Jio ಗ್ರಾಹಕರೇ ಒಮ್ಮೆ ಈ ರಿಚಾರ್ಜ್ ಮಾಡ್ಕೊಂಡ್ರೆ! ದಿನಕ್ಕೆ 1 ಚಹಾಕ್ಕಿಂತ ಕಡಿಮೆ ಖರ್ಚಿನಲ್ಲಿ ಭಾರಿ ಪ್ರಯೋಜನ!

Jio ಗ್ರಾಹಕರೇ ಒಮ್ಮೆ ಈ ರಿಚಾರ್ಜ್ ಮಾಡ್ಕೊಂಡ್ರೆ! ದಿನಕ್ಕೆ 1 ಚಹಾಕ್ಕಿಂತ ಕಡಿಮೆ ಖರ್ಚಿನಲ್ಲಿ ಭಾರಿ ಪ್ರಯೋಜನ!
HIGHLIGHTS

ಭಾರತದ ಜನಪ್ರಿಯ ಟೆಲಿಕಾಂ ಕಂಪನಿಗಳಾದ Jio, Airtel, Vi ಮತ್ತು BSNL ಒಂದಕ್ಕೊಂದರ ನಡುವೆ ಸದಾ ಸ್ಪರ್ಧೆ ನಡೆಯುತ್ತಲೇ ಇರುತ್ತದೆ

ಎಲ್ಲ ಕಂಪನಿಗಳು ತಮ್ಮ ತಮ್ಮ ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡಲು ಸಿದ್ಧವಾಗಿರುತ್ತವೆ.

Jio ಅತಿ ಕಡಿಮೆ ಬೆಲೆಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಏಕೈಕ ಟೆಲಿಕಾಂ ಕಂಪೆನಿಯಾಗಿದ್ದು ಇದರ ವಾರ್ಷಿಕ ಯೋಜನೆಗಳಲ್ಲಿ ನಿಮಗೆ ಹೆಚ್ಚು ಪ್ರಯೋಜನಗಳು ನೀಡುತ್ತದೆ

Jio Annual Plan: ಭಾರತದ ಜನಪ್ರಿಯ ಟೆಲಿಕಾಂ ಕಂಪನಿಗಳಾದ Jio, Airtel, Vi ಮತ್ತು BSNL ಒಂದಕ್ಕೊಂದರ ನಡುವೆ ಸದಾ ಸ್ಪರ್ಧೆ ನಡೆಯುತ್ತಲೇ ಇರುತ್ತದೆ. ಏಕೆಂದರೆ ಈ ಎಲ್ಲ ಕಂಪನಿಗಳು ತಮ್ಮ ತಮ್ಮ ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡಲು ಸಿದ್ಧವಾಗಿರುತ್ತವೆ. ಈ ಲೇಖನದಲ್ಲಿ ನಾವು ಮುಖ್ಯವಾಗಿ ರಿಲಯನ್ಸ್ ಜಿಯೋ ಬಗ್ಗೆ ಮಾತನಾಡುವುದಾದರೆ ನಿಮಗೆಲ್ಲ ತಿಳಿದಿರುವಂತೆ ಅತಿ ಕಡಿಮೆ ಬೆಲೆಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಏಕೈಕ ಟೆಲಿಕಾಂ ಕಂಪೆನಿಯಾಗಿದ್ದು ಇದರ ವಾರ್ಷಿಕ ಯೋಜನೆಗಳಲ್ಲಿ ನಿಮಗೆ ಹೆಚ್ಚು ಪ್ರಯೋಜನಗಳು ನೀಡುತ್ತದೆ. ಅಂತಹ ಒಂದು ಯೋಜನೆಯ ಬಗ್ಗೆ ಮಾತನಾಡುವುದಾದರೆ ಅದು 2545 ರೂಗಳ ಪ್ರಿಪೇಯ್ಡ್ ಪ್ಲಾನ್ ಆಗಿದೆ.

ರಿಲಯನ್ಸ್ ಜಿಯೋವಿನ ರೂ 2545 ಯೋಜನೆ:

ಜಿಯೋವಿನ ಈ ಯೋಜನೆಯ ಬೆಲೆ ಈಗಾಗಲೇ ಹೇಳಿರುವಂತೆ ಒಮ್ಮೆ ನೀವು 2,545 ರೂಗಳನ್ನು ನೀಡಿ ರಿಚಾರ್ಜ್ ಮಾಡಿಸಬೇಕಾಗುತ್ತದೆ. ಇದರ ನಂತರ ಈ ಯೋಜನೆ ನಿಮಗೆ 336 ದಿನಗಳ ವ್ಯಾಲಿಡಿಟಿಯ ಮಾನ್ಯತೆಯನ್ನು ಹೊಂದಿರುತ್ತದೆ. ಅಲ್ಲದೆ ನಿಮಗೆ ಈ ಪ್ಲಾನ್ 504GB ಡೇಟಾವನ್ನು ಪೂರ್ತಿ 5G ಸ್ಪೀಡ್ ಜೊತೆಗೆ ನೀಡುತ್ತದೆ. ಕ್ರಮವಾಗಿ ಇದರ ದಿನದ ಸ್ಪೀಡ್ ಮುಗಿದ ನಂತರ 64Kbps ಸ್ಪೀಡ್ ಅಲ್ಲಿ ಅನ್ಲಿಮಿಟೆಡ್ ಡೇಟದೊಂದಿಗೆ  ಬಳಸಬಹುದು. ಇದರ ಮತ್ತೊಂದು ವಿಶೇಷತೆ ಅಂದ್ರೆ ಈ ಪ್ಲಾನ್ 5G ಅನ್ಲಿಮಿಟೆಡ್ ಡೇಟದೊಂದಿಗೆ ಬರುತ್ತದೆ. ಇದರೊಂದಿಗೆ ಅತಿ ಮುಖ್ಯವಾಗಿ ನಿಮಗೆ ಅನಿಯಮಿತ ವಾಯ್ಸ್ ಕರೆಗಳನ್ನು ಸಹ ಆ ಪ್ಲಾನ್ ನೀಡುತ್ತದೆ. ಹೆಚ್ಚುವರಿಯಾಗಿ ಪ್ರತಿದಿನ 100 ಉಚಿತ SMS ಜೊತೆಗೆ JioTV, JioCinema, JioSecurity ಮತ್ತು JioCloudಅಪ್ಲಿಕೇಶನ್ಗಳಿಗೆ ಉಚಿತ ಎಂಟ್ರಿ ಪಡೆಯಬಹುದು.

ಈ ವಾರ್ಷಿಕ ಯೋಜನೆಯಲ್ಲಿ ದಿನದ ಖರ್ಚು ಎಷ್ಟು?

ನೀವು ಜಿಯೋ ಬಳಕೆದಾರರಾಗಿದ್ದಾರೆ ಈ ಲೇಖನದ ಅತಿ ಮುಖ್ಯವಾದ ಅಂಶವೆಂದರೆ ನಿಮಗೆ ಪ್ರತಿದಿನ ಬೀಳುವ ಖರ್ಚು ಎಷ್ಟು ಎನ್ನುವುದು ಇದರ ಮಾಹಿತಿ ಮುಂದಿದೆ. ನೀವು ಒಟ್ಟಿಗೆ 2,545 ರೂಗಳ ಜಿಯೋ ಪ್ರಿಪೇಯ್ಡ್ ಪ್ಲಾನ್ ಅನ್ನು ರಿಚಾರ್ಜ್ ಮಾಡಿಕೊಂಡರೆ ಪೂರ್ತಿ 336 ದಿನಗಳಿಗೆ ಈ ಪ್ಲಾನ್ ರಿಚಾರ್ಜ್ ಮಾಡಿಕೊಂಡರೆ ಪ್ರತಿದಿನಕ್ಕೆ ಸುಮಾರು 7.5 ರೂಗಳಷ್ಟು ಮಾತ್ರ ಬೀಳಲಿದೆ. ಇದರ ಮತ್ತೊಂದು ವಿಶೇಷತೆ ಅಂದ್ರೆ ಒಮ್ಮೆ ರಿಚಾರ್ಜ್ ಮಾಡಿ ವಾರ್ಷಿಕವಾಗಿ ನೀವು ರಿಚಾರ್ಜ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿರೋದಿಲ್ಲ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo