ಬರೋಬ್ಬರಿ 395 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 2GB ಡೇಟಾ ಮತ್ತು ಕರೆ ನೀಡುವ ಈ BSNL ಪ್ಲಾನ್ ಬೆಲೆ ಎಷ್ಟು?

Updated on 01-Aug-2024
HIGHLIGHTS

BSNL ಈಗ ತಮ್ಮ ಬಳಕೆದಾದರಿಗೆ ಹೊಸ ಪ್ರಯೋಜನಗಳೊಂದಿಗೆ ಅಸ್ತಿತ್ವದಲ್ಲಿರುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ನವೀಕರಿಸಿದೆ.

BSNL ಈಗ 2399 ರೂಗಳಿಗೆ ಬರೋಬ್ಬರಿ 395 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ.

ಇದರ ಬೆಲೆಯಲ್ಲಿ ಅತಿ ಕಡಿಮೆ ಬೆಲೆಗೆ Jio, Airtel ಮತ್ತು Vi ಕಂಪನಿಗಳಿಗೆ ಠಕ್ಕರ್ ನೀಡಲು ಏಕೈಕ BSNL ಯೋಜನೆಯಾಗಿದೆ.

ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸೇವಾ ಪೂರೈಕೆದಾರ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಈಗ ತಮ್ಮ ಬಳಕೆದಾದರಿಗೆ ಹೊಸ ಪ್ರಯೋಜನಗಳೊಂದಿಗೆ ಅಸ್ತಿತ್ವದಲ್ಲಿರುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ನವೀಕರಿಸಿದೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಅತಿ ಕಡಿಮೆ ಬೆಲೆಗೆ Jio, Airtel ಮತ್ತು Vi ಕಂಪನಿಗಳಿಗೆ ಠಕ್ಕರ್ ನೀಡಲು 2399 ರೂಗಳಿಗೆ ಬರೋಬ್ಬರಿ 395 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ 2GB ಡೇಟಾ ಮತ್ತು ಕರೆ ನೀಡುತ್ತಿದೆ. ಇದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

BSNL ರೂ. 2,399 ವಾರ್ಷಿಕ ಪ್ರಿಪೇಯ್ಡ್ ಯೋಜನೆಯ ವಿವರಗಳು

ಅತಿ ಹೆಚ್ಚು ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಯೋಜನೆಯಲ್ಲಿ ಹಲವಾರು ಬಾರಿ ಇದರಲ್ಲಿನ ಪ್ರಯೋಜನಗಳನ್ನು ಬದಲಾಯಿಸಿದ್ದು ಈ ಮೊದಲು ವಾರ್ಷಿಕ ದಿನಗಳಿಗಿಂತ ಅಧಿಕ ವ್ಯಾಲಿಡಿಟಿಯೊಂದಿಗೆ ಬರುವ ಪ್ರಿಪೇಯ್ಡ್ ಯೋಜನೆಯಾಗಿತ್ತು ನಂತರ ಈ ಯೋಜನೆಯನ್ನು ಪುನಃ ಅಪ್ಡೇಟ್ ಮಾಡಿದ್ದೂ ನಂತರ ರೀಚಾರ್ಜ್ ಯೋಜನೆಯು ಅದರ ಬಳಕೆದಾರರಿಗೆ ಹೆಚ್ಚುವರಿ 60 ದಿನಗಳ ವ್ಯಾಲಿಡಿಟಿಯನ್ನು ನೀಡಲು ಆರಂಭಿಸಿತು ಅಂದರೆ ಯೋಜನೆಯು 425 ದಿನಗಳ ಮಾನ್ಯತೆಯನ್ನು ಹೊಂದಿತ್ತು ಆದರೆ ಈಗ ಇದು ಮತ್ತೊಮ್ಮೆ ಭಾರಿ ಬದಲಾವಣೆಗಳೊಂದಿಗೆ ಲಭ್ಯವಿದೆ.

BSNL Rs. 2399 Recharge Plan

ಈ BSNL ರೂ 2,399 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಈಗ 2024 ರಲ್ಲಿ ಬರೋಬ್ಬರಿ 395 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು ಇದರ ಬೆಲೆಯಲ್ಲಿ ಅತಿ ಕಡಿಮೆ ಬೆಲೆಗೆ Jio, Airtel ಮತ್ತು Vi ಕಂಪನಿಗಳಿಗೆ ಠಕ್ಕರ್ ನೀಡಲು ಏಕೈಕ ಯೋಜನೆಯಾಗಿದೆ. ಯಾಕೆಂದರೆ ಇದರಲ್ಲಿ ನಿಮಗೆ ಅನ್ಲಿಮಿಟೆಡ್ ಕರೆಗಳು ಸ್ಥಳೀಯ, STD ಮತ್ತು ಯಾವುದೇ ರೋಮಿಂಗ್ ಭಾಗಗಳಲ್ಲೂ ಉಚಿತ ವಾಯ್ಸ್ ಕರೆಗಳನ್ನು ಪಡೆಯುವಿರಿ. ಇದರೊಂದಿಗೆ ನಿಮಗೆ ಪ್ರತಿದಿನ 2GB ಡೇಟಾ ಲಭ್ಯವಿರುತ್ತದೆ. ಅಲ್ಲದೆ ನಿಮಗೆ ದಿನಕ್ಕೆ 100 ಉಚಿತ SMS ಸಹ ಪಡೆಯಬಹುದು. ದಿನದ ಡೇಟಾ ಮುಗಿದ ನಂತರ 40kbps ವೇಗದಲ್ಲಿ ಲಭ್ಯವಿದ್ದು ಬಳಸುವ ಡೇಟಾಕ್ಕಾಗಿ 25 ಪೈಸೆ ಪ್ರತಿ MB ಬಳಕೆಗೆ ಶುಲ್ಕವಾಗುತ್ತದೆ.

Also Read: 50MP ಸೆಲ್ಫಿ ಕ್ಯಾಮೆರಾದ Nothing Phone 2a Plus ಭಾರತದಲ್ಲಿ ಲಾಂಚ್! ಬೆಲೆಯೊಂದಿಗೆ ಒಂದಿಷ್ಟು ಮಾಹಿತಿ ಇಲ್ಲಿದೆ!

BSNL ರೂ 2,399 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ ಹೆಚ್ಚುವರಿ ಪ್ರಯೋಜನ

ಈ ಯೋಜನೆಯನ್ನು ಈಗ ಅಧಿಕೃತ BSNL ವೆಬ್‌ಸೈಟ್‌ನಲ್ಲಿ ನವೀಕರಿಸಿದ ಪ್ರಯೋಜನಗಳೊ೦ದಿಗೆ ಪಟ್ಟಿ ಮಾಡಲಾಗಿದೆ ಮತ್ತು ಅದರ ಪ್ರಕಾರ ಜೂನ್ ಅಂತ್ಯದವರೆಗೆ ಅಫರ್ ಲಭ್ಯವಿರುತ್ತದೆ. ಕುತೂಹಲಕಾರಿಯಾಗಿ ಯೋಜನೆಯೊಂದಿಗೆ ಇತ್ತೀಚೆಗೆ ರೀಚಾರ್ಜ್ ಮಾಡಿದ BSNL ಬಳಕೆದಾರರು ವಿಕೃತ ಮಾನ್ಯತೆಯ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ.

BSNL Rs. 2399 Recharge Plan

ಯೋಜನೆಯು ಅನಿಯಮಿತ ಹಾಡು ಬದಲಾವಣೆ ಆಯ್ಕೆಯೊಂದಿಗೆ ಉಚಿತ PRBT ಅನ್ನು ಸಹ ನೀಡುತ್ತದೆ. ಅಲ್ಲದೆ Hardy Games, Challenger Arena Games, Gameon Astrotell, Gameium, Lystn Podocast, Zing Music ಇದರೊಂದಿಗೆ ಉಚಿತ WOW ಮನರಂಜನಾ ಸೇವೆಗಳು ಮತ್ತು ಲೋಕಧುನ್ ಅನ್ನು ಸಹ ಹೊಂದಿದೆ.

ನಿಮ್ಮ ಗಮನಕ್ಕೆ: ನಿಮ್ಮ ಮೊಬೈಲ್ ನಂಬರ್‌ಗೆ ಲಭ್ಯವಿರುವ ಅತ್ಯುತ್ತಮವಾದ ಯೋಜನೆ ಮತ್ತು ಪ್ರಯೋಜನಗಳನ್ನು Digit Recharge ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬಹುದು.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :