ಈ ಮೊದಲು ಈ ಪ್ಲಾನ್ಗಳನ್ನು ಪೂರ್ತಿ 365 ದಿನಗಳ ಮಾನ್ಯತೆಯೊಂದಿಗೆ ಪ್ರಾರಂಭಿಸಲಾಗಿತ್ತು ಆದರೆ ಈಗ ಬದಲಾಗಿದೆ
ಈಗ ದೇಶದಲ್ಲಿನ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಇತ್ತೀಚೆಗೆ ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ವರ್ಕ್ ಫ್ರಮ್ ಹೋಮ್ ಯೋಜನೆಯನ್ನು ಪರಿಚಯಿಸಿತ್ತು. ಇದರಿಂದಾಗಿ ಕೊರೊನಾವೈರಸ್ COVID 19 ನಿಂದ ಉಂಟಾಗುವ ಲಾಕ್‌ಡೌನ್‌ನಲ್ಲಿ ಬಳಕೆದಾರರು ಆಫೀಸ್ಗಳಲ್ಲಿ ಕುಳಿತು ಕೆಲಸ ಮಾಡಲಾಗದೆ ಮನೆಯಿಂದಲೇ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಆದರೆ BSNL ಈ ಸೇವೆಗಳು ಬಳಕೆದಾರರಿಗೆ ಸಾಕಷ್ಟು ಪರಿಹಾರವನ್ನು ನೀಡಲಿದೆ. ಅದೇ ಸಮಯದಲ್ಲಿ ಬಿಎಸ್ಎನ್ಎಲ್ ಬಳಕೆದಾರರಿಗೆ ಕಹಿ ಸುದ್ದಿ ಯನ್ನು ಸಹ ನೀಡಿದೆ. ಕಂಪನಿಯು ತನ್ನ ಜನಪ್ರಿಯ 1,699 ರೂಗಳ ಯೋಜನೆಯ ವ್ಯಾಲಿಡಿಟಿಯನ್ನು ಕಡಿಮೆ ಮಾಡಿದೆ.
ಇದು ಮಾತ್ರವಲ್ಲ ಇತರ ಕೆಲವು ಯೋಜನೆಯಲ್ಲಿ ಭಾರಿ ಬದಲಾವಣೆ ನೀಡಿದ್ದು ಬಳಕೆದಾರರನ್ನು ಸ್ವಲ್ಪ ನಿರಾಶೆಗೊಳಿಸುತ್ತದೆ. ಈ ಯೋಜನೆಗಳಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ತಿಳಿದುಯುವುದಾದರೆ ಬಿಎಸ್‌ಎನ್‌ಎಲ್‌ನ ವಾರ್ಷಿಕ 1,699 ರೂಗಳ ಮಾನ್ಯತೆಯನ್ನು 300 ದಿನಗಳಿಗೆ ಇಳಿಸಲಾಗಿದೆ. ಈ ಯೋಜನೆಯನ್ನು 365 ದಿನಗಳ ಮಾನ್ಯತೆಯೊಂದಿಗೆ ಪ್ರಾರಂಭಿಸಲಾಗಿತ್ತು ಆದರೆ ಕಂಪನಿ ಮಾನ್ಯತೆಯನ್ನು ಮಾತ್ರ ಕಡಿಮೆಗೊಳಿಸಿದ್ದು ಈ ಯೋಜನೆಯೊಂದಿಗೆ ಲಭ್ಯವಿರುವ ಎಲ್ಲಾ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.
ಈ ಯೋಜನೆಯಡಿಯಲ್ಲಿ ಬಳಕೆದಾರರು 100 SMS ಉಚಿತ ಮತ್ತು 2GB ದೈನಂದಿನ ಡೇಟಾವನ್ನು ಪಡೆಯಬಹುದು. ಇದನ್ನು ಹೊರೆತುಪಡಿಸಿ ಇತರ ಪ್ರಯೋಜನಗಳ ಬಗ್ಗೆ ಮಾತನಾಡುವುದಾದರೆ ಇದರಲ್ಲಿ 250 ನಿಮಿಷಗಳ ದೈನಂದಿನ ಕರೆಗಾಗಿ ನೀಡಲಾಗುತ್ತದೆ. ಇದಲ್ಲದೆ BSNL ತನ್ನ ವಿಶೇಷ ರೇಟ್ ವೋಚರ್ಗಳ 98, 99 ಮತ್ತು 319 ರೂಗಳ ವೋಚರ್ಗಳಲ್ಲಿ ಈಗ ಬಳಕೆದಾರರು 22 ದಿನಗಳ ಮಾನ್ಯತೆಯೊಂದಿಗೆ 2GB ದೈನಂದಿನ ಡೇಟಾವನ್ನು ಪಡೆಯುತ್ತಾರೆ.
ಆದರೆ ಈ 99 ರೂಗಳ ವೋಚರ್ಗಳಲ್ಲಿ ಪ್ರತಿ ದಿನ 250 ನಿಮಿಷಗಳ ಕರೆಗೆ ಲಭ್ಯವಿರುತ್ತದೆ. ಮತ್ತು ಈ ಯೋಜನೆಯ ವ್ಯಾಲಿಡಿಟಿಯನ್ನು ಸಹ 22 ದಿನಗಳಿಗೆ ಇಳಿಸಲಾಗಿದೆ. ಇದಲ್ಲದೆ 319 ರೂಗಳ ವೋಚರ್ ಬಂದಾಗ ಅದರ ವ್ಯಾಲಿಡಿಟಿಯೂ ಈಗ 85 ದಿನಗಳಾಗಿವೆ ಆದರೆ ಮೊದಲು 84 ದಿನಗಳ ಮಾನ್ಯತೆಯೊಂದಿಗೆ ಇದನ್ನು ನೀಡಲಾಯಿತು. ಇದರಲ್ಲಿ ಬಳಕೆದಾರರು ಕರೆ ಮಾಡಲು ಪ್ರತಿದಿನ 250 ನಿಮಿಷಗಳನ್ನು ಪಡೆಯುತ್ತಾರೆ. ಒಟ್ಟಾರೆಯಾಗಿ ಕಂಪನಿಯು ತನ್ನ ಜನಪ್ರಿಯ 1,699 ರೂಗಳ ಯೋಜನೆಯ ವ್ಯಾಲಿಡಿಟಿಯನ್ನು ಕಡಿಮೆಗೊಳಿಸಿರುವುದು ಈ ಸಮಯದಲ್ಲಿ ತಮ್ಮ ಬಳಕೆದಾರರನ್ನು ಸ್ವಲ್ಪ ನಿರಾಶೆಗೊಳಿಸಲು BSNL ಕಾರಣವಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile