ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋದ ವೈರ್‌ಲೆಸ್ 5G ಸೇವೆಯು (Jio AirFiber) ಈಗ 115 ಭಾರತೀಯ ನಗರಗಳಿಗೆ ವಿಸ್ತರಿಸಿದೆ. ಈಗಾಗಲೇ ಸೆಪ್ಟೆಂಬರ್ 2023 ರಲ್ಲಿ ಪ್ರಾರಂಭವಾದ ಜಿಯೋ ಏರ್‌ಫೈಬರ್ (Jio AirFiber) ವೈರ್ಡ್ ಸಂಪರ್ಕಗಳನ್ನು ಗುಡ್ಡಗಾಡು ಪ್ರದೇಶಗಳಲ್ಲಿ ಫಾಸ್ಟ್ ಜಿಯೋ ಏರ್‌ಫೈಬರ್ ಇಂಟರ್ನೆಟ್ ಸಂಪರ್ಕವನ್ನು ನೀಡುತ್ತದೆ. ಈ ಪೋರ್ಟಬಲ್ ವೈರ್‌ಲೆಸ್ ಇಂಟರ್ನೆಟ್ ಸೇವೆಯನ್ನು ಮನೆ ಮತ್ತು ಆಫೀಸ್ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ.
Also Read: 50MP ಕ್ಯಾಮೆರಾ ಮತ್ತು Powerful ಬ್ಯಾಟರಿಯ OPPO A2 ಫೋನ್‌ನ ಬೆಲೆ ಮತ್ತು ಫೀಚರ್ಗಳೇನು?
ರಿಲಯನ್ಸ್ ಜಿಯೋ ತನ್ನ ಏರ್‌ಫೈಬರ್ ಸೇವೆಯನ್ನು ಮೊದಲು 19 ಸೆಪ್ಟೆಂಬರ್ 2023 ರಂದು 8 ನಗರಗಳೊಂದಿಗೆ ಪ್ರಾರಂಭಿಸಿತು. ಈಗ ಇತರ ರಾಜ್ಯಗಳ ಅನೇಕ ನಗರಗಳಲ್ಲಿಯೂ ಈ ಸೇವೆ ಲಭ್ಯವಿದೆ. ರಿಲಯನ್ಸ್ ಜಿಯೋ 2023 ರ ಅಂತ್ಯದ ಮೊದಲು ಏರ್‌ಫೈಬರ್ ಅನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಲು ಯೋಜಿಸಿದೆ. ನಿಮ್ಮ ಪ್ರದೇಶದಲ್ಲಿ ಏರ್‌ಫೈಬರ್ ಲಭ್ಯವಿದೆಯೇ ಎಂದು ಪರಿಶೀಲಿಸಲು ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿ.
ಆಂಧ್ರಪ್ರದೇಶ: ಅನಂತಪುರ, ಕಡಪಾ, ಗುಂಟೂರು, ಕಾಕಿನಾಡ, ಕರ್ನೂಲ್, ನೆಲ್ಲೂರು, ಓಂಗೋಲ್, ರಾಜಮಂಡ್ರಿ, ತಿರುಪತಿ, ವಿಜಯವಾಡ, ವಿಶಾಖಪಟ್ಟಣಂ, ವಿಜಯನಗರಂನಲ್ಲಿ ಲಭ್ಯ.
ದೆಹಲಿ: ದೆಹಲಿ NCR (ದೆಹಲಿ, ಫರಿದಾಬಾದ್, ಗಾಜಿಯಾಬಾದ್, ಗುರುಗ್ರಾಮ್, ನೋಯ್ಡಾ)
ಗುಜರಾತ್: ಅಹಮದಾಬಾದ್, ಆನಂದ್, ಅಂಕಲೇಶ್ವರ, ಬಾರ್ಡೋಲಿ, ಭರೂಚ್, ಭಾವನಗರ, ಭುಜ್, ದಾಹೋದ್, ದೀಸಾ, ಹಿಮ್ಮತ್‌ನಗರ, ಜಾಮ್‌ನಗರ, ಜುನಾಗಢ್, ಕಡಿ, ಕಲೋಲ್, ಮೆಹ್ಸಾನಾ, ಮೊರ್ವಿ, ನಾಡಿಯಾಡ್, ನವಸಾರಿ, ಪಾಲನ್‌ಪುರ್, ರಾಜ್‌ಕೋಟ್, ಸೂರತ್, ವಡೋದರಾ, ವಲ್ಸಾದ್, ವಾಪಿ ಮತ್ತು ವಾಧ್ವಾನ್ ಅಲ್ಲಿ ಲಭ್ಯ.
ಕರ್ನಾಟಕ: ಬೆಂಗಳೂರು, ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾಂಡೇಲಿ, ದೇವಂಗೆರೆ, ದೊಡ್ಡಬಳ್ಳಾಪುರ, ಗುಲ್ಬರ್ಗ, ಹೊಸಪೇಟೆ, ಹುಬ್ಬಳ್ಳಿ-ಧಾರವಾಡ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು, ಮತ್ತು ಉಡುಪಿಯಲ್ಲೂ ಲಭ್ಯ.
ತಮಿಳುನಾಡು: ಚೆನ್ನೈ, ಅಂಬೂರ್, ಚೆಂಗಲ್ಪಟ್ಟು, ಕೊಯಮತ್ತೂರು, ಈರೋಡ್, ಹೊಸೂರು, ಕಾಂಚೀಪುರಂ, ಕರೂರ್, ಕುಂಭಕೋಣಂ, ಮಧುರೈ, ನಾಮಕ್ಕಲ್, ನೈವೇಲಿ, ಪಟ್ಟುಕೊಟ್ಟೈ, ಪೊಲ್ಲಾಚಿ, ಸೇಲಂ, ಶ್ರೀಪೆರುಂಪುದೂರ್, ಶ್ರೀರಂಗಂ, ತಿರುಚಿರಾಪಳ್ಳಿ, ತಿರುಪ್ಪೂರ್, ತಿರುವಳ್ಳೂರು, ತಿರುವಣ್ಣಾಮಲೈ, ಮತ್ತು ವೆಲ್ಲೂರುಲ್ಲೂ ಲಭ್ಯ.
ಮಹಾರಾಷ್ಟ್ರ: ಪುಣೆ, ಮುಂಬೈ, ಅಹ್ಮದ್‌ನಗರ, ಅಮರಾವತಿ, ಔರಂಗಾಬಾದ್, ಚಂದ್ರಾಪುರ, ಜಲ್ನಾ, ಕೊಲ್ಲಾಪುರ, ನಾಗ್ಪುರ, ನಾಂದೇಡ್, ನಾಸಿಕ್, ರತ್ನಗಿರಿ, ಸಾಂಗ್ಲಿ, ಮತ್ತು ಸೊಲ್ಲಾಪುರಲ್ಲೂ ಲಭ್ಯ.
ತೆಲಂಗಾಣ: ಹೈದರಾಬಾದ್, ಆರ್ಮೂರ್ (ಕೋಟಾರ್ಮೂರ್), ಜಗ್ತಿಯಾಲ್, ಕರೀಂನಗರ, ಖಮ್ಮಂ, ಕೊತಗುಡೆಂ, ಮಹೆಬೂಬ್‌ನಗರ, ಮಂಚೇರಿಯಲ್, ಮಿರ್ಯಾಲ್‌ಗುಡ, ನಿರ್ಮಲ್, ನಿಜಾಮಾಬಾದ್, ಪಾಲ್ವೊಂಚ, ಪೆದ್ದಪಲ್ಲಿ (ರಾಮಗುಂಡಂ), ರಾಮಗುಂಡಂ, ಸಂಗರೆಡ್ಡಿ, ಸಿದ್ದಿಪೇಟ್, ಸಿರ್ಸಿಲ್ಲಾ, ಸೂರ್ಯಪೇಟ್, ತಾಂಡಲೂರಿನಲ್ಲೂ ಲಭ್ಯ.
ಪಶ್ಚಿಮ ಬಂಗಾಳ: ಕೋಲ್ಕತ್ತಾ
ರಿಲಯನ್ಸ್ ಜಿಯೋ ತನ್ನ ಹೊಸ ಏರ್‌ಫೈಬರ್ ಅಲ್ಲಿ ಒಟ್ಟಾರೆಯಾಗಿ 6 ಪ್ಲಾನ್ ಲಭ್ಯವಿದ್ದು ಮುಖ್ಯವಾಗಿ ಇವನ್ನು ಎರಡು ಯೋಜನೆಗಳಲ್ಲಿ ವಿಂಗಡಿಸಲಾಗಿದೆ. ಇದರ ಹೆಸರನ್ನು ಕಂಪನಿ AirFiber Plan ಮತ್ತೊಂದು AirFiber Max Plan ಎಂದು ನೀಡಿದ್ದು ಈ ಪ್ಲಾನ್ ಪಡೆಯುವ ಮುಂಚೆ ಕನೆಕ್ಷನ್ ಪಡೆಯಲು ರೂ 1000 ಅನುಸ್ಥಾಪನಾ ಶುಲ್ಕ (Installation charge) ನೀಡಲೇಬೇಕಾಗುತ್ತದೆ. ಅಲ್ಲದೆ ಈ ಎಲ್ಲಾ ಯೋಜನೆಗಳು 6 ಮತ್ತು 12 ತಿಂಗಳ ವ್ಯಾಲಿಡಿಟಿಯೊಂದಿಗೆ ಬರುತ್ತವೆ.
Jio AirFiber Plan : ರೂ.599, ರೂ.899 ಮತ್ತು ರೂ.1199
Jio AirFiber Max Plan : ರೂ.1499, ರೂ.2499 ಮತ್ತು ರೂ.3999 ಆಗಿದೆ.
ಕೊನೆಯದಾಗಿ ನಿಮಗೊಂದು ಹೊಸ ರಿಲಯನ್ಸ್ ಜಿಯೋ ಏರ್‌ಫೈಬರ್ ಬೇಕಿದ್ದರೆ ನೀವು 60008-60008 ನಂಬರ್ಗೆ ಮಿಸ್ಡ್ ಕಾಲ್ ನೀಡಬಹುದು. ಅಲ್ಲದೆ ನೀವು My Jio ಅಪ್ಲಿಕೇಶನ್ ಅಥವಾ ಜಿಯೋ ವೆಬ್‌ಸೈಟ್‌ಗೆ ಭೇಟಿ ಸಹ ನೀಡಿ ಮಾಹಿತಿಯನ್ನು ಪಡೆದು ಹೊಸ ಕನೆಕ್ಷನ್ ಬುಕ್ ಮಾಡಬಹುದು. ಅಲ್ಲದೆ ನೀವೇ ನೇರವಾಗಿ ನಿಮ್ಮ ಹತ್ತಿರದ ಜಿಯೋ ಸ್ಟೋರ್‌ಗೆ ಭೇಟಿ ನೀಡುವ ಮೂಲಕವೂ ಸಹ ಹೊಸ ಕನೆಕ್ಷನ್ ಪಡೆಯಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ