ಈಗ BSNL ಸಹ 4G ಸೇವೆಗಳನ್ನು ಪ್ರಾರಂಭಿಸಲಿದೆ. 4 ವರ್ಷಗಳ ಹಿಂದೆ ದೇಶದಲ್ಲಿ 4G ಸೇವೆಯನ್ನು ಪ್ರಾರಂಭಿಸಲಾಯಿತು. ದೇಶದ ಎಲ್ಲಾ ಖಾಸಗಿ ಕಂಪನಿಗಳು ಪ್ರಸ್ತುತ 4G ಸೇವೆಗಳನ್ನು ಒದಗಿಸುತ್ತಿವೆ. ಆದರೆ BSNL ಪ್ರಸ್ತುತ ಕೆಲವು ವಲಯಗಳಲ್ಲಿ 4G ಸೇವೆಯನ್ನು ಒದಗಿಸುತ್ತಿದೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ನ 4G ಸೇವೆಗಳನ್ನು ಈ ವಲಯಗಳಲ್ಲಿ ಪರೀಕ್ಷೆಯಾಗಿ ಪ್ರಾರಂಭಿಸಲಾಗಿದೆ.
ಇದಕ್ಕಾಗಿ BSNL ನೋಕಿಯಾ ಜೊತೆ ಒಪ್ಪಂದ ಮಾಡಿಕೊಂಡಿದೆ. ನೋಕಿಯಾ ಮತ್ತು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ರಾಷ್ಟ್ರದ 10 ವಲಯಗಳಲ್ಲಿ 4G ಪರೀಕ್ಷೆಗಳನ್ನು ಜಂಟಿಯಾಗಿ ನಡೆಸುತ್ತದೆ. ಕಳೆದ ತಿಂಗಳು ಗುಜರಾತ್ನಲ್ಲಿ BSNL ತನ್ನ 4G ಸೇವೆಯನ್ನು ಪರೀಕ್ಷಿಸಲು ಪ್ರಾರಂಭಿಸಿತು. ಮುಂಬರುವ ಸಮಯದಲ್ಲಿ ಕಂಪೆನಿಯು ದೇಶದ ಇತರ 19 ಟೆಲಿಕಾಂ ವಲಯಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಬಹುದು.
BSNL ಮೊದಲು ಈ ಹತ್ತು ರಾಜ್ಯಗಳಲ್ಲಿ ಶುರು ಮಾಡಲಿದೆ ಅದರಲ್ಲಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಢ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ BSNL ತನ್ನ 4G ಸೇವೆಯನ್ನು ಪ್ರಾರಂಭಿಸಲಿದೆ. ಈ ರಾಜ್ಯಗಳಲ್ಲಿ ಮೊದಲು 2100Mhz ಸ್ಪೆಕ್ಟ್ರಮ್ ಬ್ಯಾಂಡ್ ಮೂಲಕ BSNLಈ 4G ಸೇವೆಯನ್ನು ಪ್ರಾರಂಭಿಸಬಹುದು.
ಅಂದ್ರೆ ಇದರ ಈ 2100Mhz ಬ್ಯಾಂಡ್ನಲ್ಲಿ 4G ಸೇವೆ ಪ್ರಾರಂಭಿಸಲು BSNL ಗ್ರೀನ್ ಸಿಗ್ನಲ್ ಪಡೆದಿದೆ. ಕಂಪನಿ ಪ್ರಸ್ತುತ 3G ಸೇವೆಗಾಗಿ ಈ ಬ್ಯಾಂಡ್ ಅನ್ನು ಬಳಸುತ್ತಿದೆ. ಇದು ಇನ್ನೂ 4G ಸ್ಪೆಕ್ಟ್ರಂಗೆ ಅಪ್ಗ್ರೇಡ್ ಮಾಡಿಲ್ಲ. ಕಂಪೆನಿಯು 4G ಸೇವೆಗಾಗಿ ಈ ಸ್ಪೆಕ್ಟ್ರಮ್ ಅನ್ನು ಬಳಸುವಂತೆ 3G ಸೇವೆಯನ್ನು ಸ್ಥಗಿತಗೊಳಿಸಲಾಗುವುದು.