ಭಾರತೀಯ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರನ್ನು ಆಕರ್ಷಿಸಲು ಉತ್ತಮ ರೀಚಾರ್ಜ್ ಯೋಜನೆಗಳನ್ನು ನೀಡುತ್ತಲೇ ಇರುತ್ತವೆ. ಕರೋನಾ ಸಾಂಕ್ರಾಮಿಕದಿಂದಾಗಿ ಟೆಲಿಕಾಂ ಕಂಪನಿಗಳು ಬಳಕೆದಾರರಿಗಾಗಿ ಹೆಚ್ಚಿನ ಡೇಟಾಕ್ಕಾಗಿ ಯೋಜನೆಗಳನ್ನು ನೀಡುತ್ತಿವೆ. Jio, Airtel, Vi (ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ) ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ಪ್ರತಿದಿನ 3GB ಡೇಟಾ ಮತ್ತು ಅನ್ಲಿಮಿಟೆಡ್ ಉಚಿತ ಕರೆ ನೀಡುವ ಅತ್ಯುತ್ತಮ ಪ್ಲಾನ್‌ಗಳು. ಈ ರೀಚಾರ್ಜ್ ಪ್ಲಾನ್‌ಗಳಲ್ಲಿ ಉಚಿತ ವಾಯ್ಸ್ ಕಾಲಿಂಗ್, ಡೇಟಾ, SMS ಮತ್ತು OTT ಸೇವೆಗಳ ಸೌಲಭ್ಯವನ್ನು ಸಹ ಈ ಮೂರು ಟೆಲಿಕಾಂ ಕಂಪನಿಗಳು ಒದಗಿಸುತ್ತಿವೆ. ನೀವು Jio, Airtel, Vi ನೀಡುತ್ತಿರುವ ಇತ್ತೀಚಿನ ಉತ್ತಮ ಪ್ಲಾನ್‌ಗಳನ್ನು ನೋಡೋಣ.
ರಿಲಯನ್ಸ್ ಜಿಯೋದ ಈ ಯೋಜನೆ VI ಮತ್ತು ಏರ್‌ಟೆಲ್ ಯೋಜನೆಗಿಂತ 49 ರೂಗಳ ಕಡಿಮೆಯಾಗಿದೆ. ಜಿಯೋದ ಈ ಯೋಜನೆಯಲ್ಲಿ ಬಳಕೆದಾರರು ದಿನಕ್ಕೆ 3 ಜಿಬಿ ಡೇಟಾವನ್ನು ಪಡೆಯುತ್ತಾರೆ ಇದರ ವ್ಯಾಲಿಡಿಟಿ 28 ದಿನಗಳಾಗಿವೆ. ಇದರೊಂದಿಗೆ ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಜೊತೆಗೆ ಈ ಯೋಜನೆಯಲ್ಲಿ ಬಳಕೆದಾರರಿಗೆ ದಿನಕ್ಕೆ 100 SMS ಗಳನ್ನು ಸಹ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಟಿವಿ, ಜಿಯೋ ಕ್ಲೌಡ್ ಮತ್ತು ಜಿಯೋ ಸೆಕ್ಯುರಿಟಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿ ದಿನ 3 GB ಡೇಟಾವನ್ನು ನೀಡಲಾಗುತ್ತದೆ. ಇದರ ವ್ಯಾಲಿಡಿಟಿ 28 ದಿನಗಳಾಗಿವೆ. ಅಂದರೆ ಈ ಯೋಜನೆಯಲ್ಲಿ 84 GB ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಏರ್‌ಟೆಲ್‌ನ ಈ ಯೋಜನೆಯಲ್ಲಿ ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಮಾಡುವ ಸೌಲಭ್ಯದೊಂದಿಗೆ ಬಳಕೆದಾರರಿಗೆ ದಿನಕ್ಕೆ 100 SMS ಕೂಡ ನೀಡಲಾಗುತ್ತದೆ. ಇದರ ಹೊರತಾಗಿ ಬಳಕೆದಾರರಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ಉಚಿತ ಹೆಲೋಟೂನ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ವಿಂಕ್ ಮ್ಯೂಸಿಕ್‌ಗೆ ಉಚಿತ ಪ್ರವೇಶವನ್ನು ನೀಡಲಾಗಿದೆ.
ವೊಡಾಫೋನ್ ಐಡಿಯಾದ 398 ರೂಗಳ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ದೈನಂದಿನ ಬಳಕೆಗಾಗಿ 3 ಜಿಬಿ ಡೇಟಾವನ್ನು ನೀಡಲಾಗುತ್ತದೆ. ಇದರೊಂದಿಗೆ ಬಳಕೆದಾರರಿಗೆ ಈ ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್‌ನಲ್ಲಿ ಉಚಿತ ಧ್ವನಿ ಕರೆ ಸೌಲಭ್ಯವನ್ನು ನೀಡಲಾಗುತ್ತದೆ. ಈ ರೀಚಾರ್ಜ್ ಪ್ಲಾನ್ ಬಳಕೆದಾರರಿಗೆ ದಿನಕ್ಕೆ 100 ಎಸ್‌ಎಂಎಸ್ ಬಳಸಲು ಅನುಮತಿಸುತ್ತದೆ. ವೊಡಾಫೋನ್-ಐಡಿಯಾದ ಈ ರೀಚಾರ್ಜ್ ಯೋಜನೆಯ ಮಾನ್ಯತೆಯು 28 ದಿನಗಳಾಗಿವೆ. ಇದರ ಹೊರತಾಗಿ ಈ ಯೋಜನೆಯಲ್ಲಿ ಬಳಕೆದಾರರಿಗೆ ವೀಕೆಂಡ್ ಡೇಟಾ ರೋಲ್‌ಓವರ್, ವಿ ಮೂವೀಸ್ ಮತ್ತು ಟಿವಿ ವಿಐಪಿ ಮತ್ತು ಬಿಂಜ್ ಆಲ್ ನೈಟ್‌ಗೆ ಉಚಿತ ಪ್ರವೇಶವನ್ನು ನೀಡಲಾಗಿದೆ.
Jio, Airtel, Vi ನೀಡುತ್ತಿರುವ ಇತ್ತೀಚಿನ ಉತ್ತಮ ಪ್ಲಾನ್‌ಗಳನ್ನು ನೋಡ್ಕೊಳ್ಳಿ.