IPL 2025 - Jio Best Recharge Plan (1)
IPL 2025: ಭಾರತದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ನಾಳೆಯಿಂದ ಶುರುವಾಗಲು ಪೂರ್ತಿಯಾಗಿ ಸಜ್ಜಾಗಿವೆ. ಆದರೆ ಇನ್ನೂ ಅನೇಕ ಜನರಿಗೆ ಈ ಐಪಿಎಲ್ ಬಗ್ಗೆ ಅಷ್ಟಾಗಿ ಮಾಹಿತಿ ತಿಳಿದಿಲ್ಲ. ಈ ಐಪಿಎಲ್ ನಾಳೆಯಿಂದ ಅಂದ್ರೆ 22ನೇ ಮಾರ್ಚ್ 2025 ರಿಂದ ಸಂಜೆ 7:30ಕ್ಕೆ ಸರಿಯಾಗಿ KKR ಅಂದ್ರೆ ಕೋಲ್ಕತ್ತಾ ಮತ್ತು RCB ಅಂದ್ರೆ ಬೆಂಗಳೂರಿನ ನಡುವೆ ಮೊದಲ ಮ್ಯಾಚ್ ನಡೆಯಲಿದೆ. ಅಲ್ಲದೆ ಈ ಐಪಿಎಲ್ ಕ್ರಿಕೆಟ್ ಮ್ಯಾಚ್ ವೀಕ್ಷಿಸಲು ಜಿಯೋ ಬಳಕೆದಾರರಿಗೆ ಕಂಪನಿ ವಿಶೇಷ ಆಫರ್ ಅನ್ನು ಸಹ ನೀಡುತ್ತಿದೆ.
ಸರಳವಾಗಿ ಹೇಳುವುದಾದರೆ IPL ಅಂದ್ರೆ ಇಂಡಿಯನ್ ಪ್ರೀಮಿಯರ್ ಲೀಗ್ ಇದೊಂದು ಸೀಸನ್ ಇವೆಂಟ್ ಆಗಿದ್ದು ಇದರಲ್ಲಿ ಹೆಚ್ಚು ಯೋಗ್ಯವಾದ ಮತ್ತು ಪ್ರಸ್ತುತ ಕ್ರಿಕೆಟ್ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಕ್ರಿಕೆಟ್ ಆಟಗಾರರನ್ನು ಒಂದು ತಿಂಗಳ ಮುಂಚೆಯೇ ಪ್ರತ್ಯೇಕ ತಂಡದ ಮಾಲೀಕರು ಲಕ್ಷಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿ ಖರೀದಿಸಿ ಟೀಮ್ ಕಟ್ಟಿ ಆಟವಾಡಿಸುತ್ತಾರೆ.
Also Read: Limited Time Offer: ಅಮೆಜಾನ್‌ನಿಂದ ಇಷ್ಟು ಸಸ್ತಾ ಬೆಲೆಗೆ Vivo T3 Lite 5G ಬಿಟ್ರೆ ಬೇರೊಂದಿಲ್ಲ!
ಮೊದಲಿಗೆ ನೀವು 299 ರೂಗಳಿಕ್ಕಿಂತ ಅಧಿಕ ಮೌಲ್ಯದ ಜಿಯೋ ರಿಚಾರ್ಜ್ ಪ್ಲಾನ್ ಹೊಂದಿದ್ದರೆ ಉಚಿತವಾಗಿ JioHotstar ಮೂಲಕ ಉಚಿತ IPL ಮ್ಯಾಚ್ ವೀಕ್ಷಿಸಬಹುದಾಗಿದೆ. ಆದರೆ ಈ ಸಾಮಾನ್ಯ ಆಫರ್ ಬಗ್ಗೆ ಮಾತನಾಡುವುದಾದರೆ ನೀವು 299 ರೂಗಳಿಕ್ಕಿಂತ ಅಧಿಕ ಜಿಯೋ ರಿಚಾರ್ಜ್ ಪ್ಲಾನ್ ಹೊಂದಿದ್ದರೂ ಆ ಯೋಜನೆಯಲ್ಲಿ JioHotstar ಅಪ್ಲಿಕೇಶನ್ ಸೌಲಭ್ಯವಿಲ್ಲದಿದ್ದರೆ ಕೇವಲ ನೀವು 100 ರೂಗಳ ಡೇಟಾ ಪ್ಯಾಕ್ ರಿಚಾರ್ಜ್ ಮಾಡುವ ಮೂಲಕ 90 ದಿನಗಳಿಗೆ ಉಚಿತ JioHotstar ಅಪ್ಲಿಕೇಶನ್ ಚಂದಾದಾರಿಗೆಯನ್ನು 5GB ಡೇಟಾದೊಂದಿಗೆ ಬಳಸಬಹುದು.
ಆದರೆ ಒಂದು ವೇಳೆ ನೀವು ಜಿಯೋದ 299 ರೂಗಳಿಂದ ಕಡಿಮೆ ರಿಚಾರ್ಜ್ ಪ್ಲಾನ್ ಹೊಂದಿದ್ದರೆ ಮೊದಲು ನಿಮ್ಮ ಮೂಲ ರಿಚಾರ್ಜ್ ಯೋಜನೆಯನ್ನು 299 ರೂಗಳ ಪ್ಲಾನ್ ಜೊತೆಗೆ ರಿಚಾರ್ಜ್ ಮಾಡಿಕೊಂಡರೆ ಸಾಕು 90 ದಿನಗಳಿಗೆ ಉಚಿತ JioHotstar ಅಪ್ಲಿಕೇಶನ್ ಚಂದಾದಾರಿಗೆಯನ್ನು 5GB ಡೇಟಾದೊಂದಿಗೆ ಉಚಿತವಾಗಿ IPL ಕ್ರಿಕೆಟ್ ಮ್ಯಾಚ್ ವೀಕ್ಷಿಸಬಹುದಾಗಿದೆ.
ರಿಲಯನ್ಸ್ ಜಿಯೋದ 299 ರೂ. ಯೋಜನೆಯು ಅನಿಯಮಿತ ವಾಯ್ಸ್ ಕರೆ, ದಿನಕ್ಕೆ 100 ಉಚಿತ SMS ಮತ್ತು 1.5GB ದೈನಂದಿನ ಡೇಟಾದೊಂದಿಗೆ ಬರುತ್ತದೆ. ಈ ಯೋಜನೆಯು 28 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತದೆ. ಹೇಳಿದಂತೆ ಈ ಯೋಜನೆಯೊಂದಿಗೆ ಯಾವುದೇ ಅನಿಯಮಿತ 5G ಲಭ್ಯವಿಲ್ಲ.
ಜಿಯೋ ಯಾವುದೇ ಹೆಚ್ಚುವರಿ ಮನರಂಜನಾ ಪ್ರಯೋಜನಗಳನ್ನು ನೀಡುವುದಿಲ್ಲ ಆದರೆ ಜಿಯೋಟಿವಿ ಮತ್ತು ಜಿಯೋಕ್ಲೌಡ್‌ಗೆ ಪ್ರವೇಶ ಪಡೆಯಬಹುದು. ಈ ಜಿಯೋ ಪ್ಲಾನ್ ಪ್ರತಿದಿನ 1.5GB ಡೇಟಾವನ್ನು ನೀಡುವುದರೊಂದಿಗೆ ಪೂರ್ತಿ ವ್ಯಾಲಿಡಿಟಿಗೆ ಒಟ್ಟಾರೆಯಾಗಿ ಬರೋಬ್ಬರಿ 42GB ಡೇಟಾವನ್ನು ನೀಡುತ್ತದೆ. ಉಚಿತ ಡೇಟಾದ ಬಳಕೆಯ ನಂತರ ಬ್ರೌಸಿಂಗ್‌ಗಾಗಿ ವೇಗವು 64Kbps ಕಡಿಮೆಯಾಗಿ ಉಚಿತವಾಗಿ ಬಳಸಲು ಅನುವು ಮಾಡಿಕೊಡುತ್ತದೆ.