ಭಾರತದಲ್ಲಿ ಅತಿ ಹೆಚ್ಚಾಗಿ ಸ್ಮಾರ್ಟ್ಫೋನ್ ಬಳಕೆದಾರರನ್ನು ಹೊಂದಿರುವ ಎರಡನೇಯ ಅತಿದೊಡ್ಡ ದೇಶವಾಗಿದ್ದು ಕಳೆದ 2022 ವರ್ಷದ ವರದಿಯ ಪ್ರಕಾರ ನಮ್ಮಲ್ಲಿ ಸುಮಾರು 46.5% ಜನರು ಬಳಸುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ Jio, Airtel ಮತ್ತು Vi ಮೂರು ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರರು ತಮ್ಮ ಮೊಬೈಲ್ ನೆಟ್‌ವರ್ಕ್ ಸೇವೆಗಳೊಂದಿಗೆ ಹೆಚ್ಚಿನ ಭಾರತೀಯ ಮಾರುಕಟ್ಟೆಗೆ ಸೇವೆ ಸಲ್ಲಿಸುತ್ತವೆ. ಇಂದು ನಾವು ಪೂರ್ತಿ 84 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2GB ಹೈಸ್ಪೀಡ್ ಡೇಟಾ ನೀಡುವ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಮುಂದೆ ನೀಡಲಾಗಿದೆ.
Also Read: POCO C65 Sale: ಕೈಗೆಟಕುವ ಬೆಲೆಗೆ 50MP ಕ್ಯಾಮೆರಾದ ಪೊಕೊ ಸ್ಮಾರ್ಟ್‌ಫೋನ್ ಮೊದಲ ಸೇಲ್ ಶುರು!
ಪ್ರತಿದಿನ 2GB ನೀಡುವ Jio, Airtel ಮತ್ತು Vi ಯೋಜನೆಗಳು
ಸಾಮಾನ್ಯವಾಗಿ ಇಂತಹ ಯೋಜನೆಗಳನ್ನು ಪದೇ ಪದೇ ರಿಚಾರ್ಜ್ ಮಾಡಲು ಬಯಸದ ಜನರಿಗೆ ಈ 84 ದಿನಗಳ ಒಂದೇ ಸುಮಾರು 3 ತಿಂಗಳ ರಿಚಾರ್ಜ್ ಒಟ್ಟಿಗೆ ಪಡೆಯಲು ಬಯಸುವವವರಿಗಾಗಿ ಈ ಯೋಜನೆಯನ್ನು ಪಟ್ಟಿ ಮಾಡಲಾಗಿದೆ. ಏಕೆಂದರೆ ಪ್ರತಿಯೊಂದು ಸಿಮ್ ಕಾರ್ಡ್ ಅನ್ನು ಕನಿಷ್ಠ ರಿಚಾರ್ಜ್ ಮಾಡುವುದು ಈಗ ಕಡ್ಡಾಯವಾಗಿದೆ. ಅಲ್ಲದೆ ಹೆಚ್ಚು ಮನರಂಜನೆಯೊಂದಿಗೆ ಅನಿಯಮಿತ 5G ಡೇಟಾ ಬಯಸುವ ಗ್ರಾಹಕರನ್ನು ಗುರಿಯನ್ನಾಗಿಡಿಸಿಕೊಂಡು ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕೈಗೆಟಕುವ ಮಾಸಿಕ ಯೋಜನೆಗಳನ್ನು ನೀಡುತ್ತಿದೆ.
84 ದಿನಗಳಿಗೆ ಪ್ರತಿದಿನ 2GB ಡೇಟಾ ನೀಡುವ Jio ಪ್ಲಾನ್
ಜಿಯೋದಿಂದ ಕೈಗೆಟಕುವ ಬೆಲೆಗೆ ಬಂಡಲ್ 719 ಯೋಜನೆಗಳಿವೆ. ಆದರೆ ಇದೀಗ ನಾವು ಬಹಳಷ್ಟು ನಡುವೆ ಅತ್ಯಂತ ಒಳ್ಳೆ ಆಯ್ಕೆಯನ್ನು ಮಾತ್ರ ಚರ್ಚಿಸುತ್ತೇವೆ. ರೂ 719 ಯೋಜನೆಯು ಜಿಯೋದಿಂದ ಅತ್ಯಂತ ಕೈಗೆಟುಕುವ 2GB ದೈನಂದಿನ ಡೇಟಾ ಯೋಜನೆಯಾಗಿದ್ದು ಅದು 84 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯು ಅನಿಯಮಿತ ವಾಯ್ಸ್ ಕರೆ ಮತ್ತು 100 SMS/ದಿನದೊಂದಿಗೆ JioTV, JioCinema ಮತ್ತು JioCloud ಪ್ರಯೋಜನಗಳೊಂದಿಗೆ ಬರುತ್ತದೆ. ಈ ಯೋಜನೆಯು ಗ್ರಾಹಕರಿಗೆ ಅನಿಯಮಿತ 5G ಡೇಟಾ ಕೊಡುಗೆಯನ್ನು ಸಹ ನೀಡುತ್ತದೆ.
84 ದಿನಗಳಿಗೆ ಪ್ರತಿದಿನ 2GB ಡೇಟಾ ನೀಡುವ Airtel ಪ್ಲಾನ್
ಏರ್‌ಟೆಲ್ ಅಂತಹ ಎರಡು ಯೋಜನೆಗಳನ್ನು ಹೊಂದಿದ್ದು ಈ ರೂ 839 ಯೋಜನೆಯ ಬಗ್ಗೆ ಇಲ್ಲಿ ಚರ್ಚಿಸುತ್ತೇವೆ. ಏಕೆಂದರೆ ಇದು ಅತ್ಯಂತ ಕೈಗೆಟುಕುವ ಯೋಜನೆಯಾಗಿದೆ. ರೂ 839 ಯೋಜನೆಯೊಂದಿಗೆ ಬಳಕೆದಾರರು ಅನಿಯಮಿತ ಧ್ವನಿ ಕರೆ, 100 SMS/ದಿನ ಮತ್ತು 2GB ದೈನಂದಿನ ಡೇಟಾವನ್ನು 84 ದಿನಗಳವರೆಗೆ ಪಡೆಯುತ್ತಾರೆ. ಅನಿಯಮಿತ 5G ಡೇಟಾ ಆಫರ್, Xstream Play, RewardsMini ಚಂದಾದಾರಿಕೆ, Apollo 24|7 Circle, ಉಚಿತ Hellotunes ಮತ್ತು Wynk Music ಒಳಗೊಂಡಿದೆ.
84 ದಿನಗಳಿಗೆ ಪ್ರತಿದಿನ 2GB ಡೇಟಾ ನೀಡುವ Vi ಪ್ಲಾನ್
ವೊಡಾಫೋನ್ ಐಡಿಯಾದ (Vi) ಉತ್ತಮ ರೂ 839 ಯೋಜನೆಯಲ್ಲಿ ನಿಮಗೆ ಪ್ರತಿದಿನ 2GB ಹೈ ಸ್ಪೀಡ್ ಡೇಟಾದೊಂದಿಗೆ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ದಿನಕ್ಕೆ 100 SMS ಮತ್ತು ಹೆಚ್ಚುವರಿಯಾಗಿ ನಿಮಗೆ 3 ತಿಂಗಳವರೆಗೆ ಉಚಿತವಾಗಿ Disney+ ಹಾಟ್‌ಸ್ಟಾರ್ ಮೊಬೈಲ್, Binge All Night, Weekend Data, Rollover, Data Delight ಮತ್ತು Vi Movies & TV ಚಂದಾದಾರಿಕೆಯೊಂದಿಗೆ ಬರುತ್ತದೆ. ಈ ಯೋಜನೆಯು 84 ದಿನಗಳ ಸೇವಾ ಮಾನ್ಯತೆಯನ್ನು ಹೊಂದಿದೆ ಮತ್ತು ಇದು ಏರ್‌ಟೆಲ್‌ನ ಯೋಜನೆಗೆ ಹೋಲಿಸಬಹುದಾದ ಆಯ್ಕೆಯಾಗಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile