ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸರ್ಕಾರದ ಒಡೆತನದ ಅತಿದೊಡ್ಡ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾಗಿದೆ. BSNL ಇನ್ನೂ ದೇಶದಲ್ಲಿ 4G ಸೇವೆಗಳನ್ನು ಹೊರತಂದಿಲ್ಲವಾದರೂ ಇದು ಇನ್ನೂ ಭಾರತದಾದ್ಯಂತ ಉತ್ತಮವಾದ 3G ನೆಟ್ವರ್ಕ್ ಒದಗಿಸುತ್ತದೆ. ಆದ್ದರಿಂದ ನೀವೊಂದು ಹೊಸ BSNL New SIM Card ಖರೀದಿಸಲು ಯೋಚಿಸುತ್ತಿದ್ದರೆ ಮೊದಲು ಇದರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯಿರಿ. ಯಾಕೆಂದರೆ ಹೊಸ ಸಿಮ್ ಕಾರ್ಡ್ ಖರೀದಿಯ ನಂತರ ತಲೆಗೆ ಬರುವ ಮೊದಲ ಪ್ರಶ್ನೆಯೆಂದರೆ ಅದನ್ನು ಆಕ್ಟಿವೇಟ್ ಮಾಡುವುದು ಹೇಗೆ ಎನ್ನುವುದು ಈ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ನಿಮ್ಮ ಹೊಸ ಸಿಮ್ ಕಾರ್ಡ್ ಬಗ್ಗೆ ಹೆಚ್ಚು ಚಿಂತಿಸದೆ ಸರಳವಾಗಿ ಹೇಗೆ ಸಕ್ರಿಯಗೊಳಿಸುವುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿಸಲಿದ್ದೇವೆ.
Also Read: Moto G45 5G ಇಂದಿನಿಂದ ಮೋಟೊರೋಲದ ಈ 5G ಸ್ಮಾರ್ಟ್ಫೋನ್ ಕೇವಲ ₹9999 ರೂಗಳಿಗೆ ಮಾರಾಟವಾಗುತ್ತಿದೆ
ಮೊದಲಿಗೆ ಬಳಕೆದಾರರು ಪ್ರಾದೇಶಿಕ ಮೊಬೈಲ್ ವಿತರಕರು ಅಥವಾ ಅಧಿಕೃತ BSNL ಸೇವಾ ಕೇಂದ್ರಗಳಿಂದ ಹೊಸ ಬಿಎಸ್ಎನ್ಎಲ್ ಸಿಮ್ ಕಾರ್ಡ್ ಅನ್ನು ಖರೀದಿಸಬಹುದು. ಒಮ್ಮೆ ನೀವು ನಿಮ್ಮ ಸಿಮ್ ಅನ್ನು ಪಡೆದುಕೊಂಡ ನಂತರ ಅದನ್ನು ಬಳಸಲು ಅದನ್ನು ಮೊದಲು ಸಕ್ರಿಯಗೊಳಿಸಬೇಕಾಗುತ್ತದೆ. ಆದರೆ ನೀವು ಈಗಾಗಲೇ BSNL ಬಳಕೆದಾರರಾಗಿದ್ದು 3G ನೆಟ್‌ವರ್ಕ್‌ನಿಂದ 4G ನೆಟ್‌ವರ್ಕ್‌ಗೆ ಅಪ್‌ಗ್ರೇಡ್ ಮಾಡಲು ಬಯಸಿದರೆ ಇದು ಉಚಿತವಾಗಿದೆ. ಆದರೆ ಹೊಸದಾಗಿ BSNL ಸಿಮ್ ಕಾರ್ಡ್ ಖರೀದಿಸಬೇಕೆಂದುಕೊಂಡಿದ್ದರೆ ಇದರ ಬೆಲೆ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ನೀವು ಇದನ್ನು ಹೇಗೆ ಮಾಡಬಹುದು ಎಂಬುದನ್ನು ಹಂತ ಹಂತವಾಗಿ ಈ ಕೆಳಗೆ ನಿಮಗೆ ವಿವರಿಸಲಾಗಿದೆ.
➥ಮೊದಲಿಗೆ BSNL New SIM Card ನಿಮ್ಮ ಮೊಬೈಲ್ ಫೋನ್ ಒಳಗೆ ಹಾಕಿ ಒಮ್ಮೆ ರೀಸ್ಟಾರ್ಟ್ ಮಾಡಿಕೊಂಡು ನೆಟ್‌ವರ್ಕ್ ಸಿಂಗಲ್ ಬರುವವರೆಗೆ ಕಾಯಬೇಕು.
➥ಫೋನಿನ ಡಿಸ್‌ಪ್ಲೇಯ ಮೇಲ್ಭಾಗದಲ್ಲಿರುವ ಆಗಾಗ ನೋಡುತ್ತಿರಿ ಯಾಕೆಂದರೆ BSNL ಸಿಮ್ ಕಾರ್ಡ್ ನೆಟ್‌ವರ್ಕ್ ಸಿಗ್ನಲ್ ಕಾಣಿಸಿಕೊಂಡ ನಂತರವಷ್ಟೇ ಮುಂದೆ ಸಾಗಬಹುದು. (ಒಂದು ವೇಳೆ ನೀವು ಸಿಮ್ ಕಾರ್ಡ್ ಖರೀದಿಸಿ 2-3 ದಿನಗಳಾಗಿ ಇನ್ನೂ ನೆಟ್ವರ್ಕ್ ಬಂದಿಲ್ಲವಾದರೆ ನೀವು ಎಲ್ಲಿಂದ ಸಿಮ್ ಕಾರ್ಡ್ ಖರೀದಿಸಿದಿರೋ ಅಲ್ಲಿಗೆ ಒಮ್ಮೆ ಭೇಟಿ ನೀಡಿ ಸಮಸ್ಯೆ ಪರಿಶೀಲಸಿಕೊಳ್ಳಬೇಕಾಗುತ್ತದೆ).
➥ನಿಮ್ಮ BSNL ಸಿಮ್ ಕಾರ್ಡ್ ನೆಟ್‌ವರ್ಕ್ ಸಿಗ್ನಲ್ ಕಾಣಿಸಿಕೊಂಡ ನಂತರ ನಿಮ್ಮನ್ನು ಮತ್ತು ನಿಮ್ಮ ದಾಖಲೆಗಳನ್ನು ಖಚಿತಪಡಿಸಿಕೊಳ್ಳಲು (Verification Process) ಪರಿಶೀಲನಾ ಪ್ರಕ್ರಿಯೆ ಮೂಲಕ ಹಾದುಹೋಗಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಹೊಸ BSNL ಸಿಮ್ ಕಾರ್ಡ್ನಿಂದ 1507 ಸಂಖ್ಯೆಗೆ ಕರೆ ಮಾಡಿ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬೇಕಾಗುತ್ತದೆ.
➥ನಿಮ್ಮ BSNL ಸಿಮ್ ಪರಿಶೀಲನಾ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದ ನಂತರ ಸಕ್ರಿಯಗೊಳಿಸಲಾಗುತ್ತದೆ. ನಿಮ್ಮ ಹ್ಯಾಂಡ್‌ಸೆಟ್‌ಗೆ ಅನನ್ಯವಾದ ಇಂಟರ್ನೆಟ್ ಸೆಟ್ಟಿಂಗ್‌ಗಳನ್ನು ಸಹ ಪಡೆಯುತ್ತೀರಿ. ನೀವು ಈ ಸೇಟಿಂಗ್ ಸೇವ್ ಮಾಡಿಕೊಂಡ ನಂತರ ನಿಮ್ಮ ಸಿಮ್ ಕಾರ್ಡ್ ಸರಾಗವಾಗಿ ಬಳಸಲು ಸಿದ್ದವಾಗುತ್ತದೆ.
➥ಇದರೊಂದಿಗೆ ಸಿಮ್ ಕಾರ್ಡ್ ಈಗ ಕರೆ ಸೇವೆಗಳನ್ನು ಬಳಸಲು ಯೋಗ್ಯವಾಗಿರುತ್ತದೆ. ಇದರೊಂದಿಗೆ ಒಮ್ಮೆ ನೀವು 123 ನಂಬರ್ ಡಯಲ್ ಮಾಡಿ ನೋಡಬಹುದು. ಅಲ್ಲದೆ ತಮ್ಮ ಬ್ಯಾಲೆನ್ಸ್ ಎಷ್ಟು ಎಂಬುದನ್ನು ತಿಳಿಯಲು IVRS ಸೂಚನೆಗಳನ್ನು ಅನುಸರಿಸಬಹುದು. ಈಗ ಬಳಕೆದಾರರು ತಮ್ಮ ಸಿಮ್ ಅನ್ನು ಕರೆಗಳು ಮತ್ತು ಸೇವೆಗಳಿಗಾಗಿ ಬಳಸಲು ಪ್ರಾರಂಭಿಸಬಹುದು.
ನಿಮ್ಮ ಯಾವುದೇ ಐಫೋನ್, ಆಂಡ್ರಾಯ್ಡ್, ವಿಂಡೋಸ್ ಫೋನ್ ಇತ್ಯಾದಿಗಳಲ್ಲಿ ಹೆಚ್ಚಿನ ವೇಗದ BSNL 3G ಸೇವೆಗಳನ್ನು ಬಳಸಲು ಗ್ರಾಹಕರು BSNL ಡೇಟಾ ಸಕ್ರಿಯಗೊಳಿಸುವಿಕೆ ಮತ್ತು ಪ್ರಿಪೇಯ್ಡ್ ಮೊಬೈಲ್‌ನಲ್ಲಿ ನಿಷ್ಕ್ರಿಯಗೊಳಿಸುವಿಕೆ ಎಂಬ ಸರಳ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅದನ್ನು ಮಾಡಲು ನೀವು ನಿಮ್ಮ BSNL ಸಂಖ್ಯೆಯಿಂದ 1925 ನಂಬರ್ಗೆ Start ಎಂಬ ಮೆಸೇಜ್ ಟೈಪ್ ಮಾಡಿ ಕಳುಹಿಸಬಹುದು. ಒಂದೆರಡು ನಿಮಿಷಗಳಲ್ಲಿ ಮೊಬೈಲ್ ಡೇಟಾ ಸೇವೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ಹೇಳುವ ಅಧಿಸೂಚನೆಯನ್ನು ನೀವು ಸ್ವೀಕರಿಸುತ್ತೀರಿ. ಈಗ ಇಂಟರ್ನೆಟ್ ಸೇವೆಗಳನ್ನು ಸಹ ಬಳಸಲು ಸಿದ್ದವಾಗಿರುತ್ತದೆ.