ಜಿಯೋಫೈಬರ್ ದೇಶದಲ್ಲಿ ನಡೆಯುತ್ತಿರುವ ಲಾಕ್‌ಡೌನ್ ಅನ್ನು ಗಮನದಲ್ಲಿಟ್ಟುಕೊಂಡು ಇತ್ತೀಚೆಗೆ 199 ರೂಗಳ ಜಿಯೋ ಫೈಬರ್ ಯೋಜನೆಯನ್ನು ಬಿಡುಗಡೆ ಮಾಡಿತು. ಇದು 100mbps ವೇಗದಲ್ಲಿ 7 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯಲ್ಲಿ 1000GB ಡೇಟಾವನ್ನು ನೀಡಲಾಗುತ್ತಿದೆ. ಡೇಟಾ ಮಿತಿ ಮುಗಿದ ನಂತರ ಇಂಟರ್ನೆಟ್ ವೇಗ 1Mbps ಗೆ ಕಡಿಮೆಯಾಗುತ್ತದೆ. ಹೆಚ್ಚಿನ ಡೇಟಾ ಅಗತ್ಯವಿರುವ ಜಿಯೋ ಫೈಬರ್ ಬಳಕೆದಾರರಿಗೆ ಈ ಯೋಜನೆ ಹೆಚ್ಚು ಉಪಯುಕ್ತವಾಗಿದೆ. ಜಿಎಸ್‌ಟಿಯೊಂದಿಗೆ ಈ ಆಡ್ ಆನ್ ಯೋಜನೆಯ ವೆಚ್ಚ 234 ರೂಗಳಾಗಿವೆ. ಈ ಪ್ಲಾನಿನ ಮತ್ತೊಂದು ವಿಶೇಷ ವಿಷಯವೆಂದರೆ ಇದನ್ನು ಪ್ರತ್ಯೇಕ ಯೋಜನೆಯಾಗಿಯೂ ಬಳಸಬಹುದು. ಈ ಯೋಜನೆಯನ್ನು ಸ್ವತಂತ್ರ ಯೋಜನೆಯಾಗಿ ಬಳಸಲು ನೀವು ಅದನ್ನು ಹೇಗೆ ಆಕ್ಟಿವೇಟ್ ಮಾಡೋದೆಗೆಂದು ತಿಳಿಯೋಣ.
ಮೊದಲಿಗೆ ಮೈ ಜಿಯೋ ಆ್ಯಪ್ ತೆರೆಯಿರಿ. ರಿಜಿಸ್ಟರ್ಡ್ ನಂಬರ್ ಮೂಲಕ ಲಾಗಿನ್ ಆಗಿರಿ ನಂತರ ರಿಚಾರ್ಜ್ ಬಟನ್ ಕ್ಲಿಕ್ ಮಾಡಿ. ಅದರಲ್ಲಿ ಕಾಂಬೋ ಸೆಕ್ಷನ್ ಆಯ್ಕೆ ಮಾಡಿ. ನಂತರ 199 ಪ್ಲ್ಯಾನ್ ಆಯ್ಕೆ ಮಾಡಿ ಪೇಮೆಂಟ್ ಆಯ್ಕೆಯಲ್ಲಿ ಪಾವತಿ ಮಾಡಿ. ಈಗ ನಿಮ್ಮ ಜಿಯೋ ಫೈಬರ್ ಖಾತೆಯಲ್ಲಿ 199 ಪ್ಲ್ಯಾನ್ ಆಕ್ಟಿವೇಟ್ ಆಗುತ್ತದೆ. ಜಿಯೋ ವರ್ಕ್ ಫ್ರಮ್ ಹೋಮ್‌ನಲ್ಲಿ ಅಧಿಕ ಡೇಟಾ ಬಳಸುವವರಿಗೆ ಈ ಆಯ್ಕೆ ನೀಡಿದ್ದು 7 ದಿನದ ವ್ಯಾಲಿಡಿಟಿಯೊಂದಿಗೆ ಈ ಜಿಯೋ ಕಾಂಬೋ ಆಫರ್ ಲಭ್ಯವಿರುತ್ತದೆ.
ಮೆಸೇಜ್ಗಳನ್ನು ಸ್ವೀಕರಿಸಿದ ಕೆಲವು ಗಂಟೆಗಳ ನಂತರ ನಿಮ್ಮ ಜಿಯೋ ಫೈಬರ್ ಸಂಪರ್ಕದಲ್ಲಿ ಈ ಯೋಜನೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಗಮನದಲ್ಲಿಡಿ ಇದನ್ನು ಬಳಸಲು ಬಳಕೆದಾರರು ಜಿಯೋ ಫೈಬರ್ ಕನೆಕ್ಷನ್ ಮೂಲಕ ರೂಟರ್ ಖರೀದಿಸಬೇಕಾಗುತ್ತದೆ. ಅದಕ್ಕಾಗಿ 1500 ರೂಗಳ ಮರುಪಾವತಿಸಬಹುದಾದ ಠೇವಣಿಯನ್ನು ಪಾವತಿಸಬೇಕಾಗುತ್ತದೆ. ಅವರ ಸ್ಥಳವು ಭೌಗೋಳಿಕವಾಗಿ ಕಾರ್ಯಸಾಧ್ಯವಾಗಿದ್ದರೆ ಮಾತ್ರ ಜಿಯೋ ಫೈಬರ್ ರೂಟರ್ ತಮ್ಮ ಪ್ರದೇಶದಲ್ಲಿ ಸ್ಥಿರಗೊಳ್ಳುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಿದ ಡೇಟಾ ಬೇಡಿಕೆಗಳನ್ನು ಬೆಂಬಲಿಸಲು ಪ್ರದೇಶಗಳಲ್ಲಿ ರಿಲಯನ್ಸ್ ಜಿಯೋ ಫೈಬರ್ ತನ್ನ ಸಂಪರ್ಕವನ್ನು ಸುಧಾರಿಸಿದೆ.
Jio ಗ್ರಾಹಕರು ನೀವಾಗಿದ್ದರೆ ಇತ್ತೀಚಿನ ಅತ್ಯುತ್ತಮ ಮೊಬೈಲ್ ರಿಚಾರ್ಜ್ ಪ್ಲಾನ್ಗಳನೊಮ್ಮೆ ನೋಡ್ಕೊಳ್ಳಿ.