ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಭಾರತದ ವೈರ್‌ಲೈನ್ ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ವೈರ್‌ಲೈನ್ ವಿಭಾಗದಲ್ಲಿ ಜಿಯೋ ನಂತರ ರಾಜ್ಯ-ಚಾಲಿತ ಟೆಲ್ಕೊ ಎರಡನೇ ಸ್ಥಾನದಲ್ಲಿದೆ. BSNL ಸೂಪರ್ ಸ್ಟಾರ್ ಪ್ರೀಮಿಯಂ ಪ್ಲಸ್‌ನೊಂದಿಗೆ 150 Mbps ಸ್ಪೀಡ್ ಮತ್ತು OTT ಪ್ರಯೋಜನಗಳೊಂದಿಗೆ ಬರಲಿದೆ. ಮಾರುಕಟ್ಟೆಗೆ DSL ಸಂಪರ್ಕಗಳನ್ನು ವರ್ಷಗಳಿಂದ ಒದಗಿಸಿದ ನಂತರ BSNL ಭಾರತ್ ಫೈಬರ್ ಹೆಸರಿನಲ್ಲಿ ಭಾರತದ ವಿವಿಧ ಪ್ರದೇಶಗಳಲ್ ಗ್ರಾಹಕರಿಗೆ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸಲು ಪ್ರಾರಂಭಿಸಿತು. ಕಂಪನಿಯ ಯೋಜನೆಗಳಲ್ಲಿ ಒಂದಾದ BSNL ಸೂಪರ್ ಸ್ಟಾರ್ ಪ್ರೀಮಿಯಂ ಪ್ಲಸ್ ಪ್ರಸ್ತುತ ಗ್ರಾಹಕರಿಗೆ ಉತ್ತಮವಾದ ರಿಯಾಯಿತಿಯನ್ನು ನೀಡುತ್ತಿದೆ.
BSNL ಸೂಪರ್ ಸ್ಟಾರ್ ಪ್ರೀಮಿಯಂ ಪ್ಲಸ್ ಯೋಜನೆಯು ತಿಂಗಳಿಗೆ ರೂ 999 ಬೆಲೆಯ ಖರೀದಿಯಲ್ಲಿ ಯಾವುದೇ ತೆರಿಗೆಗಳನ್ನು ಸೇರಿಸಲಾಗಿಲ್ಲ. ಈ ಯೋಜನೆಯ ಬಳಕೆದಾರರು 150 Mbps ಸ್ಪೀಡ್ ನಲ್ಲಿ 2000GB ಡೇಟಾವನ್ನು ಪಡೆಯುತ್ತಾರೆ. 2000GB ಅಥವಾ 2TB ಡೇಟಾವನ್ನು ಬಳಸಿದ ನಂತರ ಸ್ಪೀಡ್ 10 Mbps ಗೆ ಕಡಿಮೆಯಾಗುತ್ತದೆ. ಹೆಚ್ಚುವರಿಯಾಗಿ ಗ್ರಾಹಕರು ವೈರ್‌ಲೈನ್ ಸಂಪರ್ಕದೊಂದಿಗೆ ಅನ್ ಲಿಮಿಟೆಡ್ ವಾಯ್ಸ್ ಕರೆಯನ್ನು ಪಡೆಯುತ್ತಾರೆ. ಆದರೆ ಈ ಡಿವೈಸ್ ಅನ್ನು ಗ್ರಾಹಕರು ಪ್ರತ್ಯೇಕವಾಗಿ ಖರೀದಿಸಬೇಕು. ಈ ಪ್ಲಾನ್ ನೊಂದಿಗೆ ಉಚಿತ Wi-Fi ರೂಟರ್ ಬರುತ್ತದೆ. ಮತ್ತು ಗ್ರಾಹಕರು OTT(ಓವರ್-ದಿ-ಟಾಪ್) ಪ್ರಯೋಜನಗಳನ್ನು ಸಹ ಪಡೆಯುತ್ತಾರೆ. ಬಳಕೆದಾರರು ದೀರ್ಘಾವಧಿಯ ಯೋಜನೆ ಅಂದರೆ ಹೆಚ್ಚಿನ ಪಾವತಿಯ ಆಯ್ಕೆಯನ್ನು ಆರಿಸಿದವರಿಗೆ ಕಂಪನಿಯಿಂದ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.
ಇನ್ನೂ ಉತ್ತಮವಾದ ವಿಷಯವೆಂದರೆ ಈ ಯೋಜನೆಯೊಂದಿಗೆ ನೀವು ಭಾರತ್ ಫೈಬರ್ ಸಂಪರ್ಕವನ್ನು ಖರೀದಿಸಿದಾಗ BSNL ಯಾವುದೇ ಇನ್ಸ್ಟಾಲೇಷನ್ ಶುಲ್ಕವನ್ನು ವಿಧಿಸುವುದಿಲ್ಲ. ನೀವು ಸ್ವಲ್ಪ ದೊಡ್ಡ ಮನೆಯನ್ನು ಹೊಂದಿದ್ದರೆ ಅಥವಾ ಸಣ್ಣ ಕಚೇರಿಗಾಗಿ ಈ ಸಂಪರ್ಕವನ್ನು ಖರೀದಿಸುತ್ತಿದ್ದರೆ ಈ ಪ್ಯಾಕೇಜ್ ಅನ್ನು ಆಯ್ಕೆ ಮಾಡಬಹುದು. ಈ ಯೋಜನೆಯೊಂದಿಗೆ Disney+ Hotstar, Lionsgate, ShemarooMe, Hungama, SonyLIV, ZEE5, Voot, ಮತ್ತು YuppTV ನಂತಹ OTT ಪ್ರಯೋಜನಗಳನ್ನು ಸೇರಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ 150 Mbps ಯೋಜನೆಗಳಲ್ಲಿ ಇದು ಒಂದಾಗಿದೆ. ನೀವು ಉಚಿತ ರೂಟರ್, ಅತ್ಯುತ್ತಮ ಸ್ಪೀಡ್, ಉತ್ತಮ ಪ್ರಮಾಣದ ಡೇಟಾ, ಉಚಿತ ಇನ್ಸ್ಟಾಲೇಷನ್ ಮತ್ತು OTT ಪ್ರಯೋಜನಗಳನ್ನು ಇದರಲ್ಲಿ ಪಡೆಯುತ್ತಿರಿ.