ಭಾರತದ ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL Plan) ತನ್ನ ಗ್ರಾಹಕರಿಗೆ ಹೊಸ ಬಜೆಟ್ ಸ್ನೇಹಿ ಯೋಜನೆಯನ್ನು ಕೈಗೆಟಕುವ ಬೆಲೆಗೆ ಪರಿಚಯಿಸಿದೆ. ಈ ಯೋಜನೆಯಲ್ಲಿ ನಿಮಗೆ ದೀರ್ಘಾವಧಿಯ ಮಾನ್ಯತೆಯೊಂದಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಬಯಸುವವರಿಗೆ ಈ ಯೋಜನೆಯು ವಿಶೇಷವಾಗಿರುತ್ತದೆ. BSNL ಹೊಂದಿರುವ ಈ ಹೊಸ ರೀಚಾರ್ಜ್ ಯೋಜನೆ ₹997 ಮತ್ತು ಅದರ ಮಾನ್ಯತೆ 160 ದಿನಗಳಾಗಿವೆ. ಇದರ ಹೊರತಾಗಿ ಈ ರಿಚಾರ್ಜ್ ಪ್ಲಾನ್ ನಿಮಗೆ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ದೈನಂದಿನ ಉತ್ತಮ 4G ವೇಗದಲ್ಲಿನ ಡೇಟಾದಂತಹ ಅನೇಕ ಪ್ರಯೋಜನಗಳು ಈ ಯೋಜನೆಯಲ್ಲಿ ನೀಡಲಾಗುತ್ತಿದೆ.
Also Read: Realme Narzo 70 Turbo 5G ಪವರ್ಫುಲ್ ಸ್ಮಾರ್ಟ್‌ಫೋನ್ 2000 ಡಿಸ್ಕೌಂಟ್‌ನೊಂದಿಗೆ ಇಂದಿನಿಂದ ಮೊದಲ ಮಾರಾಟ ಶುರು!
BSNL ನ ಈ ಯೋಜನೆಯು ದೀರ್ಘಾವಧಿಯ ಮತ್ತು ಕೈಗೆಟುಕುವ ರೀಚಾರ್ಜ್ ಯೋಜನೆಯನ್ನು ಹುಡುಕುತ್ತಿರುವ ಗ್ರಾಹಕರಿಗೆ ಆಗಿದೆ. ಈ ಯೋಜನೆಯಲ್ಲಿ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ಸೌಲಭ್ಯ ಲಭ್ಯವಿದೆ. ಇದರೊಂದಿಗೆ ಪ್ರತಿದಿನ 2GB ಹೈಸ್ಪೀಡ್ ಡೇಟಾ ಲಭ್ಯವಿದೆ. ಅಂದರೆ ಈ ಯೋಜನೆಯಲ್ಲಿ ನೀವು ಒಟ್ಟು 320GB ಡೇಟಾದ ಲಾಭವನ್ನು ಪಡೆಯುತ್ತೀರಿ. ಇಷ್ಟೇ ಅಲ್ಲ ಈ BSNL ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ದಿನಕ್ಕೆ 100 SMS ಸೌಲಭ್ಯವೂ ಲಭ್ಯವಿರುತ್ತದೆ.
ಈ ಯೋಜನೆಯ ಮಾನ್ಯತೆ 160 ದಿನಗಳಾಗಿದ್ದು BSNL ಈ ಯೋಜನೆಯಡಿಯಲ್ಲಿ ಉಚಿತ ರಾಷ್ಟ್ರೀಯ ರೋಮಿಂಗ್ ಅನ್ನು ಸಹ ನೀಡುತ್ತಿದೆ. ಇದರಿಂದ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ದೇಶಾದ್ಯಂತ ರೋಮಿಂಗ್ ಪ್ರಯೋಜನವನ್ನು ಪಡೆಯಬಹುದು. ಇದಲ್ಲದೆ ಈ ಯೋಜನೆಯಲ್ಲಿ BSNL ಟ್ಯೂನ್ಸ್ ಮತ್ತು ಜಿಂಗ್ ಮ್ಯೂಸಿಕ್‌ನಂತಹ ಮೌಲ್ಯವರ್ಧಿತ ಸೇವೆಗಳು ಸಹ ಉಚಿತವಾಗಿ ಲಭ್ಯವಿದೆ.
ಈಗಾಗಲೇ ಕಂಪನಿ ಟಾಟಾ ಕಂಪನಿಯೊಂದಿಗೆ ಸೇರಿಕೊಂಡು ಉತ್ತಮ್ನ ನೆಟ್ವರ್ಕ್ ನೀಡಲು ಕಾರ್ಯನಿರ್ವಹಿಸುತ್ತಿದೆ. ಒಮ್ಮೆ ಭಾರತದಾದ್ಯಂತ BSNL 5G ಅನ್ನು ಹೊರತರಲು ಅನೇಕ ರೀತಿಯ ಯೋಜನೆಯಗಳನ್ನು ಗಮನದಲ್ಲಿಟ್ಟುಕೊಂಡಿದೆ. BSNL ಬಳಕೆದಾರರು ಗೇಮಿಂಗ್ ಪ್ರಯೋಜನಗಳನ್ನು ಮತ್ತು OTT (ಓವರ್-ದಿ-ಟಾಪ್) ಚಂದಾದಾರಿಕೆಗಳನ್ನು ಹೆಚ್ಚುವರಿ ಪ್ರಯೋಜನಗಳಾಗಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡುವ ಯೋಜನೆಗಳಿಂದ ಆಯ್ಕೆ ಮಾಡಬಹುದು.
ಅದ್ರ ಬಗ್ಗೆ ಮಾಹಿತಿ ನೀಡಿರುವ ಭಾರತದ ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. BSNL 4G ಮೊಬೈಲ್ ಟವರ್‌ಗಳನ್ನು ಪೂರೈಸಲು ಮತ್ತು ಸ್ಥಾಪಿಸಲು ಸ್ಕಿಪ್ಪರ್‌ಗೆ ದೊಡ್ಡ ಯೋಜನೆಯನ್ನು ನೀಡಿದೆ. ಇದಲ್ಲದೆ BSNL LWE ಹಂತ-1 ರಲ್ಲಿ 2343 ಮೊಬೈಲ್ ಟವರ್‌ಗಳನ್ನು 4G ಗೆ ಅಪ್‌ಗ್ರೇಡ್ ಮಾಡುತ್ತದೆ ಮತ್ತು ಯೋಜನೆಯು ಯುನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್ (USOF) ನಿಂದ ಹಣವನ್ನು ಪಡೆಯುತ್ತದೆ.