Reliance Jio ಈಗ ನಿಜಕ್ಕೂ ರೂ. 349 ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ ಮತ್ತು ಪ್ರಯೋಜನಗಳನ್ನು ಹೆಚ್ಚಿಸಿದ್ಯಾ?

Reliance Jio ಈಗ ನಿಜಕ್ಕೂ ರೂ. 349 ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ ಮತ್ತು ಪ್ರಯೋಜನಗಳನ್ನು ಹೆಚ್ಚಿಸಿದ್ಯಾ?
HIGHLIGHTS

ರಿಲಯನ್ಸ್ ಜಿಯೋ (Reliance Jio) ತಮ್ಮ ಮಾಸಿಕ ಯೋಜನೆಗಳ ಬೆಲೆಯನ್ನು ಏರಿಸಿ ಬಳಕೆದಾರರ ಸಂಕಷ್ಟಕ್ಕೆ ಗುರಿಯಾಗಿದೆ.

ದಿನಕ್ಕೆ 2GB ಹೆಚ್ಚಿನ ವೇಗದ ಡೇಟಾವನ್ನು 30 ದಿನಗಳಿಗೆ ನೀಡುತ್ತದೆಂದು ಇಂಟರ್ನೆಟ್ ಮೂಲಕ ಹಲವಾರು ಮಾಹಿತಿಗಳು ಹರಿದಾಡುತ್ತಿವೆ

ಆದರೆ ಇದಕ್ಕೆ ತಕ್ಕ ಉತ್ತರ ಮತ್ತು ಇದರ ಸತ್ಯಾಂಶವನ್ನು ಈ ಕೆಳಗೆ ಡಿಜಿಟ್ ಕನ್ನಡದ ಮೂಲಕ ಎಳೆ ಎಳೆಯಾಗಿ ನಾನು ನಿಮಗೆ ನೀಡಲಿದ್ದೇನೆ.

ಭಾರತದಲ್ಲಿ ರಿಲಯನ್ಸ್ ಜಿಯೋ (Reliance Jio) ಸದ್ದಿಲ್ಲದೆ ತನ್ನ ಹಳೆಯ ರೂ. 349 ರೀಚಾರ್ಜ್ ಯೋಜನೆಯ ವ್ಯಾಲಿಡಿಟಿ ಮತ್ತು ಪ್ರಯೋಜನಗಳನ್ನು ಹೆಚ್ಚಿಸಿದ್ದು ದಿನಕ್ಕೆ 2GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳನ್ನು ನೀಡುತ್ತಿದೆ. ಇತ್ತೀಚಿನ ಬೆಲೆ ಏರಿಕೆಯ ನಂತರ ಜಿಯೋ ತನ್ನ ಹಳೆಯ ರೂ 349 ರೀಚಾರ್ಜ್ ಯೋಜನೆಯೊಂದಿಗೆ ಲಭ್ಯವಿರುವ ಈಗಾಗಲೇ ಪ್ರಯೋಜನಗಳನ್ನು ಹೆಚ್ಚಿಸಿ ಎಲ್ಲವನ್ನು ವಿಸ್ತರಿಸಿದೆ. ಈ ಯೋಜನೆಯಲ್ಲಿ ಪ್ರಸ್ತುತ ನಿಮಗೆ ದಿನಕ್ಕೆ 2GB ಹೆಚ್ಚಿನ ವೇಗದ ಡೇಟಾವನ್ನು 30 ದಿನಗಳಿಗೆ ನೀಡುತ್ತದೆಂದು ಇಂಟರ್ನೆಟ್ ಮೂಲಕ ಹಲವಾರು ಮಾಹಿತಿಗಳು ಹರಿದಾಡುತ್ತಿವೆ.

ಈಗ ಮತ್ತೊಂದು ತಲೆನೋವು ತಂದಿಟ್ಟುಕೊಂಡಿದ್ದು ಜನರನ್ನು ಗೊಂದಲಕ್ಕೆ ತಳ್ಳಲು ಪ್ರಯತ್ನಿಸಿದೆ. ಆದರೆ ಇದಕ್ಕೆ ತಕ್ಕ ಉತ್ತರ ಮತ್ತು ಇದರ ಸತ್ಯಾಂಶವನ್ನು ಈ ಕೆಳಗೆ ಡಿಜಿಟ್ ಕನ್ನಡದ ಮೂಲಕ ಎಳೆ ಎಳೆಯಾಗಿ ನಾನು ನಿಮಗೆ ನೀಡಲಿದ್ದೇನೆ ಮಾಹಿತಿ ಇಷ್ಟವಾದರೆ ತಿಳಿದಿಲ್ಲದವರೊಂದಿಗೆ ಹಂಚಿಕೊಳ್ಳಿ.

Also Read: 32MP ಸೆಲ್ಫಿ ಕ್ಯಾಮೆರಾದ Samsung Galaxy S21 FE 5G ಸದ್ದಿಲ್ಲದೆ ಬೆಲೆ ಕಡಿತ! ಹೊಸ ಬೆಲೆ ಎಷ್ಟು ಗೊತ್ತಾ?

Reliance Jio ಯೋಜನೆಯ ಅಸಲಿ ಕಥೆ!

ಈಗಾಗಲೇ ನಿಮಗೆ ತಿಳಿದಿರುವಂತೆ ದೇಶದಲ್ಲಿ ರಿಲಯನ್ಸ್ ಜಿಯೋ (Reliance Jio) ತಮ್ಮ ಮಾಸಿಕ ಯೋಜನೆಗಳ ಬೆಲೆಯನ್ನು ಏರಿಸಿ ಬಳಕೆದಾರರ ಸಂಕಷ್ಟಕ್ಕೆ ಗುರಿಯಾಗಿದೆ. ಜಿಯೋ ತನ್ನ ರೂ 349 ಯೋಜನೆಯನ್ನು ಮಾರ್ಕೆಟಿಂಗ್ ಮಾಡುವ ಟ್ವೀಟ್‌ನಿಂದ ಗೊಂದಲ ಉಂಟು ಮಾಡಿದ್ದು ಇದರಲ್ಲಿ ಇದು 1 ತಿಂಗಳ ಮಾನ್ಯತೆ” ಎಂದು ವಿವರಿಸಲಾಗಿದೆ. ಆದರೆ ಗ್ರಾಹಕರ ಪ್ರತಿಕ್ರಿಯೆಗೆ ಪ್ರತಿಕ್ರಿಯೆಯಾಗಿ ಜಿಯೋ ಯೋಜನೆಯ ಮಾನ್ಯತೆಯನ್ನು 28 ದಿನಗಳಿಂದ 30 ದಿನಗಳವರೆಗೆ ಹೆಚ್ಚಿಸಿದೆ ಎಂದು ಹಲವರು ತಪ್ಪಾಗಿ ನಂಬುವಂತೆ ಮಾಡಿದೆ.

Is Reliance Jio really increase the validity of 349 recharge plan?
Is Reliance Jio really increase the validity of 349 recharge plan?

ಆದರೆ ಅಸಲಿ ಕಥೆ ಏನಪ್ಪಾ ಅಂದ್ರೆ ಕಂಪನಿ ಟ್ವೀಟ್‌ನಲ್ಲಿ ಹೇಳಿರುವಂತೆ ಯಾವುದೇ ಹೊಸ ಬದಲಾವಣೆಯ ಬಗ್ಗೆ ಉಲ್ಲೇಖಗಳನ್ನು ಕಂಪನಿ ನೀಡಿಲ್ಲ. ಪ್ರಸ್ತುತ ಈ ಲೇಖನದ ಸಮಯದಲ್ಲಿ ನಾವು ಕಂಡಂತೆ ಮೈ ಜಿಯೋ ಅಪ್ಲಿಕೇಶನ್ ಮತ್ತು ಜಿಯೋ ವೆಬ್‌ಸೈಟ್ ಎರಡರಲ್ಲೂ ಪರಿಶೀಲನೆ ನಡೆಸಿದ್ದು ಈ ರೂ 349 ಯೋಜನೆಯು ಇನ್ನೂ ಅದೇ 28 ದಿನಗಳ ಮಾನ್ಯತೆಯನ್ನು ತೋರುತ್ತಿದೆ. ಈ ಯೋಜನೆಯ ಮಾನ್ಯತೆಗೆ ಯಾವುದೇ ಬದಲಾವಣೆಗಳಿಲ್ಲ ಎಂದು ಇದು ಖಚಿತಪಡಿಸುತ್ತದೆ. ಆದರೆ ಒಂದು ಕಡೆ ಈ ಪ್ರಚಾರದ ನಂತರ ಜಿಯೋ ಹೊಸ ಯೋಜನೆ ಅಥವಾ ಅಸ್ತಿತ್ವದಲ್ಲಿರುವ ಯಾವುದೇ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಬಹುದು ಇದಕ್ಕಾಗಿ ಕಾದು ನೋಡಬೇಕಿದೆ.

Is Reliance Jio really increase the validity of 349 recharge plan?
Is Reliance Jio really increase the validity of 349 recharge plan?

ರಿಲಯನ್ಸ್ ಜಿಯೋ ರೂ. 349 ಪ್ರಿಪೇಯ್ಡ್ ಪ್ಲಾನ್ ಡೀಟೇಲ್ಸ್:

ಪ್ರಸ್ತುತ ರೂ 349 ಜಿಯೋ ಯೋಜನೆಯು ನಿಮಗೆ ದಿನಕ್ಕೆ 2GB ಡೇಟಾ, ಅನಿಯಮಿತ ವಾಯ್ಸ್ ಕರೆ ಮತ್ತು ದಿನಕ್ಕೆ 100 SMS ಸೌಲಭ್ಯವನ್ನು ಪ್ರಸ್ತುತ 28 ದಿನಗಳ ಅವಧಿಗೆ ನೀಡುತ್ತಿದೆ. ಇದು ಈಗ ಜಿಯೋದ ಅನಿಯಮಿತ 5G ಸೇವೆಯನ್ನು ಸಹ ಪ್ರವೇಶಿಸಲು ಅತಿ ಕಡಿಮೆ ವೆಚ್ಚದ ಯೋಜನೆಯಾಗಿದೆ. ಇದನ್ನು ಮೊದಲ ಬಾರಿಗೆ 3ನೇ ಜುಲೈ 2024 ಮೊದಲು ಅನಿಯಮಿತ 5G ಪ್ರಯೋಜನವು ರೂ 239 ಕ್ಕಿಂತ ಕಡಿಮೆ ಯೋಜನೆಗಳೊಂದಿಗೆ ಲಭ್ಯವಿತ್ತು. ಆದರೆ ಈಗ ಇತ್ತೀಚಿನ ಸುಂಕದ ಹೆಚ್ಚಳದ ನಂತರ ಜಿಯೋ ರೂ 239 ಪ್ಲಾನ್‌ನ ಬೆಲೆಯನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ಅದರಿಂದ ಕೆಳಗಿನ ಯೋಜನೆಗಳಲ್ಲಿ ಈ ಅನಿಯಮಿತ 5G ಪ್ರಯೋಜನವನ್ನು ತೆಗೆದುಹಾಕಿದೆ.

ನಿಮ್ಮ ಗಮನಕ್ಕೆ: ನಿಮ್ಮ ಮೊಬೈಲ್ ನಂಬರ್‌ಗೆ ಲಭ್ಯವಿರುವ ಅತ್ಯುತ್ತಮವಾದ ಯೋಜನೆ ಮತ್ತು ಪ್ರಯೋಜನಗಳನ್ನು Digit Recharge ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo