ಕಡಿಮೆ ಬೆಲೆಗೆ ಅನಿಯಮಿತ ಕರೆ ಬೇಕಾ? 90 ದಿನಗಳ ವ್ಯಾಲಿಡಿಟಿ ಮತ್ತು SMS ಉಚಿತದ BSNL ಯೋಜನೆ

ಕಡಿಮೆ ಬೆಲೆಗೆ ಅನಿಯಮಿತ ಕರೆ ಬೇಕಾ? 90 ದಿನಗಳ ವ್ಯಾಲಿಡಿಟಿ ಮತ್ತು SMS ಉಚಿತದ BSNL ಯೋಜನೆ
HIGHLIGHTS

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ವಿವಿಧ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ.

ಕೈಗೆಟುಕುವ ಬೆಲೆಯಲ್ಲಿ ವಿವಿಧ ಯೋಜನೆಗಳನ್ನು ನೀಡುವ ಮೂಲಕವೇ BSNL ಹೆಸರುವಾಸಿಯಾಗಿದೆ.

ಈ BSNL 439 ಪ್ರಿಪೇಯ್ಡ್ ಯೋಜನೆಯಲ್ಲಿ ಯಾವ ಯಾವ ಅನುಕೂಲಗಳಿವೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಭಾರತದಲ್ಲಿನ ಸರ್ಕಾರಿ ಸ್ವಾಮ್ಯದ ಟೆಲಿಕಮ್ಯುನಿಕೇಷನ್ಸ್ ಕಂಪನಿಯು ತನ್ನ ಗ್ರಾಹಕರ ಅಗತ್ಯಗಳಿಗೆ ಅನುಸಾರವಾಗಿ ವಿವಿಧ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ. ಕೈಗೆಟುಕುವ ಬೆಲೆಯಲ್ಲಿ ವಿವಿಧ ಯೋಜನೆಗಳನ್ನು ನೀಡುವ ಮೂಲಕವೇ BSNL ಹೆಸರುವಾಸಿಯಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಬಳಕೆದಾರರಿಗೆ BSNL ಯೋಜನೆ ಒಂದು ಜನಪ್ರಿಯ ಆಯ್ಕೆಯಾಗಿದೆ. ನೀವು ಆಡಿಯೋ ಕರೆಗಳಿಗೆಂದೆ BSNL ನಲ್ಲಿ  ಯಾವುದಾದರೂ ಯೋಜನೆಯನ್ನು ಹುಡುಕುತ್ತಿದ್ದರೆ ಇದರಲ್ಲಿ ನಿಮಗೆ 90 ದಿನಗಳ ಆಡಿಯೋ ಕರೆ ಪ್ರಿಪೇಯ್ಡ್ ಯೋಜನೆ ಒಂದು ಲಭ್ಯವಿದೆ.

BSNL 439 ರೂಗಳ ಪ್ರಿಪೇಯ್ಡ್ ಯೋಜನೆ 

ನೀವು ಅತಿ ಹೆಚ್ಚಾಗಿ ಮಾತನಾಡುವವರಾಗಿದ್ದರೆ ಈ ಲೇಖನ ನಿಮಗಾಗಲಿದೆ. ಯಾಕೆಂದ್ರೆ ಕೇವಲ ಆಡಿಯೋ ಕರೆಗಳ ಪ್ರಯೋಜನವಾಗಿದ್ದರೆ ಬಿಎಸ್‌ಎನ್‌ಎಲ್‌ನ 439 ರೂಗಳ ಪ್ರಿಪೇಯ್ಡ್ ಯೋಜನೆಯು ನಿಮಗೆ ಅತ್ಯುತ್ತಮ ರೀಚಾರ್ಜ್ ಆಯ್ಕೆಯಾಗಿದೆ. ಬಿಎಸ್‌ಎನ್‌ಎಲ್‌ನ 439 ರೂಗಳ ಪ್ರಿಪೇಯ್ಡ್ ಯೋಜನೆಯು ಗ್ರಾಹಕರಿಗೆ ಮುಂಬೈ ಮತ್ತು ದೆಹಲಿಯಲ್ಲಿ MTNL ನೆಟ್‌ವರ್ಕ್ ಸೇರಿದಂತೆ ಸ್ಥಳೀಯ STD, ಆಂತರಿಕ ಮತ್ತು ರಾಷ್ಟ್ರೀಯ ರೋಮಿಂಗ್‌ನೊಂದಿಗೆ ಅನ್‌ಲಿಮಿಟೆಡ್ ಆಡಿಯೋ ಕರೆಗಳ ಪ್ರಯೋಜನವನ್ನು ನೀಡುತ್ತದೆ.

 

ದೀಪಾವಳಿ ಕೊಡುಗೆಯ BSNL ಯೋಜನೆ 

ಹೆಚ್ಚುವರಿಯಾಗಿ ಈ ಯೋಜನೆ ಮೊಬೈಲ್ ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ 300 SMS ಅನ್ನು ಸಹ ಒದಗಿಸುತ್ತದೆ. ಕಳೆದ ವರ್ಷ ದೀಪಾವಳಿ ಕೊಡುಗೆಯ ಭಾಗವಾಗಿ ಬಿಎಸ್‌ಎನ್‌ಎಲ್‌ನ 439 ರೂಗಳ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಲಾಯಿತು. ಈ ಯೋಜನೆಯಲ್ಲಿ BSNL ಗ್ರಾಹಕರು ಸುಮಾರು 146 ರೂಗಳಿಗೆ ಪೂರ್ತಿ 90 ದಿನಗಳವರೆಗೆ ಅನ್ಲಿಮಿಟೆಡ್ ಆಡಿಯೋ ಕರೆಯ ಪ್ರಯೋಜನವನ್ನು ಪಡೆಯಬಹುದು. ಇದು ದಿನಕ್ಕೆ ಸುಮಾರು ರೂ 4.80 ವೆಚ್ಚವಾಗುತ್ತದೆ. ಗ್ರಾಹಕರು BSNL ಈ ಯೋಜನೆ ಅಡಿಯಲ್ಲಿ ಎರಡನೇ ಬಾರಿ ರೀಚಾರ್ಜ್ ಮಾಡಿದರೆ ಯಾವುದೇ ಬಳಕೆಯಾಗದ ವ್ಯಾಲಿಡಿಟಿಯನ್ನು ಸಂಗ್ರಹಿಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo