
ಭಾರತದಲ್ಲಿ JioCinema ಮತ್ತು Disney+ Hotstar ವಿಲೀನಗೊಂಡು JioHotstar ಬಿಡುಗಡೆಯಾಗಿದೆ.
ವೇಗವಾಗಿ ಬೆಳೆಯುತ್ತಿರುವ OTT ಡಿಜಿಟಲ್ ದುನಿಯಾಕ್ಕೆ ಇಂದಿನಿಂದ JioHotstar ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಆರಂಭ.
ಈ ಹೊಸ JioHotstar ಅಡಿಯಲ್ಲಿ ಹೊಸ 4K ಸ್ಟ್ರೀಮಿಂಗ್ ಮತ್ತು AI ಚಾಲಿತ ಫೀಚರ್ಗಳನ್ನು ಹೊಂದಿದೆ.
JioHotstar Launched in India: ಭಾರತದಲ್ಲಿ ಕೊನೆಗೂ ಜಿಯೋ ಸಿನಿಮಾ ಮತ್ತು ಡಿಸ್ನಿ ಹಾಟ್‌ಸ್ಟಾರ್ ಎರಡು ವಿಲೀನಗೊಂಡು ಹೊಸ JioHotstar ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಇದರ ಬಗ್ಗೆ ಸ್ವತಃ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇದದೊಂದಿಗೆ ಹೊಸ ಪ್ಲಾನ್ ಬೆಲೆ ಎಷ್ಟು? ಮತ್ತು ಯಾವ ಪ್ರಯೋಜನಗಳನ್ನು ಲಭ್ಯವಿರುತ್ತದೆ ಮತ್ತು ಈ ಹೊಸ ಅಪ್ಲಿಕೇಶನ್ ಒಳಗೆ ನೀಡಲಾಗಿರುವ ಹೊಸ ಫೀಚರ್ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
JioHotstar ಅಧಿಕೃತವಾಗಿ ಬಿಡುಗಡೆಯಾಗಿದೆ!
ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಅಧಿಕೃತವಾಗಿ ವಿಲೀನಗೊಂಡು ಜಿಯೋಹಾಟ್‌ಸ್ಟಾರ್ ಎಂಬ ಹೊಸ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ರಚಿಸಿವೆ. ಈ ಹೊಸ ಸೇವೆಯನ್ನು 14ನೇ ಫೆಬ್ರವರಿ 2025 ರಂದು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ದಿ ವಾಲ್ಟ್ ಡಿಸ್ನಿ ಕಂಪನಿಯ ಜಂಟಿ ಉದ್ಯಮವಾದ ಜಿಯೋಸ್ಟಾರ್ ಪ್ರಾರಂಭಿಸಿದೆ. ಪ್ರಸ್ತುತ ಈ ಹೊಸ ಬಳಕೆದಾದರೂ ಈಗಾಗಲೆ Disney+ Hotstar ಹೊಂದಿದ್ದರೆ ತನ್ನನ್ ತಾನೇ JioHotstar ಆಗಿ ಮಾರ್ಪಟ್ಟಿರುವುದು ಕಾಣಬಹುದು. ಈ ಹೊಸ JioHotstar ಅಡಿಯಲ್ಲಿ ಹೊಸ 4K ಸ್ಟ್ರೀಮಿಂಗ್ ಮತ್ತು AI ಚಾಲಿತ ಫೀಚರ್ಗಳನ್ನು ಹೊಂದಿದೆ.
When two worlds come together, the extraordinary takes shape. #JioHotstar #InfinitePossibilities pic.twitter.com/1eW3qGUPsG
— JioHotstar (@JioHotstar) February 14, 2025
JioCinema ಮತ್ತು Disney+ Hotstar ಬಳಕೆದಾರಾರಿಗೆ ಮುಂದೇನಾಗುತ್ತೆ?
ಪ್ರಸ್ತುತ ಈಗಾಗಲೇ JioCinema ಮತ್ತು Disney+ Hotstar ಅಪ್ಲಿಕೇಶನ್ ಬಳಸುತ್ತಿರುವ ಬಳಕೆದಾರರ ಪ್ರಶ್ನೆ ಅಂದರೆ ಮುಂದೇನಾಗುತ್ತೆ ಅನ್ನೋದು. ಆದರೆ ವರದಿಗಳ ಪ್ರಕಾರ ಈ ಎರಡು ಅಪ್ಲಿಕೇಶನ್ ಸಮಯ ಕಳೆದಂತೆ ಬಂದ್ ಆಗುವ ಸಾಧ್ಯತೆಗಳಿವೆ. ಈ ಜಿಯೋ ಹಾಟ್‌ಸ್ಟಾರ್ ಹೊಸ ಚಂದಾದಾರಿಕೆ ಮಾದರಿಯನ್ನು ಪರಿಚಯಿಸಿದೆ. ಅಸ್ತಿತ್ವದಲ್ಲಿರುವ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರು ಯಾವುದೇ ಬದಲಾವಣೆಗಳಿಲ್ಲದೆ ತಮ್ಮ ಪ್ರಸ್ತುತ ಯೋಜನೆಗಳೊಂದಿಗೆ ಮುಂದುವರಿಯುತ್ತಾರೆ. ಈ ಯೋಜನೆಗಳ ಬೆಲೆ ಮೊಬೈಲ್‌ಗೆ ರೂ 149, ಸೂಪರ್ ಪ್ಲಾನ್‌ಗೆ ರೂ 299 ಮತ್ತು ಪ್ರೀಮಿಯಂ (ಜಾಹೀರಾತು-ಮುಕ್ತ) ಪ್ಲಾನ್‌ಗೆ ರೂ 349 ಆಗಿದ್ದು, ಮೂರು ತಿಂಗಳವರೆಗೆ ಲಭ್ಯವಿದೆ.
Also Read: Vodafone idea 5G: ಕೊನೆಗೂ ಬಂದೆ ಬಿಡ್ತು ವೊಡಾಫೋನ್ ಐಡಿಯಾದ 5G! ಮುಂದಿನ ತಿಂಗಳಿಂದ ಈ ನಗರಗಳಲ್ಲಿ ಲಭ್ಯ!
ವೀಕ್ಷಣೆಯ ಅನುಭವವನ್ನು ಸುಧಾರಿಸಲು ಜಿಯೋಹಾಟ್‌ಸ್ಟಾರ್ ಹಲವಾರು ಸುಧಾರಿತ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇವುಗಳಲ್ಲಿ 4K ಸ್ಟ್ರೀಮಿಂಗ್, AI-ಚಾಲಿತ ಒಳನೋಟಗಳು, ನೈಜ-ಸಮಯದ ಅಂಕಿಅಂಶಗಳ ಓವರ್‌ಲೇಗಳು, ಬಹು-ಕೋನ ವೀಕ್ಷಣೆ ಮತ್ತು ವಿಶೇಷ ಆಸಕ್ತಿಯ ಫೀಡ್‌ಗಳು ಸೇರಿವೆ. ಭಾರತದ ಉನ್ನತ ಡಿಜಿಟಲ್ ವಿಷಯ ರಚನೆಕಾರರನ್ನು ಉತ್ತೇಜಿಸಲು ವೇದಿಕೆಯು “ಸ್ಪಾರ್ಕ್ಸ್” ಎಂಬ ಉಪಕ್ರಮವನ್ನು ಸಹ ಪ್ರಾರಂಭಿಸಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile