ಬಿಎಸ್ಎನ್ಎಲ್ (BSNL) ತಮ್ಮ ಬಳಕೆದಾರರಿಗೆ 229 ರೂಗಳ ಯೋಜನೆಯನ್ನು ನೀಡುತ್ತಿದೆ.
ಬಿಎಸ್ಎನ್ಎಲ್ (BSNL) ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ, SMS ಮತ್ತು ಪ್ರತಿದಿನಕ್ಕೆ 2GB ಡೇಟಾ ನೀಡುತ್ತಿದೆ.
ಬಿಎಸ್ಎನ್ಎಲ್ (BSNL) ಪ್ರೈವೇಟ್ ಕಂಪನಿಗಳಾದ Jio, Airtel ಮತ್ತು Vi ಕಂಪನಿಗಳಿಗೆ ನೇರವಾಗಿ ಪ್ರತಿಸ್ಪರ್ಧಿಯಾಗಿದೆ.
ಭಾರತದಲ್ಲಿ ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ (BSNL) ತಮ್ಮ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಅತ್ಯುತ್ತಮವಾದ ಯೋಜನೆಗಳನ್ನು (BSNL Plan 2024) ಹೆಚ್ಚುವರಿ ಪ್ರಯೋಜನಗಳಿಗೆ ನೀಡುವ ಗುರಿಯನ್ನು ಹೊಂದಿದ್ದು ಟೆಲಿಕಾಂ ಮಾರುಕಟ್ಟೆಯಲ್ಲಿ ಪ್ರೈವೇಟ್ ಕಂಪನಿಗಳಾದ Jio, Airtel ಮತ್ತು Vi ಕಂಪನಿಗಳಿಗೆ ನೇರವಾಗಿ ಪ್ರತಿಸ್ಪರ್ಧಿಯಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಈ ಲೇಖನದಲ್ಲಿ ನಾವು ಮಾತನಾಡಲಿರುವ 229 ರೂಗಳ ಪ್ರಿಪೇಯ್ಡ್ ಯೋಜನೆಯಾಗಿದೆ. ಪ್ರಸ್ತುತ ಬೇರೆ ಯಾರು ನೀಡದ ಪ್ರಯೋಜನಗಳನ್ನು ಬಿಎಸ್ಎನ್ಎಲ್ (BSNL) ನೀಡುತ್ತಿದೆ.
Also Read: OnePlus Open Apex Edition: ಡ್ಯೂಯಲ್ ಡಿಸ್ಪ್ಲೇಯೊಂದಿಗೆ ಒನ್ ಪ್ಲಸ್ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ
BSNL Plan 2024 ಸೇರಿಕೊಳ್ಳಲು ಓಡೋಡಿ ಬರುತ್ತಿರುವ ಜನಸಾಗರ:
ಭಾರತದಲ್ಲಿ ಈ ಬಿಎಸ್ಎನ್ಎಲ್ (BSNL) ಕಂಪನಿ ವೇಗವಾಗಿ ತನ್ನ ಬೇರುಗಳನ್ನು ದೇಶಾದ್ಯಂತ ಚಾಚುತ್ತಿರುವುದನ್ನು ಕಳೆದ 2 ತಿಂಗಳುಗಳಿಂದ ಹೆಚ್ಚಾಗಿ ಕೇಳುತ್ತಿರಬಹುದು. ಇದಕ್ಕೆ ಕಾರಣವೆಂದರೆ ಈಗ ಟಾಟಾ ಗ್ರೂಪ್ ಸರ್ಕಾರಿ BSNL ಕಂಪನಿಯೊಂದಿಗೆ ಕೈಜೋಡಿಸಿ ನೆಟ್ವರ್ಕ್ ಸುಧಾರಣೆಯ ಕಾರ್ಯವನ್ನು ಕೈಗೆತ್ತುಕೊಂಡಿದೆ. ಟಾಟಾದ ಭರವಸೆಯ ಬಗ್ಗೆ ಹೊಸದಾಗಿ ನಿಮಗೆ ಪರಿಚಯ ನೀಡುವ ಅಗತ್ಯವಿಲ್ಲ. ಇದಕ್ಕಾಗಿ ಜನಸಾಮಾನ್ಯರು 4G ಆದರೂ ಸರಿಯೆಂದು ಆದರೆ ಕಡಿಮೆ ಖರ್ಚಿನಲ್ಲಿ ತಿಂಗಳು ಕಳೆದರೆ ಸಾಕೆಂದು ನಿಟ್ಟುಸಿರನ್ನು ಬಿಡುತ್ತಾ BSNL ಅರಸಿ ಓಡೋಡಿ ಬರುತ್ತಿರುವ ಜನಸಾಗರ ಇನ್ನು ಇನ್ನೆರಡು ವರ್ಷಗಳಲ್ಲಿ ಪ್ರೆವೈಟ್ ಕಂಪನಿಗಳ ಗ್ರಾಹಕರ ಸಂಖ್ಯೆಯನ್ನು ಮೀರಿ ನೇರವಾಗಿ ಠಕ್ಕರ್ ನೀಡುವ ನಿರೀಕ್ಷೆಗಳಿವೆ.
ಬಿಎಸ್ಎನ್ಎಲ್ (BSNL) ರೂ. 229 ಪ್ರಿಪೇಯ್ಡ್ ಪ್ಲಾನ್ ವಿವರಗಳು:
ಬಿಎಸ್ಎನ್ಎಲ್ ಈ ಯೋಜನೆಯಲ್ಲಿ ತಮ್ಮ ಗ್ರಾಹಕರು ಅನಿಯಮಿತ ಕರೆಯನ್ನು ಆನಂದಿಸಲು ಯಾವುದೇ ಕರೆ ಶುಲ್ಕಗಳ ಬಗ್ಗೆ ಚಿಂತಿಸದೆ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಈ ಯೋಜನೆಯಲ್ಲಿ ನಿಮಗೆ 2GB ದೈನಂದಿನ ಡೇಟಾವನ್ನು ಒದಗಿಸುತ್ತದೆ. ಇದರಡಿಯಲ್ಲಿ ಹೆಚ್ಚಿನ ಬಳಕೆದಾರರ ಇಂಟರ್ನೆಟ್ ಅಗತ್ಯಗಳಿಗೆ ಸಾಕಾಗುತ್ತದೆ. ಬಳಕೆದಾರರು ಬ್ರೌಸಿಂಗ್, ಸ್ಟ್ರೀಮಿಂಗ್ ಅಥವಾ ಸಾಮಾಜಿಕ ಮಾಧ್ಯಮಕ್ಕಾಗಿ ಈ ಡೇಟಾವು ನೀವು ಭಾರೀ OTT, ಲೈವ್ ಗೇಮಿಂಗ್ ಮತ್ತು ಸಾಮಾಜಿಕ ಮಾಧ್ಯಮ ಸರ್ಫಿಂಗ್‌ಗೆ ಒಳಪಟ್ಟಿರುವುದನ್ನು ಖಚಿತಪಡಿಸುತ್ತದೆ.
ಅಲ್ಲದೆ ಚಂದಾದಾರರು ದಿನಕ್ಕೆ 100 SMS ಸ್ವೀಕರಿಸುತ್ತಾರೆ ಇದು ಆತ್ಮೀಯರೊಂದಿಗೆ ಸಂಪರ್ಕದಲ್ಲಿರಲು ಸುಲಭವಾಗುತ್ತದೆ. ಕೊನೆಯದಾಗಿ ಹೆಚ್ಚುವರಿಯಾಗಿ ಈ ಪ್ರಿಪೇಯ್ಡ್ ಯೋಜನೆಯು ಆನ್‌ಮೊಬೈಲ್ ಗ್ಲೋಬಲ್ ಲಿಮಿಟೆಡ್‌ನಿಂದ ಅರೆನಾ ಮೊಬೈಲ್ ಗೇಮಿಂಗ್‌ನಿಂದ ಗೇಮಿಂಗ್ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಇದು ಮನರಂಜನೆಯ ಮೌಲ್ಯದ ಹೆಚ್ಚುವರಿ ಪದರವನ್ನು ಸೇರಿಸುತ್ತದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಈ ಯೋಜನೆ ಬಳಕೆದಾರರಿಗೆ ಬರೋಬ್ಬರಿ ಒಂದು ತಿಂಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಯಾವ ದಿನಾಂಕದಲ್ಲಿ ಯಾವ ಸಮಯಕ್ಕೆ ರಿಚಾರ್ಜ್ ಮಾಡಿದರೋ ಮುಂದಿನ ಅದೇ ದಿನಾಂಕ ಮತ್ತು ಸಮಯಕ್ಕೆ ಕೊನೆಕೊಳ್ಳಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile