BSNL Plan 2023: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಪ್ರತಿಯೊಬ್ಬ ಬಳಕೆದಾರರಿಗೆ ಮತ್ತು ಅವರ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಯೋಜನೆಗಳನ್ನು ಹೊಂದಿದೆ. ಇದರ ಜೊತೆಗೆ BSNL TCS ನೇತೃತ್ವದ ಒಕ್ಕೂಟದೊಂದಿಗೆ 4G ಅನ್ನು ಪ್ರಾರಂಭಿಸಲು ಕಾರ್ಯ ನಿರ್ವಹಿಸುತ್ತಿದೆ. BSNL 4G ಈಗಾಗಲೇ ಆಯ್ದ ಪ್ರದೇಶಗಳಲ್ಲಿ ಲಭ್ಯವಿದ್ದು ನೀವು ಅವರಲ್ಲಿ ಒಬ್ಬರಾಗಿದ್ದರೆ ಕೆಲವು ಅತ್ಯುತ್ತಮ BSNL ಡೇಟಾ ಪ್ಯಾಕೇಜ್‌ಗಳ ಲಾಭವನ್ನು ಈಗ ನೀವು ಪಡೆಯಬಹುದು. ಈ ಯೋಜನೆ 365 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ. BSNL ನ ಈ ಯೋಜನೆ ಬಗೆಗಿನ ಫುಲ್ ಡಿಟೈಸ್ಸ್ ಇಲ್ಲಿದೆ ನೋಡಿ.
BSNL ರೂ 1515 ಪ್ರಿಪೇಯ್ಡ್ ಯೋಜನೆಯು ಬಳಕೆದಾರರಿಗೆ 365 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ದೈನಂದಿನ ಡೇಟಾ ಮಿತಿಯನ್ನು ತಲುಪಿದ ನಂತರ BSNL ನ ಗ್ರಾಹಕರು 40Kbps ವೇಗದಲ್ಲಿ ಅನ್‌ಲಿಮಿಟೆಡ್ ಡೇಟಾವನ್ನು ಪ್ರವೇಶಿಸಬಹುದು. ಆದ್ದರಿಂದ ನಿಮ್ಮ ಎಲ್ಲಾ ಹೆಚ್ಚಿನ ವೇಗದ ಡೇಟಾವನ್ನು ಬಳಸಿದ ನಂತರವೂ ನೀವು ಇಮೇಲ್ ಅಥವಾ ಮೆಸೇಜ್ ಮಾಡಬಹುದು.
ದೀರ್ಘ ವ್ಯಾಲಿಡಿಟಿಯ ಡೇಟಾ ಮಾತ್ರಯಿರುವಂತಹ ಯೋಜನೆಯನ್ನು ನೀವು ಹುಡುಕುತ್ತಿದ್ದರೆ BSNL ನಿಮಗಾಗಿ ಅದ್ಭುತ ಯೋಜನೆಯನ್ನು ಹೊಂದಿದೆ. ನಾವು BSNL ನ 1515 ರೂ ಪ್ರಿಪೇಯ್ಡ್ ಯೋಜನೆ ಬಗ್ಗೆ ಮಾತನಾಡುತ್ತಿದ್ದೇವೆ. BSNL ನ ರೂ. 1515 ಯೋಜನೆಯು ಅನ್‌ಲಿಮಿಟೆಡ್ ಡೇಟಾವನ್ನು ನೀಡುತ್ತದೆ. ಹೆಚ್ಚಿನ ವೇಗದ ಡೇಟಾವನ್ನು ಪರಿಗಣಿಸಿದರೆ ವರ್ಷಕ್ಕೆ ಇದು ಒಟ್ಟು 730GB ಡೇಟಾವನ್ನು ಒದಗಿಸುತ್ತದೆ. ಅಂದರೆ ಪ್ರತಿ GB ಡೇಟಾದ ಬೆಲೆ ಸುಮಾರು 2 ರೂ ಆಗಿರುತ್ತದೆ.
ಹೆಚ್ಚುವರಿಯಾಗಿ ಗ್ರಾಹಕರು ಎರಡನೇ ಬಾರಿ ಈ ಯೋಜನೆಯನ್ನು ಬಳಸಿದರೆ ಬಳಕೆಯಾಗದ ಡೇಟಾ ಸಹ ಇದರಲ್ಲಿ ಸೇರಿಕೊಳ್ಳುತ್ತದೆ. ನೀವು BSNL ಡೇಟಾ ಮಾತ್ರಯಿರುವಂತಹ ಯೋಜನೆಗಾಗಿ ಹುಡುಕುತ್ತಿದ್ದರೆ ಈ ಪ್ಯಾಕೇಜ್ ಇಡೀ ವರ್ಷಕ್ಕೆ ಉಪಯುಕ್ತವಾಗಿರುತ್ತದೆ. ಹೆಚ್ಚಿನ ಟೆಲಿಕಾಂ ವಲಯಗಳಲ್ಲಿ ಈ ಯೋಜನೆ ಲಭ್ಯವಿದೆ. ಇಲ್ಲಿ ಕೆಲವು ಯೋಜನೆಗಳು ನಿರ್ದಿಷ್ಟ ವಲಯವಾಗಿರಬಹುದು. ಆದ್ದರಿಂದ BSNL ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ಇದನ್ನು ನೀವು ಪರಿಶೀಲಿಸಬಹುದು.