365 ದಿನದ ವ್ಯಾಲಿಡಿಟಿ 600GB ಡೇಟಾ ನೀಡುವ BSNL ಪ್ಲಾನ್ ಬೆಲೆ ಎಷ್ಟಿದೆ? ಪ್ರಯೋಜನಗಳೇನು | Tech News

365 ದಿನದ ವ್ಯಾಲಿಡಿಟಿ 600GB ಡೇಟಾ ನೀಡುವ BSNL ಪ್ಲಾನ್ ಬೆಲೆ ಎಷ್ಟಿದೆ? ಪ್ರಯೋಜನಗಳೇನು | Tech News
HIGHLIGHTS

BSNL ಪ್ರತಿ ಬಾರಿ ತನ್ನ ಬಳಕೆದಾರರಿಗೆ ಅತಿ ಕಡಿಮೆ ಬೆಲೆಯ ಕೈಗೆಟಕುವ ಬೆಲೆಗೆ ಅತ್ಯುತ್ತಮ ಯೋಜನೆಗಳನ್ನು ನೀಡುತ್ತಲಿರುತ್ತದೆ

BSNL ಹೆಚ್ಚು ವ್ಯಾಲಿಡಿಟಿ, ಹೆಚ್ಚಿನ ಡೇಟಾ ಮತ್ತು OTT ಹೊಂದಿರುವ ಯೋಜನೆಯನ್ನು ಸಹ ಹುಡುಕುತ್ತಿದ್ದರೆ ಇದು ಬೆಸ್ಟ್

BSNL ರೀಚಾರ್ಜ್ ಯೋಜನೆಯು ನಿಮಗೆ ಅನಿಯಮಿತ ಸ್ಥಳೀಯ, STD ಮತ್ತು ರೋಮಿಂಗ್ ಕರೆಗಳನ್ನು ಪೂರ್ತಿ 365 ದಿನಗಳವರೆಗೆ ನೀಡುತ್ತದೆ.

ಭಾರತದ ಸರ್ಕಾರಿ ಟೆಲಿಕಾಂ ಕಂಪನಿ BSNL ಪ್ರತಿ ಬಾರಿ ತನ್ನ ಬಳಕೆದಾರರಿಗೆ ಅತಿ ಕಡಿಮೆ ಬೆಲೆಯ ಕೈಗೆಟಕುವ ಬೆಲೆಗೆ ಅತ್ಯುತ್ತಮ ಯೋಜನೆಗಳನ್ನು ನೀಡುತ್ತಲಿರುತ್ತದೆ. ಈಗ ಕಂಪನಿಯು ಮತ್ತೊಂದು ಇಂಟರಸ್ಟಿಂಗ್ ಯೋಜನೆಯೊಂದಿಗೆ ಬಂದಿದೆ. ನೀವು ಹೆಚ್ಚು ವ್ಯಾಲಿಡಿಟಿ, ಹೆಚ್ಚಿನ ಡೇಟಾ ಮತ್ತು OTT ಹೊಂದಿರುವ ಯೋಜನೆಯನ್ನು ಸಹ ಹುಡುಕುತ್ತಿದ್ದರೆ ನೀವು ಬಿಎಸ್ಎನ್ಎಲ್ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪಡೆಯುತ್ತಿರುವಿರಿ. ಪದೇ ಪದೇ ನೀವು ರಿಚಾರ್ಜ್ ಮಾಡಲು ಬಯಸದ ಬಳಕೆದಾರರಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಬಹುದು. ಈ ಲೇಖಾನದಲ್ಲಿ ನಾನು ನಿಮಗೆ 1999 ರೂಗಳ ಪ್ರಿಪೇಯ್ಡ್ ಯೋಜನೆಯ ಬಗ್ಗೆ ಹೇಳಲಿದ್ದೇನೆ. BSNL ಇದರಲ್ಲಿ ನೀವು ಬಯಸುವ ಹಲವು ಪ್ರಯೋಜನಗಳನ್ನು ಪಡೆಯಲಿದ್ದೀರಿ.

ಲೇಟೆಸ್ಟ್ ಟೆಕ್ನಾಲಜಿ ಅಪ್‌ಡೇಟ್‌ಗಳಿಗಾಗಿ ಡಿಜಿಟ್ ಕನ್ನಡ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಿ

BSNL ರೂ 797 ಪ್ರಿಪೇಯ್ಡ್ ಪ್ಲಾನ್ ಡೀಟೇಲ್ಸ್

ಬಿಎಸ್ಎನ್ಎಲ್ ಮೊದಲ ಪ್ಲಾನ್ ನೋಡುವುದಾದರೆ ಸುಮಾರು ರೂ 797 ರೂಗಳಿಗೆ ಬರುವ ಈ BSNL ರೀಚಾರ್ಜ್ ಯೋಜನೆಯು ನಿಮಗೆ ಅನಿಯಮಿತ ಸ್ಥಳೀಯ, STD ಮತ್ತು ರೋಮಿಂಗ್ ಕರೆಗಳನ್ನು ಪೂರ್ತಿ 365 ದಿನಗಳವರೆಗೆ ನೀಡುತ್ತದೆ. ಅಲ್ಲದೆ ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡುವ ಬಳಕೆದಾರರು ದಿನಕ್ಕೆ 2GB ಹೈ ಸ್ಪೀಡ್ ಡೇಟಾ ಮತ್ತು 100 SMS ಅನ್ನು ಸಹ ಪಡೆಯುತ್ತಾರೆ. ಪ್ರತಿ ದಿನ 2GB ಮಾರ್ಕ್ ಅನ್ನು ತಲುಪಿದ ನಂತರ ವೇಗವನ್ನು 80kbps ಗೆ ಕಡಿತಗೊಳಿಸಲಾಗುತ್ತದೆ. ಇದರ ನಂತರ ಡೇಟಾವನ್ನು ಇದೇ ವೇಗದಲ್ಲಿ ಅನ್ಲಿಮಿಟೆಡ್ ಬಳಕೆಯಲ್ಲಿ ಬಳಸಬಹುದು.

ಬಿಎಸ್ಎನ್ಎಲ್ ರೂ 1499 ಪ್ರಿಪೇಯ್ಡ್ ಪ್ಲಾನ್ ಡೀಟೇಲ್ಸ್

ಈ ಲೇಟೆಸ್ಟ್ ಬಿಎಸ್ಎನ್ಎಲ್ ರೂ 1,499 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ನಿಮಗೆ ಯಾವುದೇ ನೆಟ್‌ವರ್ಕ್‌ಗಳಿಗೆ ನೀವು ಅನಿಯಮಿತ ವಾಯ್ಸ್ ಕರೆಗಳನ್ನು ಪಡೆಯಬಹಹುದು. ಈ BSNL ರಿಚಾರ್ಜ್ ಪ್ಯಾಕ್ ದಿನಕ್ಕೆ 100 SMS ಅನ್ನು ಸಹ ಒಳಗೊಂಡಿದೆ. ಮತ್ತು ಸಂಪೂರ್ಣ ಅವಧಿಯ ಅವಧಿಗೆ ಒಟ್ಟಾರೆಯಾಗಿ 24GB ಡೇಟಾವನ್ನು ನೀಡುತ್ತದೆ. ಈ ಪ್ರಿಪೇಯ್ಡ್ ಯೋಜನೆಯು 336 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಅಂದ್ರೆ ಯಾರಿಗೆ ಕೇವಲ ಅನ್ಲಿಮಿಟೆಡ್ ಕರೆಗಳು ಮಾತ್ರ ಬೇಕಿದೆಯೋ ಅಂಥವರಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಲೇಟೆಸ್ಟ್ ಟೆಕ್ನಾಲಜಿ ಅಪ್‌ಡೇಟ್‌ಗಳಿಗಾಗಿ ಡಿಜಿಟ್ ಕನ್ನಡ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಿ

BSNL ರೂ 1999 ಪ್ರಿಪೇಯ್ಡ್ ಪ್ಲಾನ್ ಡೀಟೇಲ್ಸ್

ಈ ಪಟ್ಟಿಯ ಕೊನೆಯ ಪ್ಲಾನ್ ಅಂದ್ರೆ ಅದು ರೂ 1999 ರ ಯೋಜನೆಯಲ್ಲಿ ಗ್ರಾಹಕರು BSNL ನಿಂದ ಅನಿಯಮಿತ ಕರೆ ಮಾಡುವ ಪ್ರಯೋಜನವನ್ನು ಪಡೆಯಬಹುದು. BSNL ನ 1999 ರೂಗಳ ಯೋಜನೆಯು ಗ್ರಾಹಕರಿಗೆ ಪ್ರತಿದಿನ 100 SMS ನೀಡುತ್ತದೆ. ಇದಲ್ಲದೇ BSNL.1 ದಿನದ ಹಿಂದಿನ ಈ ಯೋಜನೆಯಲ್ಲಿ ಗ್ರಾಹಕರು 600GB ಡೇಟಾವನ್ನು ಸಹ ಪಡೆಯುತ್ತಾರೆ. ಪದೇ ಪದೇ ನೀವು ರಿಚಾರ್ಜ್ ಮಾಡಲು ಬಯಸದ ಬಳಕೆದಾರರಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಬಹುದು. ಯಾರಿಗೆ ಡೇಟಾ ಅನ್ಲಿಮಿಟೆಡ್ ಕರೆಗಳು ಮಾತ್ರ ಬೇಕಿದೆಯೋ ಅಂಥವರಿಗೆ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo