Recharge Plan 2025: ಭಾರತದಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸ ವರ್ಷದಲ್ಲಿ ಅತಿ ಕಡಿಮೆ ಬೆಲೆಗೆ ಹೆಚ್ಚುವರಿಯ ಪ್ರಯೋಜನಗಳನ್ನು ನೀಡುವ ಟೆಲಿಕಾಂ ಕಂಪನಿಯಾಗಿದೆ. ಹೊಸ ವರ್ಷದಲ್ಲಿ BSNL ಅತ್ಯುತ್ತಮ ಅಪ್ಡೇಟ್ ಮಾಡಿದ್ದು ಕೈಗೆಟಕುವ ಬೆಲೆಗೆ ಬೆಸ್ಟ್ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಹಾಗಾದ್ರೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಪ್ರಿಪೇಯ್ಡ್ ಯೋಜನೆಗಳಲ್ಲಿ ಈ ₹485 ರಿಚಾರ್ಜ್ ಸಹ ಒಂದಾಗಿದ್ದು ನಿಮಗೆ ಉತ್ತಮ ಪ್ರಯೋಜನಗಳನ್ನು ಕಡಿಮೆ ಬೆಲೆಗೆ ನೀಡುತ್ತಿದೆ. ಬಿಎಸ್ಎನ್ಎಲ್ ವಿಶೇಷವಾಗಿ ಈ ಪ್ಲಾನ್ 80 ದಿನಗಳ ಮಾನ್ಯತೆಯೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನುನೀಡುತ್ತಿದೆ.
ಪ್ರಸ್ತುತ ಈ ಯೋಜನೆಯನ್ನು ಕಂಪನಿ ಮೊದಲು ಬೇರೆ ಬೆಲೆಯಲ್ಲಿ ಬೇರೆ ರೀತಿಯ ಪ್ರಯೋಜನಗಳನ್ನು ನೀಡುತ್ತಿತ್ತು ಆದರೆ ಈಗ ಕಂಪನಿ ಅದೇ ಯೋಜನೆಯಲ್ಲಿ ಹೊಸ 2025 ವರ್ಷದಿಂದ ಒಂದಿಷ್ಟು ಬದಲಾವಣೆಗಳನ್ನು ಮಾಡಿ ಪರಿಷ್ಕರಿಸಿದೆ. ನೀವು BSNL ರಿಚಾರ್ಜ್ ಬಳಕೆದಾರರಾಗಿದ್ದಾರೆ ನಿಮಗೆ ಪ್ರಸ್ತುತ ಖಾಸಗಿ ಟೆಲಿಕಾಂ ಕಂಪನಿಗಳಾದ Jio, Airtel ಮತ್ತು Vi ನೀಡದ ಜಬರ್ದಸ್ತ್ ಲಾಭವನ್ನು ಸರ್ಕಾರಿ ಸೌಮ್ಯದ BSNL ನೀಡುತ್ತಿದೆ. ಹಾಗಾದ್ರೆ ಬಿಎಸ್ಎನ್ಎಲ್ ನೀಡುತ್ತಿರುವ ಈ ₹485 ರಿಚಾರ್ಜ್ ಯೋಜನೆಯ ಸಂಪೂರ್ಣ ಮಾಹಿತಿಗಳೇನು ಈ ಕೆಳಗೆ ತಿಳಿಯಿರಿ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನೀಡುತ್ತಿರುವ ಈ ಹೊಸ ಪ್ರಿಪೇಯ್ಡ್ ಯೋಜನೆಯು ವ್ಯಾಲಿಡಿಟಿ ಕಡಿತವನ್ನು ಪಡೆದಿದೆ ಆದರೆ ಡೇಟಾ ಪ್ರಯೋಜನಗಳನ್ನು ಹೆಚ್ಚಿಸಲಾಗಿದೆ. ಆದರೆ ಈ ಪ್ಯಾಕ್ ಪ್ರಸ್ತುತ ಏರುತ್ತಿರುವ ಬೆಲೆಗಳ ಶ್ರೇಣಿಯಲ್ಲಿ ಗ್ರಾಹಕರಿಗೆ ನಿಜವಾಗಿಯೂ ಹೆಚ್ಚು ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಈ ಹಿಂದಿನ ಈ ಯೋಜನೆಯು 82 ದಿನಗಳ ಮಾನ್ಯತೆಯೊಂದಿಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಉಚಿತ ವಾಯ್ಸ್ ಕರೆಯನ್ನು ನೀಡಿತು. ಬಳಕೆದಾರರು 1.5GB/ದಿನದ ದೈನಂದಿನ ಡೇಟಾವನ್ನು ಉಚಿತವಾಗಿ 100 SMS/ದಿನ ಮತ್ತು ಇತರ ಸೇವೆಗಳೊಂದಿಗೆ ಪಡೆಯುತ್ತಾರೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಈ ಯೋಜನೆಯಲ್ಲಿನ ಡೇಟಾ ಮಿತಿ ಮುಗಿದ ನಂತರ ಬಳಕೆದಾರರು 40kbps ವೇಗವನ್ನು ಪಡೆಯುತ್ತಾರೆ. ಬಳಕೆದಾರರು ಸ್ವೀಕರಿಸಿದ ಒಟ್ಟು ಡೇಟಾ 160GB ಆಗಿದೆ. ಆದರೆ ಈಗ BSNL ಪ್ರಿಪೇಯ್ಡ್ ಯೋಜನೆಯು ಈಗ 80 ದಿನಗಳ ಮಾನ್ಯತೆಯೊಂದಿಗೆ ಡೇಟಾದ ವಿಭಾಗದಲ್ಲಿ ಪ್ರಯೋಜನಗಳನ್ನು ಹೆಚ್ಚಿಸಲಾಗಿದೆ. ಮೊದಲು 1.5GB ದೈನಂದಿನ ಡೇಟಾದಿಂದ ಈಗ 2GB ದೈನಂದಿನ ಡೇಟಾವನ್ನು ಪಡೆಯುತ್ತೀರಿ.