BSNL ಪ್ಲಾನ್ ನಿಮಗೆ ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾದೊಂದಿಗೆ ಅನ್ಲಿಮಿಟೆಡ್ ಕರೆಗಳನ್ನು ನೀಡುತ್ತಿದೆ

Updated on 30-May-2023
HIGHLIGHTS

BSNL ಬಳಕೆದಾರರಿಗಾಗಿ ಎರಡು ಹೊಸ BSNL 2999 ಯೋಜನೆ ಮತ್ತು BSNL 299 ಯೋಜನೆಗಳನ್ನು ತಂದಿದೆ.

ಇದರಲ್ಲಿ ನಾವು ಮಾತನಾಡಲಿರುವ 2 ಯೋಜನೆಗಳನ್ನು ಎಲ್ಲಾ ವಲಯಗಳಿಗೆ ಪ್ರಾರಂಭಿಸಲಾಗಿದೆ

ಈ BSNL ಪ್ಲಾನ್‌ನೊಂದಿಗೆ ಕಂಪನಿಯು 365 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ.

ದೇಶಿಯ ಟೆಲಿಕಾಂ ಬ್ರಾಂಡ್ ಸರ್ಕಾರಿ ಟೆಲಿಕಾಂ ಕಂಪನಿ BSNL ಬಳಕೆದಾರರಿಗಾಗಿ ಎರಡು ಹೊಸ BSNL 2999 ಯೋಜನೆ ಮತ್ತು BSNL 299 ಯೋಜನೆಗಳನ್ನು ತಂದಿದೆ. ಇದರಲ್ಲಿ ನಾವು ಮಾತನಾಡಲಿರುವ 2 ಯೋಜನೆಗಳನ್ನು ಎಲ್ಲಾ ವಲಯಗಳಿಗೆ ಪ್ರಾರಂಭಿಸಲಾಗಿದೆ. ಈ BSNL ರೀಚಾರ್ಜ್‌ ನಿಮ್ಮ ಎಲ್ಲಾ ಪ್ರಿಪೇಯ್ಡ್ ನಂಬರ್ಗಳಿಗೆ ಲಭ್ಯವಿರುತ್ತದೆ. BSNL ಎರಡೂ ಯೋಜನೆಗಳ ಪ್ರಯೋಜನಗಳು ಮತ್ತು ಮಾನ್ಯತೆಯ ಬಗ್ಗೆ ವಿವರವಾದ ಮಾಹಿತಿಗಳನ್ನು ಈ ಲೇಖನದಲ್ಲಿ ಕೊಂಚ ಸರಳವಾಗಿ ತಿಳಿಯಬಹುದು. ಇಷ್ಟವಾದರೆ ಮುಂದಿನ ರಿಚಾರ್ಜ್ ಅನ್ನು ನೀವು ಮಾಡಿಕೊಳ್ಳಬಹುದು.

BSNL PV2999 ಯೋಜನೆ ವಿವರಗಳು

ಈ BSNL ಪ್ಲಾನ್‌ನೊಂದಿಗೆ ಕಂಪನಿಯು 365 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ಜೊತೆಗೆ ಬಳಕೆದಾರರು 90 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ. ಈ ಯೋಜನೆಯನ್ನು ಕಳೆದ 31ನೇ ಮಾರ್ಚ್ 2022 ರಿಂದ ಈವೆರೆಗೂ ಪ್ರಚಾರದ ಕೊಡುಗೆ ಅಡಿಯಲ್ಲಿ ದೇಶದ ಹಲವಾರು ಕಡೆಗಳಲ್ಲಿ ಈಗಲೂ ಲಭ್ಯವಿದೆ. ಇದಲ್ಲದೆ ಈ ಯೋಜನೆಯು ಅನಿಯಮಿತ ವಾಯ್ಸ್ ಕರೆ ಮತ್ತು ದಿನಕ್ಕೆ 100 SMS ಜೊತೆಗೆ ದಿನಕ್ಕೆ 3GB ಡೇಟಾವನ್ನು ನೀಡುತ್ತದೆ.

ಡೇಟಾ ಮಿತಿ ಮುಗಿದ ನಂತರ ವೇಗವನ್ನು 80Kbps ಗೆ ಇಳಿಸಲಾಗುತ್ತದೆ ಈ ಪ್ರಚಾರದ ಕೊಡುಗೆಯೊಂದಿಗೆ BSNL 2999 ಯೋಜನೆಯು ಒಟ್ಟು 455 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಭಾರೀ ಡೇಟಾದೊಂದಿಗೆ ದೀರ್ಘಾವಧಿಯ ಮಾನ್ಯತೆಯನ್ನು ಹುಡುಕುತ್ತಿರುವ ಬಳಕೆದಾರರಿಗೆ ಈ ಯೋಜನೆಯು ತುಂಬಾ ವಿಶೇಷವಾಗಿದೆ ಎಂದು ಸಾಬೀತುಪಡಿಸುತ್ತದೆ. ಈ ಯೋಜನೆಯ ಬೆಲೆಯು ದಿನಕ್ಕೆ 3GB ಡೇಟಾವನ್ನು ನೀಡುವ ಇತರ ಟೆಲಿಕಾಂ ಕಂಪನಿಗಳ ಯೋಜನೆಗಳಿಗಿಂತ ಕಡಿಮೆಯಾಗಿದೆ.

BSNL PV299 ಯೋಜನೆ ವಿವರಗಳು

ಈ BSNL ರೀಚಾರ್ಜ್ ಯೋಜನೆಯೊಂದಿಗೆ ಕಂಪನಿಯು ರೂ 2999 ಬೆಲೆಯ ಎಲ್ಲಾ ಪ್ರಯೋಜನಗಳನ್ನು ನೀಡುತ್ತಿದೆ ಆದರೆ ಒಂದೇ ವ್ಯತ್ಯಾಸವೆಂದರೆ ಈ ಯೋಜನೆಯು ಅದರ ಬಳಕೆದಾರರಿಗೆ ಕೇವಲ 30 ದಿನಗಳ ಮಾನ್ಯತೆಯನ್ನು ಮಾತ್ರ ನೀಡುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :