ಭಾರತದ ಸರ್ಕಾರಿ ಟೆಲಿಕಾಂ ಕಂಪನಿ BSNL ಬಳಕೆದಾರರಿಗೆ ಹೊಚ್ಚ ಹೊಸ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಗಳ ಮೂಲಕ ಕಂಪನಿಯು ತನ್ನ ಚಂದಾದಾರರ ಸಂಖ್ಯೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಕಂಪನಿಯು ಈಗ ಗೂಗಲ್ ನೆಸ್ಟ್ ಮಿನಿ ಅನ್ನು ತನ್ನ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ 9999 ರೂಗಳ ಗೂಗಲ್ ನೆಸ್ಟ್ ಹಬ್ ಅನ್ನು ತಿಂಗಳಿಗೆ 199 ರೂಗನ್ನು ಕಟ್ಟಿ ಪಡೆಯುವ ಸುವರ್ಣವಕಾಶ ನೀಡುತ್ತಿದೆ. ಈ ಭರ್ಜರಿ ಆಫರ್ 18ನೇ ಫೆಬ್ರವರಿ ರಿಂದ ಮುಂದಿನ 90 ದಿನಗಳವರೆಗೆ ಮಾನ್ಯವಾಗಿರುತ್ತದೆ.
ಈ ನೆಸ್ಟ್ ಹಬ್ ಬೆಲೆ ಇಂದಿನ ಬೆಲೆ ಗೂಗಲ್ ನೆಸ್ಟ್ ಮಿನಿ ಅನ್ನು 2019 ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು ಇದರ ಆರಂಭಿಕ ಬೆಲೆ 4,499 ರೂಗಳಾಗಿವೆ. ಪ್ರಸ್ತುತ ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 3,999 ರೂಗಳ ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದೆ. ಅದೇ ಸಮಯದಲ್ಲಿ ನೀವು ಗೂಗಲ್ ನೆಸ್ಟ್ ಹಬ್ ಬಗ್ಗೆ ಮಾತನಾಡಿದರೆ ಅದರ ಆರಂಭಿಕ ಬೆಲೆ 9,999 ರೂಗಳಾಗಿವೆ ಆದರೆ ಅದನ್ನು ಫ್ಲಿಪ್‌ಕಾರ್ಟ್‌ನಿಂದ 8,999 ರೂಗಳಿಗೆ ಖರೀದಿಸಬಹುದು.
ಈ ಡಿವೈಸ್ಗಳೊಂದಿಗೆ ವಾರ್ಷಿಕ ಯೋಜನೆಗೆ ಚಂದಾದಾರರಾದಾಗ ಆಫರ್ ಲಭ್ಯವಿರುತ್ತದೆ. BSNL ಕೊಡುಗೆಯಲ್ಲಿ ನೀವು ಈ ಎರಡೂ ಗೂಗಲ್ ಪ್ರಾಡಕ್ಟ್ಗಳನ್ನು ಆಕರ್ಷಕ EMIಗಳಲ್ಲಿ ಖರೀದಿಸಬಹುದು. BSNL ಬ್ರಾಡ್ಬ್ಯಾಂಡ್ನ ಬಳಕೆದಾರರು ವಾರ್ಷಿಕ 799 ರೂಗಳು ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಯ ಚಂದಾದಾರಿಕೆಯನ್ನು ತೆಗೆದುಕೊಳ್ಳುವವರು ಈ ಕೊಡುಗೆಯ ಲಾಭವನ್ನು ಪಡೆಯುತ್ತಾರೆ. ಎರಡನೇ ತಲೆಮಾರಿನ ಸ್ಮಾರ್ಟ್ ಸ್ಪೀಕರ್ ಗೂಗಲ್ ನೆಸ್ಟ್ ಮಿನಿ ಪಡೆಯಲು ಬಳಕೆದಾರರು ಒಂದು ಬಾರಿ ಬಳಕೆಯ ಶುಲ್ಕವನ್ನು 1287 ರೂಗಳನ್ನು ಪಾವತಿಸಬೇಕು.
ಅಲ್ಲದೆ ಇದರ ಮತ್ತಷ್ಟು ಹೆಚ್ಚಿನ ಮಾಹಿತಿಗಾಗಿ BSNL ಕಸ್ಟಮರ್ ಕೇರ್ಗೆ ಒಮ್ಮೆ ಕರೆ ಮಾಡಿ ಖಚಿತಪಡಿಸುದು ಉತ್ತಮ. ಅದೇ ಸಮಯದಲ್ಲಿ ಈ ಕೊಡುಗೆಯಲ್ಲಿ ನೀವು ಗೂಗಲ್ ನೆಸ್ಟ್ ಹಬ್ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ನೀವು 2,587 ರೂಗಳನ್ನು ಒಂದು ಬಾರಿ ಪಾವತಿ ಮಾಡಬೇಕಾಗುತ್ತದೆ. ಗೂಗಲ್ ನೆಸ್ಟ್ ಹಬ್ ಸ್ಮಾರ್ಟ್ ಡಿಸ್ಪ್ಲೇ ಸ್ಪೀಕರ್ ಆಗಿದ್ದು ಇದು 7 ಇಂಚಿನ ಟಚ್‌ಸ್ಕ್ರೀನ್ ಪ್ಯಾನಲ್ ಮತ್ತು ಮುಂಭಾಗದಲ್ಲಿ ಇಕ್ಯೂ ಲೈಟ್ ಸೆನ್ಸರ್, ಎರಡು ದೂರದ-ಕ್ಷೇತ್ರ ಮೈಕ್ರೊಫೋನ್ ಮತ್ತು ಪೂರ್ಣ ಶ್ರೇಣಿಯ ಬ್ಯಾಕ್ ಸ್ಪೀಕರ್ ಹೊಂದಿದೆ.