ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ (Reliance Jio) ಕಳೆದ ಹಲವಾರು ವರ್ಷಗಳಿಂದ ತನ್ನ ಕೈಗೆಟುಕುವ ಯೋಜನೆಗಳ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದೆ. ಮೊಬೈಲ್ ಇಂಟರ್ನೆಟ್ ನಂತರ Jio ತನ್ನ ಅತ್ಯುತ್ತಮ ಯೋಜನೆಗಳ ಮೂಲಕ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಕ್ಷೇತ್ರದಲ್ಲಿ ಮಾರುಕಟ್ಟೆ ನಾಯಕನಾಗಿ ಮುಂದುವರೆದಿದೆ. ಇಲ್ಲಿ ರಿಲಯನ್ಸ್ ಜಿಯೋ (Reliance Jio) ಕಂಪನಿಯು 400 ಕ್ಕಿಂತ ಕಡಿಮೆ ಯೋಜನೆಯಲ್ಲಿ ಅನಿಯಮಿತ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೌಲಭ್ಯವನ್ನು ನೀಡುತ್ತಿದೆ. ಇದು Airtel ಅಥವಾ Hathway ನಂತಹ ಇತರ ಪೂರೈಕೆದಾರರಿಗಿಂತ ಕಡಿಮೆಯಾಗಿದೆ.
ಇಂದು ನಾವು ಹೇಳುತ್ತಿರುವ ಜಿಯೋ ಫೈಬರ್‌ನ ಯೋಜನೆಯಾಗಿದ್ದು ಇಲ್ಲಿ ನೀವು ರೂ 399 ರ ಬೇಸಿಕ್ ಪ್ಯಾಕ್ ಹಾಕಿಕೊಂಡರೆ ಇದರಲ್ಲಿ ಕಂಪನಿಯು 30 Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ಒದಗಿಸುತ್ತದೆ. ಯೋಜನೆಯ ಬೆಲೆಗೆ GST ಸೇರಿಸಿದ ನಂತರ ನೀವು ಸುಮಾರು 470 ರೂ ಪಾವತಿ ಮಾಡಬೇಕಾಗುತ್ತೆ ಇಲ್ಲಿ 3300 GB ಯ ಗರಿಷ್ಠ ಡೇಟಾವನ್ನು ಒದಗಿಸುತ್ತದೆ. ಇದರೊಂದಿಗೆ ನೀವು ಲ್ಯಾಂಡ್‌ಲೈನ್ ಸಂಪರ್ಕವನ್ನು ಸಹ ಪಡೆಯುತ್ತೀರಿ ಇದರಲ್ಲಿ ಕರೆ ಮಾಡುವುದು ಸಂಪೂರ್ಣವಾಗಿ ಉಚಿತವಾಗಿದೆ.
ಇಷ್ಟೇ ಅಲ್ಲದೆ OTT ಜಗತ್ತಿನಲ್ಲಿ ಜಿಯೋ ಫೈಬರ್ ತನ್ನ ಮೂಲ ಯೋಜನೆಯೊಂದಿಗೆ ಮನರಂಜನೆಗಾಗಿ ವಿವಿಧ ಯೋಜನೆಗಳನ್ನು ತಂದಿದೆ. Jio ನ ಮೂಲ ರೂ 399 ಯೋಜನೆಯಲ್ಲಿ ಹೆಚ್ಚುವರಿ ರೂ 100 ಸೇರಿಸುವ ಮೂಲಕ ನೀವು 6 ಇತರ ಅಪ್ಲಿಕೇಶನ್‌ಗಳನ್ನು ಆನಂದಿಸಬಹುದು. ಮತ್ತೊಂದೆಡೆ ನೀವು ಹೆಚ್ಚುವರಿ ರೂ 200 ಪಾವತಿಸಿದರೆ ನೀವು 14 ಜನಪ್ರಿಯ ಅಪ್ಲಿಕೇಶನ್‌ಗಳನ್ನು ಆನಂದಿಸಬಹುದು.
ಸದ್ಯ ಮನೆ ಮನೆಗೂ ಜಿಯೋ ಫೈಬರ್ ಬರಲಿದೆ. ಗ್ರಾಮೀಣ ಪ್ರದೇಶಗಲ್ಲಿ ಇದು ಇನ್ನು ಅಲಭ್ಯವಾಗಿದ್ದರೂ ಇನ್ನೆರಡು ವರ್ಷಗಳಲ್ಲಿ ಇಡೀ ಇಂಡಿಯಾವನ್ನೇ ಅವರಿಸಲಿದೆ ಜಿಯೋ ಫೈಬರ್. ಸದ್ಯ ಈಗ ಜಿಯೋ ಫೈಬರ್ ಮೊದಲು ಒಂದು ತಿಂಗಳು ನೀವು ಉಚಿತವಾಗಿ ಕಾಣಬಹುದಾಗಿದೆ. ಸಕತ್ ವೇಗದ ಇಂಟರ್ನೆಟ್ ಇದಾಗಿದ್ದು ಸದ್ಯ ಇಷ್ಟು ವೇಗ ನಿಮಗೆ ಬೇರೆ ಯಾವ ಬ್ರಾಡ್ ಬ್ಯಾಂಡ್ ಗಳಲ್ಲಿಯೂ ಸಿಗಲಿಕ್ಕಿಲ್ಲ.