IPL 2024: ಹೆಚ್ಚುವರಿ ಹಣ ನೀಡದೆ ಉಚಿತವಾಗಿ ಲೈವ್ ಐಪಿಎಲ್ ಮ್ಯಾಚ್‌ಗಳನ್ನು ನೋಡಲು ಈ ಪ್ಲಾನ್‌ಗಳು ಬೆಸ್ಟ್!

IPL 2024: ಹೆಚ್ಚುವರಿ ಹಣ ನೀಡದೆ ಉಚಿತವಾಗಿ ಲೈವ್ ಐಪಿಎಲ್ ಮ್ಯಾಚ್‌ಗಳನ್ನು ನೋಡಲು ಈ ಪ್ಲಾನ್‌ಗಳು ಬೆಸ್ಟ್!
HIGHLIGHTS

IPL Free Live Stream ಕ್ರಿಕೆಟ್ ಪ್ರೇಮಿಗಳಿಗಾಗಿ Jio, Airtel ಮತ್ತು Vi ಕೈಗೆಟುಕುವ ಬೆಲೆಗೆ ಅತ್ಯುತ್ತಮ ಯೋಜನೆಗಳನ್ನು ನೀಡುತ್ತಿದೆ

ಒಂದೇ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ, ಹೈಸ್ಪೀಡ್ 5G ಡೇಟಾ ಮತ್ತು ಅನೇಕ ಪ್ರಯೋಜನಗಳನ್ನು ನೀಡುತ್ತಿವೆ.

IPL 2024 ವೀಕ್ಷಿಸಲು ಹೆಚ್ಚುವರಿ ಹಣ ನೀಡದೆ ಉಚಿತವಾಗಿ ಲೈವ್ ಐಪಿಎಲ್ ಮ್ಯಾಚ್‌ಗಳನ್ನು ವೀಕ್ಷಿಸಬಹುದು.

ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ (IPL 2024) ಪಂದ್ಯವನ್ನು ಉಚಿತವಾಗಿ ವೀಕ್ಷಿಸಲು ನೀವು ಬಯಸಿದರೆ ನಿಮ್ಮ ಪ್ರಿಪೇಡ್ ಯೋಜನೆಯಲ್ಲಿ ಈ ಸೌಲಭ್ಯವನ್ನು ನೀಡುತ್ತಿವೆ. ನೀವು ಪ್ರತಿ ತಿಂಗಳು ರಿಚಾರ್ಜ್ ಮಾಡಿಕೊಳ್ಳುವ ಬಳಕೆದಾರರಾಗಿದ್ದಾರೆ ಈ ಕೆಲವು ಹೊಸ ಡೇಟಾ ಯೋಜನೆಗಳ ಬಗ್ಗೆ ಒಮ್ಮೆ ಪರಿಶೀಲಿಸಬಹುದು ಏಕೆಂದರೆ ವಿಶೇಷ ಕ್ರಿಕೆಟ್ ಪ್ರೇಮಿಗಳಿಗಾಗಿ (IPL 2024) ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಕೈಗೆಟುಕುವ ಬೆಲೆಗೆ ಒಂದೇ ಯೋಚನೆಯಲ್ಲಿ ಅನ್ಲಿಮಿಟೆಡ್ ಕರೆಗಳು ಹೈಸ್ಪೀಡ್ 5G ಡೇಟಾ ಮತ್ತು ಅನೇಕ ಪ್ರಯೋಜನಗಳನ್ನು ನೀಡುತ್ತಿವೆ. ಈ ಮೂಲಕ ನೀವು ರಿಚಾರ್ಜ್ ಮಾಡಿಕೊಳ್ಳುವ ಯೋಜನೆಯಲ್ಲಿ ಐಪಿಎಲ್ ಕ್ರಿಕೆಟ್ (IPL 2024) ಪಂದ್ಯಗಳನ್ನು ಲೈವ್ ಸ್ಟ್ರೀಮ್ ಉಚಿತವಾಗಿ ವೀಕ್ಷಿಸಬಹುದು.

ರಿಲಯನ್ಸ್ ಜಿಯೋ 444 ರೂಪಾಯಿಗಳ (IPL 2024) ರಿಚಾರ್ಜ್ ಯೋಜನೆ:

ರಿಲಯನ್ಸ್ ಜಿಯೋ ಹೊಂದಿರುವ 444 ರೂಗಳ ಪ್ರಿಪೇಡ್ ಯೋಜನೆಯಲ್ಲಿ ನಿಮಗೆ ಹಲವಾರು ಸೌಲಭ್ಯಗಳನ್ನು ನೀಡಲಿದ್ದು ವಿಶೇಷವೇನೆಂದರೆ ಈ ಯೋಜನೆ ಹೆಚ್ಚಿನ ಡೇಟ್ ಆ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಮೂಲಕ ಈ ಯೋಜನೆ ಕೇವಲ ಡೇಟಾವನ್ನು ನೀಡುವ ಅಂತಹ ಪ್ರಿಪೇಡ್ ಯೋಜನೆ ಆಗಿರುವುದರಿಂದ ಇದರಲ್ಲಿ ನಿಮಗೆ ಯಾವುದೇ ರೀತಿಯ ಕರೆಗಳು ಅಥವಾ ಎಸ್ಎಂಎಸ್ ಸಿಗೋದಿಲ್ಲ ಎಂಬುದನ್ನು ಗಮನಿಸಬೇಕಾದ ವಿಷಯವಾಗಿದೆ.

How to wtch IPL Free Live Stream 2024
How to wtch IPL Free Live Stream 2024

ರಿಲಯನ್ಸ್ ಜಿಯೋ ನೀಡುತ್ತಿರುವ ಪ್ರಿಪೇಡ್ ಯೋಜನೆಯು 60 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟಾರೆಯಾಗಿ 100GB ಹೈ ಸ್ಪೀಡ್ ಡೇಟಾವನ್ನು ನಡೆಯುತ್ತದೆ. ಈ ಕಾರಣದಿಂದಾಗಿ ನಿಮ್ಮ ನಿಮ್ಮ ಎಂಟರ್ಟೈನ್ಮೆಂಟ್ ಜೊತೆಗೆ ಎಲ್ಲಾ ಐಪಿಎಲ್ ಲೈವ್ ಸ್ಟ್ರೀಮಿಂಗ್ ಕ್ರಿಕೆಟ್ ಪಂದ್ಯಾವಳಿಗಳ ಅನುಭವವನ್ನು ಇನ್ನಷ್ಟು ಭಿನ್ನವಾಗಿಸಲು ಉತ್ತಮ ಆಯ್ಕೆಯಾಗಿದೆ.

ಏರ್ಟೆಲ್ 699 ರೂಪಾಯಿಗಳ (IPL 2024) ರಿಚಾರ್ಜ್ ಯೋಜನೆ:

ಈ ಪಟ್ಟಿಯ ಎರಡನೇ ಪ್ರಿಪೇಡ್ ಯೋಜನೆ ಏರ್ಟೆಲ್ ಬಳಕೆದಾರರಿಗಾಗಿದ್ದು ಹಲವಾರು ಉತ್ತಮ ಸೌಲಭ್ಯಗಳೊಂದಿಗೆ ಬರುವಂತಹ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಯಾಗಿದೆ. ಯೋಜನೆಯಲ್ಲಿ ಪ್ರತಿದಿನ 3GB ಹೈ ಸ್ಪೀಡ್ ಡೇಟಾದೊಂದಿಗೆ ಏರ್ಟೆಲ್ ಎಕ್ಸ್ಟ್ರೀಮ್ ಪ್ಲೇ ಜೊತೆಗೆ 20+ ಅಧಿಕ ಉಚಿತ OTT ಅಪ್ಲಿಕೇಶನ್ ಗಳನ್ನು ಬಳಸಲು ಮಾಡಿಕೊಡುತ್ತದೆ. ಅಲ್ಲದೆ ಉತ್ತಮ ಅನ್ಲಿಮಿಟೆಡ್ 5G ಬಳಸಲು ಸೂಕ್ತವಾದ ಪ್ಲಾನ್ ಆಗಿದೆ. ಅತಿ ಹೆಚ್ಚಾಗಿ ವಿಡಿಯೋಗಳನ್ನು ವೀಕ್ಷಿಸಲು ಬಯಸುವ ಬಳಕೆದಾರರಿಗೆ ಈ ಏರ್ಟೆಲ್ ಯೋಜನೆ ಉತ್ತಮವಾದ ಆಯ್ಕೆಯಾಗಿದೆ. ಏಕೆಂದರೆ ಈಗಾಗಲೇ ಹೇಳಿರುವಂತೆ ಇದರಲ್ಲಿ ಸೂಪರ್ ಫಾಸ್ಟ್ ಇಂಟರ್ನೆಟ್ ನೀಡಲಾಗುವುದು. ಈ ಯೋಜನೆಯನ್ನು ಖರೀದಿಸುವ ಮೂಲಕ ಯಾವುದೇ ಅಡಚಣೆಗಳಿಲ್ಲದೆ ಐಪಿಎಲ್ ಲೈವ್ ಸ್ಟ್ರೀಮಿಂಗ್ ಪೂರ್ತಿ ಐವತ್ತಾರು ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯಬಹುದು.

ವೊಡಾಫೋನ್ ಐಡಿಯಾದ 699 ರೂಪಾಯಿಗಳ ರಿಚಾರ್ಜ್ ಯೋಜನೆ:

ಈ ವೊಡಾಫೋನ್ ಐಡಿಯಾದ 699 ರೂಪಾಯಿಗಳ ರಿಚಾರ್ಜ್ Airtel ಯೋಜನೆಯಂತೆಯೇ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಈ ಯೋಚನೆಯು ಸಹ ನಿಮಗೆ 56 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ಬಳಸಲು ಅವಕಾಶ ನೀಡುತ್ತದೆ. ಈ ಯೋಜನೆಯಲ್ಲಿ ವಿಶೇಷವೇನೆಂದರೆ ಏರ್ಟೆಲ್ ಗಿಂತ ಉತ್ತಮವಾದ ಪೂರ್ತಿ ಡೇಟಾ ದೊಂದಿಗೆ ಪ್ರತಿದಿನ 3GB ಡೇಟಾವನ್ನು ಬಳಸಲು ಬಳಕೆದಾರರಿಗೆ ಅವಕಾಶವಿದೆ. ಈ ಯೋಜನೆಯು ಮೇಲಿನ ಎರಡು ಯೋಜನೆಗಳಿಗಿಂತ ಅತಿ ಹೆಚ್ಚಿನ ಅನುಕೂಲ ಮತ್ತು ಪ್ರಯೋಜನಗಳನ್ನು ನೀಡುತ್ತದೆ ಹೇಗಂದರೆ ಇದರಲ್ಲಿ ನೀವು ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಮತ್ತು ಡೇಟಾವನ್ನು ಮಧ್ಯರಾತ್ರಿ 12am ಗಂಟೆಯ ನಂತರದಿಂದ ಹಿಡಿದು ಬೆಳಗ್ಗೆ 6am ಗಂಟೆವರೆಗೆ ಬಳಸುವುದರೊಂದಿಗೆ ಪ್ರತಿದಿನ 100 ಎಸ್ಎಂಎಸ್ಗಳನ್ನು ಸಹ ನೀಡಲಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo