಡ್ ಯೋಜನೆ ಬಳಕೆದಾರರು 2GB ದೈನಂದಿನ ಡೇಟಾ ಜೊತೆಗೆ ಡಿಸ್ನಿ+ಹಾಟ್‌ಸ್ಟಾರ್ ವಾರ್ಷಿಕ ಚಂದಾದಾರಿಕೆಯನ್ನು ಪಡೆಯಬಹುದು. ಮೇಲೆ ತಿಳಿಸಿದ ಈ ಎರಡೂ ಯೋಜನೆಗಳು ನಿಮಗೆ ಅನಿಯಮಿತ ವಾಯ್ಸ್ ಕರೆಗಳು, ದಿನಕ್ಕೆ 100 SMS ಗಳು ಮತ್ತು JioTV, JioCinema ಮತ್ತು JioCloud ಪ್ರವೇಶವನ್ನು ಒದಗಿಸುತ್ತವೆ.
ವೊಡಾಫೋನ್ ಐಡಿಯಾದ ಕಾಂಪ್ಲಿಮೆಂಟರಿ ಡಿಸ್ನಿ+ಹಾಟ್‌ಸ್ಟಾರ್ ಸೇವೆಯನ್ನು ನೀಡುವ ವಾರ್ಷಿಕ ಚಂದಾದಾರಿಕೆಯನ್ನು ನೀಡುವ ಹಲವಾರು ಯೋಜನೆಗಳನ್ನು ಹೊಂದಿದೆ. ಅದರಲ್ಲಿ ಅತಿ ಕಡಿಮೆ ಬೆಲೆಯ ಪ್ಲಾನ್‌ಗಳೆಂದರೆ ರೂ. 601, ರೂ. 901, ರೂ. 1,066, ಮತ್ತು ರೂ. 3,099 ಪ್ರಿಪೇಯ್ಡ್ ಯೋಜನೆಗಳನ್ನು ಕಂಪನಿ ಹೊಂದಿದೆ. ಮೊದಲಿಗೆ ನಾವು ರೂ. 601 ಯೋಜನೆಯ ಬಗ್ಗೆ ನೋಡುವುದುದಾದರೆ ದಿನಕ್ಕೆ 3GB ಡೇಟಾವನ್ನು ಪೂರ್ತಿ 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದರ ಕ್ರಮವಾಗಿ ವೊಡಾಫೋನ್ ಐಡಿಯಾದ ರೂ. 901 ಯೋಜನೆಯು ದಿನಕ್ಕೆ 3GB ಡೇಟಾವನ್ನು ಒದಗಿಸುತ್ತದೆ. ಆದರೆ ಈ ಪ್ಲಾನ್ 70 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಎಲ್ಲ ಯೋಜನೆಗಳು ನಿಮಗೆ ಅನ್ಲಿಮಿಟೆಡ್ ಕರೆಗಳೊಂದಿಗೆ ಹೈಸ್ಪೀಡ್ ಡೇಟಾವನ್ನು ನೀಡುತ್ತವೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ