ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಟೆಲಿಕಾಂ ಕಂಪನಿ ತಮ್ಮ ಬಳಕೆದರಾರಿಗೆ ಸದ್ದಿಲ್ಲದೇ 2 ಹೊಸ ಡೇಟಾ ವೋಚರ್ ರಿಚಾರ್ಜ್ ಯೋಜನೆಗಳನ್ನು ಕೇವಲ 100 ರೂಗಳೊಳಗೆ ಪರಿಚಯಿಸಿದೆ. ಹಾಗಾದ್ರೆ ಯಾವುದಪ್ಪಾ ಹೊಸ ಪ್ಲಾನ್ ಮತ್ತು ಪ್ರಯೋಜನಗಳೇನು ಎನ್ನುವ ನಿಮ್ಮ ಪ್ರಶ್ನೆಗೆ ಮಾಹಿತಿ ಈ ಕೆಳಗೆ ಪಟ್ಟಿ ಮಾಡಲಾಗಿದೆ. BSNL ಹೊಸದಾಗಿ ಕೇವಲ 58 ಮತ್ತು 59 ರೂಗಳ ಎರಡು ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ಆದರೆ ಕೇವಲ 1 ರೂಪಾಯಿಯ ವ್ಯತ್ಯಾಸದೊಂದಿಗೆ ಬರುವ ಈ BSNL ಪ್ರೀಪೈಡ್ ಯೋಜನೆಗಳ ಮಾನ್ಯತೆ ಮತ್ತು ಪ್ರಯೋಜನಗಳೇನು ಲ್ಲಿ ಏನೇನು ಸಿಗುತ್ತೆ ಎಂದು ನೋಡುವುದುದಾದರೆ ಇದಕ್ಕೆ ಸಂಭದಿಸಿದ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
ಮೊದಲಿಗೆ ಈ 58 ರೂಗಳ ಡೇಟಾ ವೋಚರ್ ಯೋಜನೆಯ ಪ್ರಯೋಜನಗಳ ಬಗ್ಗೆ ನೋಡುವುದಾದರೆ BSNL ಪರಿಚಯಿಸಿರುವ ಈ ರೂ 58 ಪ್ರಿಪೇಯ್ಡ್ ಯೋಜನೆಯು ಡೇಟಾ ವೋಚರ್ ಆಗಿದೆ ಮತ್ತು ಇದರ ಪ್ರಯೋಜನಗಳನ್ನು ಬಳಸಿಕೊಳ್ಳಲು ಬಳಕೆದಾರರು ಸಕ್ರಿಯ ಯೋಜನೆಯನ್ನು ಇರಿಸಿಕೊಳ್ಳುವ ಅಗತ್ಯವಿದೆ. ಈ ರೂ 58 ಯೋಜನೆಯು ಕೇವಲ 7 ದಿನಗಳ ಮಾನ್ಯತೆ ಮತ್ತು 2GB ದೈನಂದಿನ ಡೇಟಾದೊಂದಿಗೆ ಬರುತ್ತದೆ. FUP (ನ್ಯಾಯಯುತ ಬಳಕೆಯ ನೀತಿ) ಡೇಟಾ ಬಳಕೆಯ ನಂತರ ವೇಗವು 40 Kbps ಗೆ ಇಳಿಯುತ್ತದೆ.
ಎರಡನೇಯದಾಗಿ ಈ 59 ರೂಗಳ ಡೇಟಾ ವೋಚರ್ ಯೋಜನೆಯ ಬಗ್ಗೆ ಮಾಹಿತಿ ನೋಡುವುದಾದರೆ ಈ ರಿಚಾರ್ಜ್ ಯೋಜನೆ ಸಹ ಇದೆ ಮಾದರಿಯಲ್ಲಿ BSNL ರೂ 59 ಪ್ರಿಪೇಯ್ಡ್ ಯೋಜನೆಯು 7 ದಿನಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯು 1GB ದೈನಂದಿನ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳೊಂದಿಗೆ ಬರುತ್ತದೆ. ಈ ಯೋಜನೆಯೊಂದಿಗೆ ಯಾವುದೇ SMS ಪ್ರಯೋಜನಗಳಿಲ್ಲ. ಈ ಯೋಜನೆಯನ್ನು ಬಳಸುವ ದೈನಂದಿನ ವೆಚ್ಚವು ರೂ 8.43 ಆಗಿದೆ. ಇದು ಸಾಕಷ್ಟು ಹೆಚ್ಚು ನೀವು ದೀರ್ಘಾವಧಿಯ ಸೇವಾ ಮಾನ್ಯತೆಗಾಗಿ ಹಣವನ್ನು ಖರ್ಚು ಮಾಡಬಹುದಾದರೆ ಖಾಸಗಿ ಟೆಲಿಕಾಂ ಆಪರೇಟರ್‌ಗಳಿಂದ ಉತ್ತಮ ಮೌಲ್ಯದ ಯೋಜನೆಗಳನ್ನು ಪಡೆಯಬಹುದು.
Also Read: 5G Smartphones: ಇವೆ ನೋಡಿ ಕೇವಲ ₹10,000 ರೂಗಳಿಗೆ ಬರುವ ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳು!
ಈಗ ನಿಮಗೆ ಇವುಗಳ ನಡುವಿನ ವ್ಯತ್ಯಾಸ ಈಗಾಗಲೇ ತಿಳಿದುಬಂದಿರಬಹುದು. ಆದರೆ ಒಮ್ಮೆ ನೇರವಾಗಿ ತಿಳಿಸುವುದಾದರೆ BSNL ರೂ. 58 ಯೋಜನೆ ಕೇವಲ ಡೇಟಾವನ್ನು ಮಾತ್ರ ನೀಡುತ್ತದೆ. ಇದನ್ನು ನೀವು 7 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2GB ಡೇಟಾವನ್ನು ಇದರಲ್ಲಿ ಪಡೆದು ಬಳಸಬಹುದು. ದಿನದ ಕೋಟಾ ಖಾಲಿಯಾದರೆ ಉಚಿತವಾಗಿ 40Kbps ವೇಗದಲ್ಲಿ ಬಳಸಬಹುದು. ಇದರ ಕ್ರಮವಾಗಿ BSNL ರೂ. 58 ಯೋಜನೆಯಲ್ಲಿ ನಿಮಗೆ ಡೇಟಾ ಮತ್ತು ಅನ್ಲಿಮಿಟೆಡ್ ವಾಯ್ಸ್ ಕರೆ ಎರಡು ಲಭ್ಯವಿದ್ದು ಪ್ರತಿದಿನ 1GB ಡೇಟಾವನ್ನು ಪಡೆಯಬಹುದು.