ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL Recharge) ರೀಚಾರ್ಜ್ ಯೋಜನೆಗಳು ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿ ನೋಡುವುದಾದರೆ ತುಂಬಾ ಕಡಿಮೆ ಕೈಗೆಟುಕುವ ಬೆಲೆಗೆ ಹೆಚ್ಚು ಅನುಕೂಳ ನೀಡುವ ಯೋಜನೆಗಳನ್ನು ಹೊಂದಿವೆ. ಈ BSNL ನೀಡುವ ಯೋಜನೆಗಳನ್ನು ಗ್ರಾಹಕರು ಬಹಳವಾಗಿ ಆನಂದಿಸುತ್ತಾರೆ. BSNL ಯೋಜನೆಗಳು ಖಾಸಗಿ ಟೆಲಿಕಾಂ ಕಂಪನಿಗಳಿಗಿಂತ ತುಂಬ ಕಡಿಮೆಯಾಗಿದೆ. BSNL ಯೋಜನೆಗಳು ಈಗಾಗಲೇ ಮಾರುಕಟ್ಟೆಯಲ್ಲಿರುವ Jio, Airtel ಮತ್ತು Vi ಟೆಲಿಕಾಂ ಕಂಪನಿಗಳಿಗಿಂತ ಇನ್ನೂ ಕಡಿಮೆಯಾಗಿದೆ. ನೀವು BSNL ಗ್ರಾಹಕರಾಗಿದ್ದರೆ ಮತ್ತು ನಿಮಗಾಗಿ ದೀರ್ಘ ವ್ಯಾಲಿಡಿಟಿ ಹೊಂದಿರುವ ಯೋಜನೆಯನ್ನು ನೀವು ಹುಡುಕುತ್ತಿದ್ದರೆ ಇಂದು ನಾವು ನಿಮಗಾಗಿ ಅಂತಹ ಒಂದು ರೀಚಾರ್ಜ್ ಯೋಜನೆಯನ್ನು ತಂದಿದ್ದೇವೆ.
Also Read: 50MP ಸೆಲ್ಫಿ ಕ್ಯಾಮೆರಾವುಳ್ಳ Vivo V40e ಸ್ಮಾರ್ಟ್ಫೋನ್ ಬಿಡುಗಡೆ! ಭಾರತದ ಬೆಲೆ ಮತ್ತು ಟಾಪ್ ಫೀಚರ್ಗಳೇನು?
ಈ BSNL ಯೋಜನೆಯು 180 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ BSNL ಯೋಜನೆಯು ಬಂಪರ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದ ಯೋಜನೆಗಳು ದುಬಾರಿಯಾದಾಗಿನಿಂದ ಹೆಚ್ಚಿನ ಜನರು ಬಿಎಸ್‌ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ನೀವು ದುಬಾರಿ ರೀಚಾರ್ಜ್‌ಗಳ ಬಗ್ಗೆ ಅತೃಪ್ತರಾಗಿದ್ದರೆ ಮತ್ತು ತುಂಬಾ ಕಡಿಮೆ ಬೆಲೆಯ ಆಯ್ಕೆಯನ್ನು ಹುಡುಕುತ್ತಿದ್ದರೆ BSNL ಯೋಜನೆಗಳು ನಿಮಗೆ ಪ್ರಯೋಜನಕಾರಿ ಪರಿಹಾರವಾಗಿದೆ.
BSNL ಕಂಪನಿಯ ಈ ಯೋಜನೆಯಲ್ಲಿರುವ ಗ್ರಾಹಕರು ಇಂಟರ್ನೆಟ್ ಬಳಕೆಗಾಗಿ ಅನಿಯಮಿತ ಉಚಿತ ಡೇಟಾವನ್ನು ಪಡೆಯುತ್ತಾರೆ. BSNL ಯೋಜನೆಯಲ್ಲಿ ಒಟ್ಟು 90GB ಡೇಟಾವನ್ನು ನೀಡಲಾಗುತ್ತಿದೆ. ಪರಿಣಾಮವಾಗಿ ಯೋಜನೆಯು ದೈನಂದಿನ ಡೇಟಾವನ್ನು ಒಳಗೊಂಡಿರುವುದಿಲ್ಲ. ನಿಮ್ಮ ಇಚ್ಛೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ನೀವು ಡೇಟಾವನ್ನು ಬಳಸಬಹುದು. ಬರೋಬ್ಬರಿ 90GB ಡೇಟಾ ಮುಗಿದ ನಂತರ 40Kbps ವೇಗದೊಂದಿಗೆ ಡೇಟಾ ಕಡಿಮೆಯಾಗಿದೆ.
ಇದಲ್ಲದೆ ಯೋಜನೆಯಲ್ಲಿ ಸಂಭಾಷಣೆಗಾಗಿ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ. ಇದರ ಜೊತೆಗೆ ಯೋಜನೆಯಲ್ಲಿ ಪ್ರತಿದಿನ 100 SMS ಅನ್ನು ಉಚಿತವಾಗಿ ನೀಡಲಾಗುತ್ತದೆ. BSNL ನ ಈ ಪ್ಲಾನ್ ಬೆಲೆ 897 ರೂಗಳಾಗಿದ್ದು BSNL ಕಂಪನಿಯ ಈ ಯೋಜನೆಯು ಹೆಚ್ಚು ಕರೆ ಮಾಡುವವರಿಗೆ ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸಬಹುದು.
ಇದರ ಕ್ರಮವಾಗಿ ನೀವು ಇದಕ್ಕಿಂತ ಕಡಿಮೆ ಬೆಲೆಯ ಮತ್ತೊಂದು 797 ರೂಗಳ ಪ್ರಿಪೇಯ್ಡ್ ಯೋಜನೆಯನ್ನು ಸಹ ಕಾಣಬಹುದು.ಆದರೆ ಈ BSNL PV_797 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರು 300 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಉಚಿತ ವಾಯ್ಸ್ ಕರೆ ಸೌಲಭ್ಯವನ್ನು ಸಹ ಒದಗಿಸಲಾಗಿದೆ.
ಈ ಯೋಜನೆಯು ಪ್ರತಿದಿನ 2GB ಡೇಟಾವನ್ನು ನೀಡುತ್ತದೆ ಮತ್ತು ಪ್ರತಿದಿನ 100 ಉಚಿತ SMS ಸೌಲಭ್ಯಗಳು ಲಭ್ಯವಿದೆ. ಆದರೆ ಇದೆಲ್ಲ ಪ್ರಯೋಜನಗಳು ನಿಮಗೆ ಕೇವಲ ಮೊದಲ 60 ದಿನಗಳವರೆಗೆ ಮಾತ್ರ ಈ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆ, ಡೇಟಾ ಮತ್ತು SMS ಅನ್ನು ಪಡೆಯಬಹುದು. ಇಂದರ ನಂತರ ವ್ಯಾಲಿಡಿಟಿ ಬಿಟ್ಟು ಕರೆ, ಡೇಟಾ ಮತ್ತು ಮೆಸೇಜ್ ಮಾಡಲು ಸಹ ಹೆಚ್ಚುವರಿಯ ಶುಲ್ಕ ನೀಡಬೇಕಾಗುತ್ತದೆ.