BSNL ನ ಈ ಒಂದು ಯೋಜನೆಯಲ್ಲಿ ಜಿಯೋ ಮತ್ತು ಏರ್‌ಟೆಲ್‌ಗಿಂತ ಹೆಚ್ಚಿನ ಪ್ರಯೋಜನ
BSNL ನ ಈ ಯೋಜನೆಯಿಂದ ಜಿಯೋ ಮತ್ತು ಏರ್‌ಟೆಲ್‌ಗೆ ಟೆನ್ಷನ್ ಹೆಚ್ಚಾಗಿದೆ
BSNL ನ ರೂ 87 ಯೋಜನೆಯ ಪ್ರಯೋಜನಗಳೇನು?
BSNL ನ ಈ ಒಂದು ಯೋಜನೆಯಲ್ಲಿ ಜಿಯೋ ಮತ್ತು ಏರ್‌ಟೆಲ್‌ಗಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಆದರಿಂದ ಜಿಯೋ ಮತ್ತು ಏರ್‌ಟೆಲ್‌ಗೆ ಈ ಯೋಜನೆಯ ಬಗ್ಗೆ ಟೆನ್ಷನ್ ಹೆಚ್ಚಾಗಿದೆ. ಏರ್‌ಟೆಲ್‌ನ ಮೂಲ ಯೋಜನೆಯ ವೆಚ್ಚವು ರೂ 155 ಕ್ಕೆ ಏರಿದೆ. ಆದರೆ BSNL ಕೇವಲ ರೂ 87 ಕ್ಕೆ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತದೆ. Jio ದ ಯೋಜನೆ ಬೆಲೆ ರೂ 119 ಕ್ಕೆ ಬರುತ್ತದೆ. ಆದರೆ ಇದು BSNL ಗಿಂತ 32 ರೂ ಹೆಚ್ಚು ದುಬಾರಿಯಾಗಿದೆ.
BSNL ನ ರೂ 87 ಯೋಜನೆ
BSNL ನ ರೂ 87 ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 14 ದಿನಗಳ ವ್ಯಾಲಿಡಿಟಿ ಯನ್ನು ನೀಡಲಾಗುತ್ತದೆ. ಇದಲ್ಲದೆ ಈ ಯೋಜನೆಯು ಪ್ರತಿದಿನ 1 GB ಡೇಟಾವನ್ನು ಒಳಗೊಂಡಿರುತ್ತದೆ. ಈ ರೀತಿಯಲ್ಲಿ ಗ್ರಾಹಕರು ಒಟ್ಟು 14 GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ ಅನ್ ಲಿಮಿಟೆಡ್ ಕರೆ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ. ಹೆಚ್ಚುವರಿಯಾಗಿ ಗೇಮಿಂಗ್ ಪ್ರಯೋಜನಗಳನ್ನು ನೀಡಲಾಗುತ್ತದೆ. ಆದರೆ ಈ ಯೋಜನೆಯಲ್ಲಿ SMS ಪ್ರಯೋಜನಗಳು ಲಭ್ಯವಿರುವುದಿಲ್ಲ.
BSNL ನ ರೂ 97 ಯೋಜನೆ
ನೀವು ಪ್ರತಿದಿನ ಹೆಚ್ಚಿನ ಡೇಟಾವನ್ನು ಬಯಸಿದರೆ 15 ದಿನಗಳ ವ್ಯಾಲಿಡಿಟಿಯೊಂದಿಗೆ BSNL ರೂ 97 ಯೋಜನೆಯು ನಿಮಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಯೋಜನೆಯಲ್ಲಿ ಯಾವುದೇ SMS ಪ್ರಯೋಜನಗಳು ಇರುವುದಿಲ್ಲ. ಈ ಯೋಜನೆಯು ಪ್ರತಿ ದಿನ 2 GB ಡೇಟಾವನ್ನು ಒಳಗೊಂಡಿರುತ್ತದೆ. ಇದರಲ್ಲಿ ಒಟ್ಟು 30GB ಡೇಟಾ ಲಭ್ಯವಿದೆ. ಇದರೊಂದಿಗೆ ಇನ್ನೂ ಅನೇಕ ರೀತಿಯ ಪ್ರಯೋಜನಗಳನ್ನು ಒದಗಿಸಲಾಗಿದೆ. ಆದರೆ ಈ ಯೋಜನೆಯಲ್ಲಿ ಯಾವುದೇ ಮೆಸೇಜ್ ಮಾಡುವ ಸೌಲಭ್ಯ ಲಭ್ಯವಿರುವುದಿಲ್ಲ.
BSNL ರೂ 99 ಯೋಜನೆ
ನೀವು ಆಡಿಯೋ ಕರೆಗಳನ್ನು ಮಾಡಲು ಬಯಸಿದರೆ ನಿಮಗೆ ಉತ್ತಮ ಆಯ್ಕೆ BSNL ನ ರೂ 99 ಯೋಜನೆ ಆಗಿರುತ್ತದೆ. ಈ ಯೋಜನೆಯ ವ್ಯಾಲಿಡಿಟಿ ಒಟ್ಟು 18 ದಿನಗಳವರೆಗೆ ಇರುತ್ತದೆ. ಅದರೆ ಈ ಯೋಜನೆಯು ಯಾವುದೇ ಡೇಟಾ ಅಥವಾ ಮೆಸೇಜ್ ಮಾಡುವ ಸೌಲಭ್ಯವನ್ನ ಒಳಗೊಂಡಿಲ್ಲ.
Jio ರೂ 119 ಯೋಜನೆ
ಈ ಯೋಜನೆ ಪ್ರತಿದಿನ 1.5 GB ಡೇಟಾವನ್ನು 14 ದಿನಗಳವರೆಗೆ 119 ರೂಗಳಿಗೆ ಒದಗಿಸುತ್ತದೆ. ಆದ್ದರಿಂದ ನೀವು ಈ ಯೋಜನೆಯಲ್ಲಿ ಒಟ್ಟು 21 GB ಡೇಟಾವನ್ನು ಪಡೆಯಬಹುದು. ಇದಲ್ಲದೆ 300SMS ಮತ್ತು ಅನ್ ಲಿಮಿಟೆಡ್ ಕರೆ ಸೌಲಭ್ಯಗಳನ್ನು ನೀಡಲಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile